ತುಮಕೂರು: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡಿರುವ “ಕನ್ನಡ ನಡೆ ಶಾಲಾ ಕಾಲೇಜು ಕಡೆ” ಸಾಹಿತ್ಯ ದೀವಿಗೆ ಸಾಪ್ತಾಹಿಕ ೫ನೇ ಕಾರ್ಯಕ್ರಮ ತುಮಕೂರು ಕಸಬಾ, ಸಿದ್ಧಾರ್ಥನಗರದ, ಸಿದ್ಧಾರ್ಥ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಕುವೆಂಪುರವರ ಬಗ್ಗೆ ಕವಿ, ವಿದ್ವಾಂಸರಾದ ಮಹದೇವಯ್ಯ ಚಿಕ್ಕನಾರವಂಗಲರವರು ಮಾತನಾಡುತ್ತಾ ಕುವೆಂಪುರವರು ಪ್ರೌಢಶಾಲೆಯವರೆಗೆ ವಿಜ್ಞಾನ ವಿಷಯವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೂ, ತಮ್ಮ ಗುರುಗಳ ಪ್ರೇರಣೆಯಿಂದ ಕನ್ನಡ ಎಂ.ಎ., ಓದಿ ಕನ್ನಡ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಏರಿಸಿದ ಅಗ್ರಮಾನ್ಯ ಕವಿಗಳು ಕುವೆಂಪುರವರು.
ಚಿಕ್ಕಂದಿನಿಂದಲು ಕೆಲವು ನಿರ್ಧಿಷ್ಟ ತತ್ವಗಳನ್ನು ಪಾಲಿಸಿಕೊಂಡು ಬಂದವರು. ತಾತ್ವಿಕ ಧೋರಣೆಗಳಿಗೂ ಬದುಕಿನ ಇರುವ ವಿಭಿನ್ನತೆ ಕುವೆಂಪುರವರಲ್ಲಿದ್ದಂತಹ ವೈಶಿಷ್ಠ್ಯತೆ ಇವರ ಮಾತು ಕೃತಿ ಒಂದೇ ಆಗಿತ್ತು. ಜೀವನದ ಮೌಲ್ಯಗಳನ್ನು ತರದ ಮನಸ್ಸಿನಿಂದ ಸ್ವಾಗತಿಸುತ್ತಿದ್ದರು. ಕನ್ನವೆಂದರೆ ಕುವೆಂಪು, ಕುವೆಂಪು ಎಂದರೆ ಕನ್ನಡ ಎಂಬಂತೆ ಇವರ ವೃತ್ತಿ ಸೇವೆ, ಸಾಹಿತ್ಯ ಸೇವೆ, ಜನಸಾಮಾನ್ಯರ ಅಪಾರ ಪ್ರೀತಿ, ಪ್ರಕೃತಿ ಬಗ್ಗೆ ಇದ್ದ ಒಲವು ದೇವರು ಧರ್ಮ ಹೀಗೆ ಇವರ ಬಗ್ಗೆ ಅನೇಕ ವಿಚಾರಧಾರೆಯನ್ನು ಮಕ್ಕಳಿಗೆ ತಮ್ಮದೇ ಭಾವನಾತ್ಮಕ ಮಾತುಗಳಿಂದ ವರ್ಣಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚಿಕ್ಕಬೆಳ್ಳಾವಿ ಶಿವಕುಮಾರ್ ಆಶಯ ನುಡಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ಧೇಶಗಳನ್ನು ತಿಳಿಸುತ್ತಾ, ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಕಡಿಮೆಯಾಗಿ ಪರಭಾಷೆಗಳ ವ್ಯಾಮೋಹ ಜಾಸ್ತಿಯಾಗಿದೆ. ಆದ್ದರಿಂದ ನಮ್ಮ ಮಾತೃಭಾಷೆ, ಕರುಳಿನ ಭಾಷೆ, ಹೃದಯ ಭಾಷೆಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡವನ್ನು ಓದುವುದರಿಂದ ಬಳಸುವುದರಿಂದ ಭಾಷೆ ಉಳಿಯುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಶಶಿಕುಮಾರ್ ಕನ್ನಡ ಗೀತೆಗಳನ್ನು ಹಾಡಿದರು. ಮಿಮಿಕ್ರಿ ಈಶ್ವರಯ್ಯ ಹಾಸ್ಯ ಮತ್ತು ಕೆಲವು ಪ್ರಾಣಿಗಳ ಮಿಮಿಕ್ರಿ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ವೇದಮೂರ್ತಿ ವಹಿಸಿದ್ದರು. ಶಾಲಾ ಶಿಕ್ಷಕರುಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ಮೂರು ಜನ ವಿದ್ಯಾರ್ಥಿಗಳನ್ನು ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296