ಸುಪ್ರೀಂ ಕೋರ್ಟ್ ತೀರ್ಪಿನಂತೆ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಣಯ ಮಾಡಬೇಕೆಂದು ತುಮಕೂರು ಜಿಲ್ಲೆಯ ಛಲವಾದಿ ಮಹಾಸಭಾ (ರಿ) ರಾಜ್ಯ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ.
ತುಮಕೂರು ಛಲವಾದಿ ಮಹಾಸಭಾ, ಪರಿಶಿಷ್ಟ ಜಾತಿಗಳೊಳಗಿನ ಎಕೆ, ಎಡಿಕೆ, ಎಎ ಎಂಬ ವರ್ಗಗಳಲ್ಲಿ ಜಾತಿಗಳ ಗೊಂದಲಗಳನ್ನು ಸರಿಪಡಿಸಿ, ನಿಖರವಾದ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿಯನ್ನು ನಿಶ್ಚಿತಗೊಳಿಸಬೇಕೆಂದು ತೀವ್ರ ಒತ್ತಾಯಿಸಿದೆ.
ಈ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದು, ಈ ವೇಳೆ ಪ್ರಮುಖ ಛಲವಾದಿ ಮುಖಂಡರು ಪಾಲ್ಗೊಂಡಿದ್ದರು.
ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಸಿ. ಭಾನು ಪ್ರಕಾಶ್ ಅವರು ಮಾತನಾಡಿ, “ಪ್ರತಿಯೊಂದು ಸಮುದಾಯದ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ನೀಡಬೇಕು. ಈ ಮೂಲಕ ಪರಿಶಿಷ್ಟ ಜಾತಿಗಳೊಳಗಿನ ಎಲ್ಲ ವರ್ಗಗಳಿಗೂ ಸಮಾನ ಅವಕಾಶಗಳು ಸಿಗುತ್ತವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತರ ಮುಖಂಡರಾದ ಛಲವಾದಿ ಶೇಖರ್, ರಾಜಣ್ಣ, ಪಿಪಿ ಹೆಚ್.ಎಸ್. ಪರಮೇಶ್ವರ್, ದೊಡ್ಡಸಿದ್ದಯ್ಯ, ಸಿದ್ದಲಿಂಗಯ್ಯ ಜಿ.ಸಿ., ನಾಗೇಶ್, ಹೆಗ್ಗೇರಿ ಕೃಷ್ಣಪ್ಪ ಮೊದಲಾದವರು ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296