ತುಮಕೂರು : ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರು ದಲಿತ ಸಿಎಂ ಕುರಿತಂತೆ ಮಹತ್ವದ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್, ರಾಹುಲ್ ಗಾಂಧಿ ನನಗೆ, ಏನಾಗಬೇಕು? ಎಂದು ಕೇಳಿದ್ದರು. ತಕ್ಷಣ ನಾನು ಸಿಎಂ ಆಗಬೇಕು ಎಂದು ಹೇಳಿದ್ದೆ. ಮಂತ್ರಿ ಆಗುವ ಆಸೆ ಇಲ್ಲ. ಸಿಎಂ ಆಗಬೇಕು ಎಂದು ಹೇಳಿದ್ದೆ.
ನಾನು ಸಿಎಂ ಆಗಬಹುದು. ಆಗದೇ ಇರಬಹುದು. ಈ ಮಾತಿನಿಂದ ದಲಿತ ಸಿಎಂ ಬಗ್ಗೆ ಚರ್ಚೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಅದೃಷ್ಟ ಯಾರಿಗೆ ಬರುತ್ತೆ ನೋಡೋಣ, ದಲಿತರು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು, ದಲಿತ ಸಿಎಂ ಹೋರಾಟಕ್ಕೆ ಜಿ.ಪರಮೇಶ್ವರ್ ಪರೋಕ್ಷ ಕರೆ ನೀಡಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700