ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದ ಕೆಂಪಯ್ಯ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ವೋದಯ ಮಂಡಲ ತುಮಕೂರು ಸರ್ವೋದಯ ಮಂಡಲ ಹಾಗೂ ತುರುವೇಕೆರೆ ಸರ್ವೋದಯ ಮಂಡಲ ಮತ್ತು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಕಾರ್ಗಿಲ್ ವಿಜಯ ದಿವಸ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚುಂಚನಗಿರಿ ಶಾಖಮಠದ ಶ್ರೀಗಳಾದ ಶ್ರೀ ಶ್ರೀ ಪ್ರಸನ್ನಾನಂದ ನಾಥ ಸ್ವಾಮೀಜಿ ವಹಿಸಿದ್ದರು . ಸ್ವಾತಂತ್ರ ಅವಲೋಕನವನ್ನು ವಿಶ್ವರಾಧ್ಯರು ಅವಲೋಕಿಸಿದರು.
ನಿರೂಪಣೆಯನ್ನು ರೂಪಶ್ರೀ ನೆರವೇರಿಸಿದ್ದು , ವಿಶೇಷ ಉಪನ್ಯಾಸವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಸಿ.ಎನ್. ನಂಜುಂಡಪ್ಪನವರು ನೀಡಿದರು. ಉದ್ಘಾಟನೆಯನ್ನು ಜಮ್ಮು ಕಾಶ್ಮೀರ ವಲಯದ ಬಿ ಎಸ್ ಎಫ್ ಯೋಧರಾದ ಯೋಗಾನಂದ ಸ್ವಾಮಿ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುರುವೇಕೆರೆ ಸರ್ವೋದಯ ಮಂಡಲ ಅಧ್ಯಕ್ಷ ಡಿ.ಪಿ.ವೇಣುಗೋಪಾಲ್ ವಹಿಸಿದ್ದು, ಪ್ರಾಸ್ತಾವಿಕ ನುಡಿಯನ್ನು ತುರುವೇಕೆರೆ ಸರ್ವೋದಯ ಮಂಡಲದ ಹೆಚ್ ಎನ್ ಕೃಷ್ಣಮೂರ್ತಿ ನುಡಿದರು.,
ಇದೆ ಸಂದರ್ಭದಲ್ಲಿ ಸ್ವಾತಂತ್ರ ಹೋರಾಟಗಾರರಾದ ಬಿ ಲಿಂಗಪ್ಪ , ಲಕ್ಷ್ಮಮ್ಮ ಸ್ವತಂತ್ರ ನರಸಿಂಹಯ್ಯ, ಪಾರ್ವತಮ್ಮ ಎಂ ಎನ್ ರಾಮಣ್ಣ , ಬಿ ಎಂ ಡಿ ಮುನಾಬ್ ಸಾಬ್ , ಕೆಂಪಯ್ಯ , ಸಾಹಿತಿಗಳಾದ ಕೆ ಭೈರಪ್ಪ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಡಿ.ಪಿ.ರಾಜು, ಮಾಯಸಂದ್ರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪಿ.ಎನ್. ಜವರೇಗೌಡ, ಎಸ್ ಬಿ ಎಂ ಸಿ ಅಧ್ಯಕ್ಷರಾದ ಕರಿಬಸವಯ್ಯ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಲಿಂಗೇಗೌಡ, ನೆಹರು ವಿದ್ಯಾ ಶಾಲೆಯ ಮುಖ್ಯೋಪಾಧ್ಯಾಯರಾದ ಪುಟ್ಟ ಚೆನ್ನೇಗೌಡ ಈ ಎಸ್, ನಿವೃತ್ತ ಮುಖ್ಯ ಶಿಕ್ಷಕರಾದ ವಿ ಎಂ .ಅಶೋಕ್, ತುರುವೇಕೆರೆ ಸರ್ವೋದಯ ಮಂಡಲದ ಖಜಾಂಚಿ ವಿನೋದ ಚಂದ್ರ, ಪತ್ರಕರ್ತರಾದ ಸಚಿನ್ , ಲವ, ಹೊಣಕೆರೆ ದರ್ಶನ್ , ಚಿಕ್ಕಪುರ, ಚೇತನ್ , ಪೃಥ್ವಿರಾಜ್, ಸುಬ್ರಹ್ಮಣ್ಯ ಬಲರಾಮೇಗೌಡ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು, ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz