ಬೆಳಗ್ಗೆ ಎದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿ.ಕೆ.ಶಿವಕುಮಾರ್ ಒದ್ದಾಡುತ್ತಿದ್ದಾರೆ. ಆದರೆ ನಾವೆಲ್ಲರೂ ಇದ್ದೇವೆ, ಧೈರ್ಯವಾಗಿರಪ್ಪ ಎಂದು ಆತ್ಮಸ್ಥೆರ್ಯ ತುಂಬುತ್ತಿದ್ದೇವೆಂದು ಡಾ.ಜಿ.ಪರಮೇಶ್ವರ್ ಹೇಳಿದ್ದು, ಈ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಪಕ್ಷವೊಂದರ ಅಧ್ಯಕ್ಷ ಸ್ಥಾನ ನಿಭಾಯಿಸುವುದು ಸುಲಭವಲ್ಲ. ಟಿಕೆಟ್ ಕೊಡಬೇಕು, ಗೆಲ್ಲಿಸಬೇಕು, ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ನನಗೆ ಸಾಮರ್ಥ್ಯ ಇದೆ ಎಂದೇ 8 ವರ್ಷ ಅಧ್ಯಕ್ಷ ಸ್ಥಾನ ನೀಡಿದ್ದರು ಎಂದಿದ್ದಾರೆ.
ತುಮಕೂರಿನ ಕೊರಟಗೆರೆಯಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್, ಯಾವುದೇ ವ್ಯಕ್ತಿ ಪಕ್ಷ ಬರಬೇಕಾದರೇ ಉದ್ದೇಶ, ಕ್ಷೇತ್ರದ ಕೆಲಸ ಆಗಬೇಕು. ಕೆಲಸ ಮಾಡುವ ಸಾಮರ್ಥ್ಯ ಇರಬೇಕು. ಆ ಸಾಮರ್ಥ್ಯ ನನಗಿದೆ ಅಂದುಕೊಂಡಿದ್ದೇನೆ. ಬೇರೆಯವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಸಮರ್ಥ ನಾಯಕ ಎಂದು ನನ್ನನ್ನ ಪಕ್ಷ ಗುರುತಿಸಿದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy