ಬ್ರೆಸಿಲಿಯಾ: ಈಶಾನ್ಯ ಬ್ರೆಜಿಲ್‍ನ ಬಹಿಯಾ ರಾಜ್ಯದ ಒಟ್ಟು 116 ನಗರಗಳಲ್ಲಿ ನವೆಂಬರ್ ಅಂತ್ಯದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ತುರ್ತುಸ್ಥಿತಿ ತಲೆದೋರಿದೆ. 21 ಮಂದಿ ಅಸುನೀಗಿ 358 ಮಂದಿ ಗಾಯಗೊಂಡಿದ್ದಾರೆ.
ಬ್ರೆಜಿಲ್ ನ ಇತರ ನಾಲ್ಕು ಉತ್ತರ ಮತ್ತು ಆಗ್ನೇಯ ರಾಜ್ಯಗಳಲ್ಲಿ ಸಹ ಇತ್ತೀಚಿನ ದಿನಗಳಲ್ಲಿ ಪ್ರವಾಹ ಉಂಟಾಗಿದೆ. ಬಹಿಯಾದಲ್ಲಿ ಪ್ರವಾಹದಿಂದ 4,70,000 ಜನರು ಸಂಕಷ್ಟಪೀಡಿತರಾಗಿದ್ದಾರೆ.
ಕನಿಷ್ಟ ಪಕ್ಷ 50 ನಗರಗಳಲ್ಲಿ ಮನೆಗಳು ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಜನರು ತಮ್ಮ ವಸ್ತುಗಳನ್ನು ತೊರೆದು ಸುರಕ್ಷಿತ ಸ್ಥಳಗಳತ್ತ ದಾವಿಸುವಂತೆ ಮಾಡಿದೆ.ರಾಜ್ಯ ಸರ್ಕಾರದ ಅಧಿಕೃತ ಅಂಕಿ-ಅಂಶದ ಪ್ರಕಾರ, ಪ್ರವಾಹದಿಂದಾಗಿ 34,163 ಜನರು ನಿರ್ವಸತಿಗರಾಗಿದ್ದಾರೆ ಮತ್ತು ಬಹುತೇಕ 43,000 ಜನರನ್ನು ಸ್ಥಳಾಂತರಗೊಳಿಸಲಾಗಿದೆ.
ಇದು ಕಳೆದ 32 ವರ್ಷಗಳಲ್ಲಿ ಬ್ರೆಜಿಲ್‍ನ ಬಹಿಯಾದಲ್ಲಿ ಅತಿ ಹೆಚ್ಚು ಮಳೆ ಸುರಿದ ಅವಯಾಗಿದೆ. ಈ ವರ್ಷ ಇಲ್ಲಿ ವಾಡಿಕೆಗಿಂತ ಐದು ಪಟ್ಟು ಅಧಿಕ ಮಳೆಯಾಗಿದೆ ಎಂದು ತಿಳಿದುಬಂದಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy