ಮಿಡಿಗೇಶಿ: ಮಧುಗಿರಿ ತಾಲ್ಲೂಕು, ಮಿಡಿಗೇಶಿ ಹೋಬಳಿ, ನೇರಳೆಕೆರೆ (ಗೇಟು) ಅಂಗನವಾಡಿ ಕೇಂದ್ರದಲ್ಲಿ ಇಂದು ಪೋಷಣೆ ಮಾಸಾಚರಣೆ ಹಾಗೂ ಪೌಷ್ಠಿಕ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಮಾಸಾಚರಣೆಯ ಅಂಗವಾಗಿ ಫಲಾನುಭವಿ ಪವಿತ್ರ ಎನ್.ಎಸ್ w/o ಮೋಹನಕುಮಾರ್.ಆರ್ ರವರಿಗೆ ಗರ್ಭಿಣಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಯಶೋಧಾ, ಸಿಡಿಪಿಓ ಕುಮಾರ್ ನಾಯ್ಕ. ಎಸಿಡಿಪಿಓ ಕರಿಬಸಯ್ಯ ಹಾಗೂ ನಾಗಭೂಷಣ್ ಎನ್, ಮೇಲ್ವಿಚಾರಕಿ ಭಾರತಿ ಕೆ., ಪೋಷಣ್ ಸಂಯೋಜಕರು ತೇಜಸ್ವಿನಿ, ನೇರಳೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಭಾರ್ಗವ್, ಸಮುದಾಯ ಅಧಿಕಾರಿ ಬಸವರಾಜ್ ಅವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನೇರಳೆಕೆರೆ ಗ್ರಾಮಸ್ಥರು, ನೇರಳೆಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ರಂಟವಾಳ ಗ್ರಾಮ ಪಂಚಾಯತಿ ಮತ್ತು ಕೊಟಗಾರ ಹಳ್ಳಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಹಾಗೂ ನೇರಳೆಕೆರೆ ಅಂಗನವಾಡಿ ಕೇಂದ್ರದ ಫಲಾನುಭವಿಗಳು, ಅಂಗನವಾಡಿ ಮಕ್ಕಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
