ಲಿಡ್ಕರ್ ಸಂಸ್ಥೆಯನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಡಾ.ಬಾಬುಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚರ್ಮ ಕರಕುಶಲಕರ್ಮಿಗಳ ಸಮಾವೇಶ ಹಾಗೂ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ಐದು ವರ್ಷಗಳಲ್ಲಿ ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ 237 ಕೋಟಿ ಅನುದಾನ ನೀಡಲಾಗಿದ್ದು, 33 ಸಾವಿರ ಉದ್ಯಮಿಗಳಿಗೆ ನೆರವಾಗಿದೆ ಎಂದರು. ಉತ್ತಮ ವಿನ್ಯಾಸದ ಪೀಠೋಪಕರಣ ತಯಾರಿಸುತ್ತಿದ್ದು, ಬ್ರಾಂಡ್‍ನಲ್ಲಿ ಮಾರಾಟ ಮಾಡಿದರೆ ಉತ್ತಮ ಬೆಲೆ ದೊರೆಯಲಿದೆ. ಫರ್ನಿಚರ್ಸ್ ಎವಗ್ರೀನ್ ಉದ್ಯಮವಾಗಿದೆ. ಈ ಕಡೆ ಗಮನಹರಿಸಬೇಕು ಎಂದರು.
ಈ ವರ್ಷ 25 ಕೋಟಿ ರೂ.ಅನುದಾನ ಒದಗಿಸಿದ್ದು, ಹೆಚ್ಚು ಜನರಿಗೆ ಉದ್ಯೋಗ ನೀಡುವುದಾದರೆ ಪೂರಕ ಅಂದಾಜಿನಲ್ಲಿ ಇನ್ನಷ್ಟು ಅನುದಾನ ಒದಗಿಸಲಾಗುವುದು ಎಂದರು. ತಾವು ಮಂಡಿಸಿದ 2.65ಕೋಟಿ ರೂ. ಮೊತ್ತದ ಬಜೆಟ್ ಪುಸ್ತಕ ಅತ್ಯಂತ ಸುರಕ್ಷಿತವಾಗಿದ್ದದ್ದು, ಲಿಡ್ಕರ್ ಸಂಸ್ಥೆಯ ತಯಾರಿಸಿದ ಬ್ಯಾಗ್‍ನಲ್ಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ತಾಲ್ಲೂಕಿನಲ್ಲಿ 100 ಮಂದಿಗೆ ಸ್ವ ಉದ್ಯೋಗ ನೀಡುವ ಹಮ್ಮಿಕೊಂಡಿದ್ದು ಇದರ ಪ್ರಯೋಜನ ಮಾಡಿಕೊಳ್ಳಬಹುದು.
ಭೂ ಖರೀದಿ ಮೊತ್ತವನ್ನು 15 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. 100 ಎಸ್ಸೆ ಎಸ್ಟಿ ಹಾಸೆಲ್‍ಗಳನ್ನು ನಿರ್ಮಾಣ ಮಾಡಲಿದ್ದು, ಶೈಕ್ಷಣಿಕವಾಗಿ ಅಭಿವೃದ್ದಿಯಾಗಿರುವ 5 ದೊಡ್ಡ ನಗರಗಳಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾಮಥ್ರ್ಯವಿರುವ ಕ್ಲಸ್ಟರ್ ಹಾಸ್ಟೆಲ್ ನಿರ್ಮಿಸಿ ಅದಕ್ಕೆ ದೀನದಯಾಳ್ ಉಪಾಧ್ಯಾಯ ಎಂಬ ಹೆಸರನ್ನು ಇಡಲಾಗುವುದು ಎಂದರು. ಸ್ವ ಉದ್ಯೋಗ ಮಾಡುವವರಿಗೆ ಬ್ಯಾಂಕ್ ಸಾಲ ಸುಲಭವಾಗಿ ದೊರೆಯಲು ಜಿಲ್ಲೆಗೊಂದು ಬ್ಯಾಂಕ್ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಜಲಸಂಪನ್ನೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, 21ನೇ ಶತಮಾನದ ಮಾರುಕಟ್ಟೆಯ ಪೈಪೋಟಿ ಎದುರಿಸಲು ಸಜ್ಜುಗೊಳ್ಳಬೇಕಾದ ಅಗತ್ಯವಿದ್ದು, ಅದಕ್ಕೆ ಪೂರಕವಾಗಿ ಚರ್ಮದ್ಯೋಗಿಗಳಿಗೆ ತರಬೇತಿ ನೀಡಲು ಹಾವೇರಿ ಮತ್ತು ಬಾಗಲಕೋಟೆಯಲ್ಲಿ ಲೆದರ್ ಕ್ಲಸರ್‍ನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ತರಬೇತಿ ಜೊತೆಗೆ ಉತ್ಪಾದನೆ ಮಾಡುವುದು ಆ ಉತ್ಪನ್ನವನ್ನು ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ಮಾರಾಟ ಮಾಡುವ ಉದ್ದೇಶವಿದೆ ಎಂದರು. ಸ್ವ ಉದ್ಯೋಗಕ್ಕೆ 10 ಲಕ್ಷ ರೂ.ಗಳವರೆಗೂ ಸಾಲಸೌಲಭ್ಯ ಪಡೆಯುವ ಅವಕಾಶವಿದ್ದು, ಇದರನ್ನು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದರು.ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, 56 ಸಾವಿರ ಕುಟುಂಬಗಳು ಚರ್ಮೋದ್ಯಮವನ್ನು ಅವಲಂಬಿಸಿವೆ. ಒಂದು ವಾರಗಳ ಕಾಲ ಚರ್ಮದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ. ಅಥಣಿ ಬ್ರಾಂಡ್ ಮೂಲಕ ಕೊಲ್ಲಾಪುರಿ ಚಪ್ಪಲಿಯನ್ನು ಮಾರಾಟ ಮಾಡಲಾಗುತ್ತಿದೆ.
ರಾಜ್ಯದ ಎಲ್ಲ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಸೂರು ಶಿಕ್ಷಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು. ಡಾ.ಬಾಬುಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ. ಎಂ.ಲಿಂಗಣ್ಣ ಮಾತನಾಡಿ, ತಂತ್ರಜ್ಞಾನ ಅಳವಡಿಕೆ ಮೂಲಕ ಚರ್ಮೋದ್ಯಮದಲ್ಲಿ ಬದಲಾವಣೆ ತಂದು ಸಮಸ್ಯೆ ಪರಿಹರಿಸಿಕೊಂಡು ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಿದರು.
ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ, ಪಾಂಡಿಚೇರಿ ಸಚಿವ ಸಾಯಿ ಶರವಣ, ಸಂಸದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ಎಂಸಿಎ ಅಧ್ಯಕ್ಷ ಮುನಿಕೃಷ್ಣ, ಎಸ್ಸಿ-ಎಸ್ಟಿ ಮತ್ತು ಪಿಎಸ್‍ಪಿಯ ನೋಡೆಲ್ ಏಜೆನ್ಸಿಯ ಸಲಹೆಗಾರ ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣನ್, ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿಯ ವ್ಯವಸ್ಥಾಪಕ ಡಾ.ಎಚ್.ನಟರಾಜ್ ಮತ್ತಿತರರು ಇದ್ದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


