ಕಲಬುರಗಿ: ಮಾಜಿ ಸಚಿವ ಸಿದ್ದಿಖಿ ಹತ್ಯೆ ದಿಗ್ಧಮೆ ಉಂಟು ಮಾಡಿದೆ. ಮಹಾರಾಷ್ಟ್ರದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ದಿನಗಳಿಂದ ಸಿದ್ದಿಖಿ ಹತ್ಯೆ ಸಂಚು ನಡೆದಿತ್ತು. ಇದು ಮಹಾರಾಷ್ಟ್ರ ಸರ್ಕಾರಕ್ಕೂ ಗೊತ್ತಿತ್ತು. ಆದರೂ, ತಡೆಯಲು ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಮಹಾರಾಷ್ಟ್ರದಲ್ಲಿ ಮೂರು ಸರಕಾರಗಳ ಹೇಳಿಕೆಗಳಿಂದ ಅಧಿಕಾರಿಗಳು ಗೊಂದಲಕ್ಕೆ ಬಿದ್ದ ಪರಿಣಾಮ ಇಂತಹ ಘಟನೆ ನಡೆದಿದೆ ಎಂದು ಖೇದ ವ್ಯಕ್ತಪಡಿಸಿದ ಅವರು, ಹಾಡುಹಗಲೇ ಕಚೇರಿಗೆ ನುಗ್ಗಿ ಶೂಟ್ ಮಾಡುತ್ತಾರೆಂದರೆ ಏನರ್ಥ ಎಂದು ಪ್ರಶ್ನಿಸಿದರು.
ಕಳೆದ 15 ದಿನಗಳಿಂದ ಹತ್ಯೆಗೆ ಸಂಚು ನಡೆದಿತ್ತು ಎಂದು ಅಧಿಕಾರಿಗಳಿಗೆ ಗೊತ್ತಿದೆ. ಅದಕ್ಕಾಗಿ ಅವರಿಗೆ ಭದ್ರತೆಯನ್ನು ನೀಡಲಾಗಿತ್ತು. ಆದರೂ, ಹತ್ಯೆಯಾಗಿರುವುದು ಸೂಜಿಗದ ಸಂಗತಿ ಎಂದರು.
ತಮ್ಮ ಸಾವಿನ ಕುರಿತು ಖುದ್ದು ಸಿದ್ದಿಖಿ ಹೇಳಿದ್ದರು. ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ. ಜೀವ ಉಳಿಯುತ್ತೋ ಇಲ್ಲವೋ ಎಂದು ಮುಂಬಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಆದರೂ ಕೂಡ ಸಿದ್ದಿಖಿ ಮಾತನ್ನು ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು ಎಂದು ಅವರು ಆರೋಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296