ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಪುರ ಗೇಟ್ ಬಳಿ ಕಾರವೊಂದು ಮರಕ್ಕೆ ಡಿಕ್ಕಿ ಹೊಡೆದ ದುರ್ಘಟನೆ ನಡೆದಿದೆ.
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 150 A ನಲ್ಲಿರುವ ಚಿಕ್ಕಪುರ ಗೇಟ್ ನ ಕೂಗಳತೆ ದೂರದಲ್ಲಿ ಇರುವ ಹುಣಸೆ ಮರಕ್ಕೆ ಮಾರುತಿ ಬ್ರೀಝ್ KA-44 M-8276 ನೋಂದಣಿ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂದಿನ ಭಾಗ ಪೂರ್ಣ ಜಖಂಗೊಂಡಿದ್ದು, ಈ ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು ತಮ್ಮ ಗ್ರಾಮವಾದ ಮುತ್ತುಗದಹಳ್ಳಿ ಯಿಂದ ಚಿಕ್ಕಪುರ ಮಾರ್ಗದಲ್ಲಿ ಸಂಚರಿಸುವಾಗ ಈ ಘಟನೆ ನಡೆದಿದೆ.
ಈ ಕಾರು ಮುತ್ತುಗದಹಳ್ಳಿ ಗ್ರಾಮ ಶಿಕ್ಷಣ ಇಲಾಖೆಯಲ್ಲಿ, ಬಿ.ಆರ್.ಸಿ. ಆಗಿರುವ ರಾಜು ಎಂಬವರಿಗೆ ಸೇರಿದ್ದಾಗಿದ್ದು, ಅಪಘಾತದ ಪರಿಣಾಮ ಚಾಲಕನ ತಲೆಗೆ ತೀವ್ರ ಗಾಯವಾಗಿದ್ದು, ಗಾಯಾಳುವನ್ನು ಸಾರ್ವಜನಿಕರು ಆಂಬುಲೆನ್ಸ್ ಮೂಲಕ ಶ್ರೀ ಆದಿಚುಂಚನಗಿರಿ ವೈದ್ಯಕೀಯದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ತುರುವೇಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಸುರೇಶ್ ಬಾಬು ಎಂ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy