ಹುಬ್ಬಳ್ಳಿ: ಇಲ್ಲಿನ ಜೈನ್ ಬೋರ್ಡಿಂಗ್ ನಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಮುನಿಶ್ರೀ ಪುಣ್ಯಸಾಗರ್ ಜಿ. ಮಹಾರಾಜ ರವರ ನೇತೃತ್ವದಲ್ಲಿ ಇಲ್ಲಿ ಜರುಗಿದ ರತ್ನತ್ರೆಯ ವಿಧಾನ ಹಾಗೂ ಮೃತ್ಯುಂಜಯ ಆರಾಧನಾ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಚಿವ ಡಿ.ಸುಧಾಕರ್ ಮುನಿ ಶ್ರೀಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಜೈನ ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ್ ಕಮಿಟಿ ಸದಸ್ಯ ಸದಸ್ಯರು ಸಚಿವ ಡಿ.ಸುಧಾಕರ್ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ದಿಗಂಬರ ಜೈನಮಹಿಳಾ ಸಮಾಜದ ಅಧ್ಯಕ್ಷರಾದ ತ್ರಿಶಾಲ ಮಾಲಾಗುತ್ತಿ, ಆರ್.ಟಿ.ತವನಪ್ಪ ಜಿ.ಜಿ ಲೋಬಾಗೋಳ, ಸುಭದ್ರಮ್ಮ ಮುತ್ತಿನ, ದೇವೇಂದ್ರಪ್ಪ ಕಾಗೆನವರ್, ವಿಮಲಚಂದ್ರ ಸಂಘಮಿ, ಪ್ರಶಾಂತ್ ಬಿ .ಶೆಟ್ಟಿ ,ಸ್ಮಿತಾ ವಾಕಳೆ ,ಮಹಾವೀರ ಮಣಕಟ್ಟಿ, ಉದಯ್ ದಡತಿ, ಪಂಕಜ ಸೂಜಿ, ಸೇರಿದಂತೆ ಜೈನ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳು, ಜೈನ ಮಹಿಳಾ ಸಂಘಟನೆಗಳು, ಸೇರಿದಂತೆ ಶ್ರಾವಕ -ಶ್ರಾವಕಿಯರು ಭಾಗವಹಿಸಿದ್ದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q