ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿ ಕೆಂಚನಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ನಂಜುಂಡಯ್ಯ 5,000 ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದು ಜೈಲು ಪಾಲಾಗಿದ್ದಾರೆ.
ಕುಂಟಯ್ಯನಪಾಳ್ಯ ಗ್ರಾಮದ ಗಂಗಾಧರ ಅವರ ತಂದೆ ಹೆಸರಿಂದ ಪಾವತಿ ಖಾತೆ ಮಾಡಿಕೊಡಲು 5,000 ಸಾವಿರ ರೂಪಾಯಿ ಲಂಚ ಕ್ಕೆ ಬೇಡಿಕೆ ಇಟ್ಟು ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ ನೇತೃತ್ವದ ಕಾರ್ಯಾಚರಣೆ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.
ಕಾರ್ಯಾಚರಣೆ ವೇಳೆ ಇನ್ಸ್ಪೆಕ್ಟರ್ ವೀರೇಂದ್ರ, ವಿಜಯಲಕ್ಷ್ಮಿ, ನರಸಿಂಹರಾಜು, ಶಿವಣ್ಣ , ಚಂದ್ರಶೇಖರ್, ರಾಜು, ಗಿರೀಶ್ ಕುಮಾರ್, ಯಶೋಧ, ರಮೇಶ್ ಇನ್ನಿತರರು ಇದ್ದರು
ವರದಿ: ಟೈಗರ್ ನಾಗ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5