ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಲೊಯೋಲ ಪದವಿ ಕಾಲೇಜಿನ ತೃತೀಯ ಬಿಎ ತರಗತಿಯ ವಿದ್ಯಾರ್ಥಿಯಾದ ಅರವಿಂದ್ ಎನ್.ಎಸ್, ‘ಕರಾಟೆ’ ಯಲ್ಲಿ ತೋರಿದ ಅಪ್ರತಿಮ ಸಾಧನೆಯನ್ನು ಗುರುತಿಸಿ, ಇವರನ್ನು ದಕ್ಷಿಣ ಭಾರತೀಯ ರೈಲ್ವೆ ಸೇವೆಗೆ ಆಯ್ಕೆ ಮಾಡಿಕೊಂಡಿದೆ.
ಅರವಿಂದ್, ಎನ್.ಎಸ್. ಕರಾಟೆಯಲ್ಲಿ ಒಂದು ನಿಮಿಷಕ್ಕೆ 340 ಪೂರ್ಣ ವಿಸ್ತರಣೆಯ ಪಂಚ್‌ಗಳಿಗಾಗಿ ‘ಇಂಟರ್ ನ್ಯಾಷನಲ್ ಬುಕ್ ರೆಕಾರ್ಡ್’ನ್ನು ಹೊಂದಿರುತ್ತಾರೆ. ಅಂತರ ಕಾಲೇಜಿನ ಕರಾಟೆ ಪಂದ್ಯದಲ್ಲಿ ಸ್ವರ್ಣಪದಕ, ಅಂತರ ವಿಶ್ವವಿದ್ಯಾಲಯ ಕರಾಟೆ ಪಂದ್ಯದಲ್ಲಿ ಕಂಚಿನ ಪದಕ ಮತ್ತು ಜೈನ್ ವಿಶ್ವವಿದ್ಯಾಲಯದಲ್ಲಿ ನಡೆದ ‘ಬೇಲೋ ಇಂಡಿಯಾ 2022ರ ಕರಾಟೆ ಪಂದ್ಯದಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ.
ಪ್ರಸ್ತುತ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕರಾಟೆ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಇವರ ಸಾಧನೆಯನ್ನು ಗಮನಿಸಿದ ದಕ್ಷಿಣ ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗದ ಅವಕಾಶವನ್ನು ನೀಡಿದೆ. ಅರವಿಂದ್ ಎನ್.ಎಸ್. ಅವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಸಹಪಾಠಿಗಳು ಸಂತಸವನ್ನು
ವ್ಯಕ್ತಪಡಿಸಿದ್ದಾರೆ.
ಪ್ರಾಂಶುಪಾಲರ ಮಾತು: ನಮ್ಮ ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ಮತ್ತು ಗುಣಾತ್ಮಕ ಬೆಳವಣಿಗೆಗಾಗಿ ಉತ್ತಮವಾದ ಸೌಲಭ್ಯಗಳನ್ನು, ಅವಕಾಶಗಳನ್ನು ನೀಡುತ್ತಿದೆ. ಅದರಲ್ಲೂ ವಿಶಾಲ ಮೈದಾನವನ್ನು ಹೊಂದಿರುವ ನಮ್ಮ ಕಾಲೇಜು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅರವಿಂದ್ ಎನ್.ಎಸ್. ಅವರ ಈ ಸಾಧನೆಗೆ ನಮ್ಮ ಕಾಲೇಜು ಹೆಮ್ಮೆ ಪಡುತ್ತದೆ. ಇವನ ಈ ಸಾಧನೆ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲೆಂದು ಬಯಸುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಫಾ. ಡಾ. ಅಲೋನ್ಸ್ ಫರ್ನಾಂಡಿಸ್ ಯೇಸು ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಲೊಯೋಲ ಪದವಿ ಕಾಲೇಜು: 2018-21ನೇ ಸಾಲಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಬಿಎ (ವೃತ್ತಿಪರ) ಪದವಿಯಲ್ಲಿ ಒಂದು ಚಿನ್ನದ ಪದಕ ಮತ್ತು ಐದು ಬ್ಯಾಂಕ್‌ಗಳನ್ನು ಗಳಿಸಿದೆ. ಕಾಲೇಜಿನ ಬಿಎ ಪದವಿಯ ತನು ಆರ್, ಮಾರ್ಟಿನ್ ಕುರಿಯ ಕೋಸ್, ಮೇಘನ ಎನ್ ವಿ. ಕೀರ್ತನಾ ಎಂ, ಕಾರ್ಮೆಲ್ ರಾಣಿ ಐವರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮೊದಲ ಐದು ಬ್ಯಾಂಕ್‌ಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಅಧ್ಯಾಪಕ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಾಂಶುಪಾಲರ ಮಾತು: ನಮ್ಮ ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ಮತ್ತು ಗುಣಾತ್ಮಕ ಬೆಳವಣಿಗೆಗಾಗಿ ಉತ್ತಮವಾದ ಸೌಲಭ್ಯಗಳನ್ನು, ಅವಕಾಶಗಳನ್ನು ನೀಡುತ್ತಿದೆ. ನಮ್ಮ ಕಾಲೇಜಿಗೆ ಈ ವರ್ಷ ಐದು ಬ್ಯಾಂಕುಗಳು ಬಂದಿರುವುದರಿಂದ ನಮ್ಮ ಹೊಸ ಯೋಜನೆಗಳಿಗೆ ಪ್ರೇರಣೆ ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಫಾ ಡಾ. ಆಲೋನ್ ಫರ್ನಾಂಡಿಸ್ ಯೇಸು ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy