ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಖಾಲಿ ಚೊಂಬು ಜಾಹಿರಾತಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಿರುಗೇಟು ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕಾಂಗ್ರೆಸ್ ಜಾಹೀರತನ್ನು ಪ್ರದರ್ಶಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನ ಮಾಡಿದರು.
2014ರಲ್ಲಿ ಡಾ. ಮನಮೋಹನ್ ಸಿಂಗ್ ಸರ್ಕಾರ ಖಾಲಿ ಚೊಂಬನ್ನು, ನರೇಂದ್ರ ಮೋದಿ ಅವರಿಗೆ ನೀಡಿತ್ತು. ಆದರೆ ಮೋದಿ ಖಾಲಿ ಚೊಂಬನ್ನೇ ಬಳಸಿಕೊಂಡು ಅಕ್ಷಯ ಪಾತ್ರೆಯನ್ನಾಗಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಲು ಸಾಲು ಹಗರಣಗಳನ್ನು ಮಾಡಿ ಹಣವನ್ನು ಲೂಟಿ ಹೊಡೆದು ನರೇಂದ್ರ ಮೋದಿ ಅವರಿಗೆ ಖಾಲಿ ಚೊಂಬನ್ನು ನೀಡಿತ್ತು. ಹತ್ತು ವರ್ಷ ಖಾಲಿ ಚೊಂಬನ್ನೇ ಅಕ್ಷಯ ಪಾತ್ರೆಯನ್ನಾಗಿಸಿದ ಹೆಗ್ಗಳಿಕೆ ನರೇಂದ್ರ ಮೋದಿಯವರದ್ದಾಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿಡಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಎನ್ ಡಿಎ ಚುನಾವಣಾ ಪ್ರಚಾರದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಪ್ರದರ್ಶನ ಮಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಖಾಲಿ ಚೊಂಬನ್ನು ನೀಡಿತ್ತು. ಖಾಲಿ ಚೊಂಬನ್ನು ನೀಡಿದ್ದು ಯಾರು ಎಂದು ದೇವೇಗೌಡ ಪ್ರಶ್ನಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಕಲ್ಲಿದಲ್ಲು ಹಗರಣ, 2ಜಿ, ರೈಲ್ ಗೇಟ್, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಮ್ಮ ದೇಶದ ಸಂಪತ್ತನ್ನು ಯುಪಿಎ ಲೂಟಿ ಮಾಡಿತ್ತು. ಆಗ ದೇಶದ ಆರ್ಥಿಕತೆಯ ಚೊಂಬು ಖಾಲಿಯಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ಐದು ಗ್ಯಾರಂಟಿ ಕೊಟ್ಟಿದೆ. ಯುಪಿಎ 25 ಗ್ಯಾರಂಟಿ ಕೊಡ್ತಾರಂತೆ. 10 ವರ್ಷದಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಪಡೆಯಲು ವಿಫಲರಾದ ಪಕ್ಷ, ಅಧಿಕಾರದ ಕನಸು ಕಾಣುತ್ತಿದೆ ಎಂದು ದೇವೇಗೌಡ ಗುಡುಗಿದರು. ಅಲ್ಲದೆ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಎನ್ ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸ ಬೇಕಿದೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296