ಸರಗೂರು: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ ಹೆಚ್.ಡಿ.ಕೋಟೆಯ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಚಿಕ್ಕಣ್ಣನವರ ಪುತ್ರರಾದ ಜಯಪ್ರಕಾಶ್ ಚಿಕ್ಕಣ್ಣ ಸ್ನೇಹ ಬಳಗದ ವತಿಯಿಂದ, ಜೆಡಿಎಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿನೋದ್ ಪ್ರಸಾದ್ ಕೆ.ಟಿ.ಎಸ್ ರವರ ನೇತೃತ್ವದಲ್ಲಿ ವಿಶೇಷ ಚೇತನ ಶಾಲೆಯ ಮಕ್ಕಳಿಗೆ ಸಿಹಿ ಹಂಚಿದರು.
ಶಾಲೆಯ ಆವರಣದಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಮಕ್ಕಳಿಗೆ ರಾತ್ರಿಯ ಊಟದ ವ್ಯವಸ್ಥೆ ಮಾಡುವುದರ ಮೂಲಕ ಅತ್ಯಂತ ಸರಳವಾಗಿ, ಅರ್ಥಪೂರ್ಣವಾಗಿ ದೇವೇಗೌಡರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇದೇ ವೇಳೆ ಶಾಲೆಯ ಮುಖ್ಯಸ್ಥರಾದ ಸತೀಶ್ ಕ್ಯಾತನಹಳ್ಳಿ ರವರು ಆನ್ ಲೈನ್ ಮೂಲಕ ಮಕ್ಕಳೊಂದಿಗೆ ಹೆಚ್.ಡಿ.ದೇವೇಗೌಡ ರವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಯುವ ಮುಖಂಡರು, ಜೆಡಿಎಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿನೋದ್ ಪ್ರಸಾದ್ ಕೆ.ಟಿ.ಎಸ್ ಮಾತನಾಡಿದರು. ಈ ಸಂದರ್ಭದಲ್ಲಿ H.D.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ ಯುವ ಮುಖಂಡರುಗಳಾದ ಜೆಡಿಎಸ್ ಕಾರ್ಯಕಾರಿ ಸಮಿತಿ ಸದಸ್ಯ ವಿನೋದ್ ಪ್ರಸಾದ್ ಕುರ್ಣೇಗಾಲ, ಚೇತನ್, ಸಿದ್ದರಾಜು, ಹೊಮ್ಮರಗಳ್ಳಿ ಜಗದೀಶ್, ಕುರ್ಣೇಗಾಲದ ಅನಿಲ್ ರವರು ಸೇರಿದಂತೆ ಜಯಪ್ರಕಾಶ್ ಸ್ನೇಹ ಬಳಗದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5