ಸರಗೂರು: ಪುನೀತ್ ನಿಧನವು ನಮ್ಮ ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಂಡಂತೆ ಬಹಳ ನೋವಾಗುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಹೆಚ್ ಡಿ ಕೋಟೆ ತಾಲ್ಲೂಕಿನ ಪಟ್ಟಣದ ಕೃಷ್ಣಾಪುರ ಗ್ರಾಮದ ಯುವ ಸಮೂಹ ಆಯೋಜಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪುನೀತ್ ರಾಜ್‍ಕು ಮಾರ್ ಅವರ ಪುಣ್ಯ ಸ್ಮರಣಾರ್ಥವಾಗಿ ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಪುನೀತ್ ಅವರು ಮಾಡುತ್ತಿದ್ದ ಸೇವೆಯಂತೆ ನೊಂದ ಬಡಜನರಿಗೆ ನೇರವಾಗುವಂತೆ, ತಾಲೂಕಿನ ಎಲ್ಲಾ ಸರ್ವ ಜನಾಂಗದವರ ಜೊತೆಗೂಡಿ ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸ್ಥಾಯಿ ಸಮಿತಿಯ ಅದ್ಯಕ್ಷರಾದ. ಹೆಚ್.ಸಿ.ನರಸಿಂಹಮೂರ್ತಿ, ನಾಗನಹಳ್ಳಿ ಪ್ರದೀಪ್, ಪುರಸಭಾ ಸದಸ್ಯರಾದ ಮಧುಕುಮಾರ್, ದಿನೇಶ್, ಜೆಡಿಎಸ್ ಮುಖಂಡರಾದ ಶಿವಯ್ಯ, ಸೋಮುಪಟೇಲ್, ಯುವ ಮುಖಂಡರಾದ ವೆಂಕಿ ಕೋಟೆ , ಮಹೇಂದ್ರ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700