ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ವಾರದಿಂದ ವಾರಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ನಡುವೆ ಬಿಗ್ ಬಾಸ್ ನಿಂದ ಔಟ್ ಆಗಿದ್ದ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಅತಿಥಿಗಳಾಗಿ ಬಂದ ಬಳಿಕ ಮನೆಯೊಳಗೆ ಅಲ್ಲೋಲಕಲ್ಲೋಲ ಸೃಷ್ಠಿಯಾಗಿದೆ.
ಬಿಗ್ ಬಾಸ್ ಸ್ಪರ್ಧಿ ನಮೃತಾ ಹಾಗೂ ಕಾರ್ತಿಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಟ್ರೋಲ್ ಗಳು ಸಾಕಷ್ಟು ಹರಿದಾಡುತ್ತಿವೆ. ಕಾರ್ತಿಕ್ ನ ಸ್ವಲ್ಪ ಅತಿಯಾಯ್ತು ಅನ್ನೋ ಮಟ್ಟದ ವರ್ತನೆ ನಮ್ರತಾಳಿಗೆ ನೆಗೆಟಿವ್ ಆಗಿ ಪರಿಣಮಿಸಿದೆ. ಈ ವಿಚಾರವನ್ನು ಮನೆಯೊಳಗೆ ಎಂಟ್ರಿಕೊಟ್ಟಿದ್ದ ಸ್ನೇಹಿತ್ ಪರೋಕ್ಷವಾಗಿ ನಮೃತಾಗೆ ತಿಳಿಸಿದ್ದು, ಇದರಿಂದಾಗಿ ನಮೃತಾ ಕಣ್ಣೀರು ಹಾಕಿ, ಗಳಗಳನೇ ಅತ್ತಿದ್ದಾರೆ.
ಇಶಾನಿ ಹಾಗೂ ಮೈಕಲ್ ಕೂಡ ಕಾರ್ತಿಕ್ ಜೊತೆಗೆ ಹೆಚ್ಚು ಸಮಯ ಕಳೆಯ ಬೇಡ, ಅದು ಹೊರಗಡೆ ನೆಗೆಟಿವ್ ಆಗಿ ಕಾಣಿಸ್ತಾ ಇದೆ ಅಂತ ನಮೃತಾಗೆ ಹೇಳಿದ್ದಾರೆ.
ನಮೃತಾ ಹಾಗೂ ಕಾರ್ತಿಕ್ ನ ಸಲುಗೆ ಸ್ನೇಹಿತ್ ಗೆ ತೀವ್ರ ಆಕ್ರೋಶ ಉಂಟು ಮಾಡಿದ್ದರೂ, ನಾನು ಈಗ ನಿಮಗೆ ಏನೂ ಹೇಳಲ್ಲ, ಹೊರಗೆ ಬಂದ ಮೇಲೆ ನಿಮಗೆ ಎಲ್ಲಾ ಅರ್ಥ ವಾಗುತ್ತದೆ ಎಂದು ಹೇಳಿದ್ದಾರೆ.
ಸ್ನೇಹಿತರ ಅಭಿಪ್ರಾಯ ಕೇಳಿ, ಹೊರಗೆ ನನ್ನ ಕ್ಯಾರೆಕ್ಟರ್ ಬಗ್ಗೆ ನೆಗೆಟಿವ್ ಆಗಿದ್ಯಾ ಅಂತ ನಮೃತಾ ಗಳಗಳನೇ ಅತ್ತಿದ್ದಾರೆ. ಅಲ್ಲದೇ, ಹೊರಗಡೆ ಕಾರ್ತಿಕ್ ಗೆ ಗರ್ಲ್ ಫ್ರೆಂಡ್ ಇದ್ದಾಳೆ, ಹೀಗಿರುವಾಗ ನಾನ್ಯಾಕೆ ಅವರಿಗೆ ಬೀಳಲಿ ಎಂದು ಪ್ರಶ್ನೆ ಮಾಡಿ ಕಣ್ಣೀರು ಹಾಕಿದ್ದಾರೆ.
ಶಾಂತವಾಗಿದ್ದ ಮನೆಯೊಳಗೆ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಎಂಟ್ರಿಕೊಡುತ್ತಿದ್ದಂತೆಯೇ ಮನೆಯೊಳಗಿರುವ ಸ್ಪರ್ಧಿಗಳಲ್ಲಿ ಗೊಂದಲ ಮೂಡಿದೆ. ಸ್ಪರ್ಧಿಗಳ ಮನಸ್ಸನ್ನು ಹಾಳು ಮಾಡುವ ಪ್ರಯತ್ನ ಮಾಡಲೆಂದೇ ಹಳೆಯ ಸ್ಪರ್ಧಿಗಳನ್ನು ಬಿಗ್ ಬಾಸ್ ಒಳಗೆ ಬಿಟ್ಟಿದೆಯೇ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ.