ಚಿತ್ರದುರ್ಗ: ಕುಷ್ಟರೋಗ ಪ್ರಕರಣ ನಿವಾರಣೆಯ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಆರೋಗ್ಯ ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕಿ ಡಾಕ್ಟರ್ ರೇಖಾ ಎಸ್. ಆರೋಗ್ಯ ಕಾರ್ಯಕರ್ತರು ಕುಷ್ಠರೋಗ ಪತ್ತೆ ಕಾರ್ಯ ಮಾಡಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು.
ಗೋನೂರು ಗ್ರಾಮದ ಮನೆ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತರು ಆಗಮಿಸಿ ಕುಷ್ಟರೋಗದ ಬಗ್ಗೆ ಮಾಹಿತಿ ನೀಡಿದ್ದಾರೆಯೇ ಎಂದು ರೇಖಾ ಪರಿಶೀಲನೆ ನಡೆಸಿದರು. 2025ರ ವೇಳೆಗೆ ಕುಷ್ಟರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರತಿ ವರ್ಷವೂ ನಿಯಂತ್ರಣಕ್ಕೆ ತರುವ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದು, 18 ದಿನಗಳ ಕಾಲ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಕುಷ್ಟರೋಗ ಪತ್ತೆ ಹಚ್ಚುವ ಕಾರ್ಯ ನಡೆದಿದೆ.
ಪರಿಶೀಲನೆ ಕಾರ್ಯಕ್ಕೆ ಅಧಿಕಾರಿಗಳು ಆರೋಗ್ಯ ಕಾರ್ಯಕರ್ತರು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಸಾಥ್ ನೀಡಿದರು.
ಈ ವೇಳೆ ಡಿ.ಎಲ್.ಒ. ಡಾ.ರೂಪ ಆರ್. ಡಿ. ಎನ್. ಟಿ., ತಂಡದ ಎಂ. ಚಂದ್ರಪ್ಪ ವೈ. ತಿಪ್ಪೇಶ್, ರಾಜೇಂದ್ರ ಪ್ರಸಾದ್, ಕೆ. ಪಿ. ಎಂ. ಡಬ್ಲ್ಯೂ ತಂಡದ ಮಂಜುನಾಥ್, ಕಿರಣ್, ಓಂಕಾರ್ ಸ್ವಾಮಿ ಮತ್ತು ಬೆಳಗಟ್ಟ ಹಿರಿಯ ನಿರಕ್ಷಣಾಧಿಕಾರಿ ಮಹೇಶ್ ನಾಗೇಶ್ ಸುರಕ್ಷಾಧಿಕಾರಿ ಹೆಚ್. ಎಸ್. ವೀಣಾ ಸಿ., ಎಚ್. ಓ. ಮಂಜುಶ್ರೀ, ಆಶಾ ಕಾರ್ಯಕರ್ತಯರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.
ವರದಿ : ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz