ತಿಪಟೂರು: ತಾಲ್ಲೂಕಿನ ಬಳ್ಳೆಕಟ್ಟೆ ಗ್ರಾಮದ ರೈತ ಕವಿ ಪಿ.ಶಂಕ್ರಪ್ಪ ಅವರಿಗೆ ವಿದ್ಯಾ ವಿಭೂಷಣ ಹಾಗೂ ರಾಜ್ಯ ಮಟ್ಟದ ರೈತ ಕೃಷಿ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ತಾಲೂಕು ಮಧುಗಿರಿ ವತಿಯಿಂದ ವಿಶೇಷ ಅತಿಥಿಯಾಗಿ ಆಹ್ವಾನಿಸಿ ಗೌರವಿಸಿ ಸನ್ಮಾನಿಸಲಾಯಿತು
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ರೈತ ಕವಿ ಪಿ.ಶಂಕ್ರಪ್ಪ ಬಳ್ಳೆಕಟ್ಟೆ ಅವರು, ಗ್ರಾಮ ಪಂಚಾಯಿತಿ ಗ್ರಂಥಾಲಯಗಳು, ಗ್ರಾಮೀಣ ಭಾಗದ ಜನಸಾಮಾನ್ಯರದೇವರ ದೇವಾಲಯಗಳು ಬಡಮಕ್ಕಳ ಸೌಭಾಗ್ಯ ಜ್ಞಾನ ನಿಧಿಗಳಾಗಿಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಗ್ರಾಮೀಣ ಭಾಗದ ಗ್ರಂಥಾಲಯಗಳನ್ನು ಡಿಜಿಟಲೀಕರಣ ಗೋಳಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು ಹಾಗೂ ಸಂಘ-ಸಂಸ್ಥೆಗಳು ಜೇನುಗೂಡಿನಂತೆ ಒಗ್ಗೂಡಿ ಕೆಲಸ ಮಾಡಿದರೆ ಫಲಜಗಕರ್ಪಿತವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಪದಾಧಿಕಾರಿಗಳಾದ ಬಾಲ್ಯ ಗಂಗಾಧರ್, ಸಿರಿವಾರ ಶಿವಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಸಾವಿತ್ರಮ್ಮ, ನಿಕಟಪೂರ್ವಅಧ್ಯಕ್ಷರಾದ ನಟರಾಜ್, ನೂತನ ತಾಲೂಕು ಅಧ್ಯಕ್ಷರಾದ ಹನುಮಂತರಾಜು, ಉಪಾಧ್ಯಕ್ಷರಾದ ಅನಿತಾ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ, ಶಿವಣ್ಣ, ಕಮಲ, ರಂಗಮ್ಮ ಮಮತಾ ಸೇರಿದಂತೆ ಸಂಘದ ಪದಾಧಿಕಾರಿಗಳುಪ್ರಮುಖರು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy