nammatumakuru

    Subscribe to Updates

    Get the latest creative news from FooBar about art, design and business.

    What's Hot

    ನವರಾತ್ರಿ

    October 16, 2026

    ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ

    October 16, 2026

    ಒಂದು ಪುಟ್ಟ ಮಗುವಿನ ಫೋಟೋದಿಂದಲೇ ಹಿಟ್ ಆಯ್ತು ಐರಾವತ ಬಸ್‌! ಪೋಟೊ ಹಿಂದಿದೆ ಇಂಟರೆಸ್ಟಿಂಗ್ ಕಥೆ

    October 16, 2026
    Facebook Twitter Instagram
    ಟ್ರೆಂಡಿಂಗ್
    • ನವರಾತ್ರಿ
    • ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ
    • ಒಂದು ಪುಟ್ಟ ಮಗುವಿನ ಫೋಟೋದಿಂದಲೇ ಹಿಟ್ ಆಯ್ತು ಐರಾವತ ಬಸ್‌! ಪೋಟೊ ಹಿಂದಿದೆ ಇಂಟರೆಸ್ಟಿಂಗ್ ಕಥೆ
    • ಗರ್ಭಿಣಿಯಾಗಲು ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು?
    • ತುಮಕೂರು: ಅ.17ರಂದು ದಸರಾ ಕವಿಗೋಷ್ಠಿ
    • ಮುಜರಾಯಿ ದೇವಾಲಯಗಳ ಹಣ ದಸರಾಗೆ ಬೇಡ: ದಾಖಲೆ ಪ್ರದರ್ಶಿಸಿ ಒತ್ತಾಯಿಸಿದ ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್
    • ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪದವೀಧರ ಕ್ಷೇತ್ರದ ಚುನಾವಣೆ ಸಿದ್ಧತೆ – ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನೇತೃತ್ವದಲ್ಲಿ ಪರಿಶೀಲನಾ ಸಭೆ
    • ಕೇದಿಗೇಹಳ್ಳಿ: ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ: ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋಹನ್ ಚರಣ್
    ರಾಜ್ಯ ಸುದ್ದಿ June 13, 2024

    ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋಹನ್ ಚರಣ್

    By adminJune 13, 2024No Comments2 Mins Read
    mohan charan 2

    ಒಡಿಶಾ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಮೋಹನ್ ಚರಣ್ ಮಾಝಿ ಕೃಷಿಕರಾಗಿ, ಆರೆಸ್ಸೆಸ್ ಶಾಲೆಯ ಶಿಕ್ಷಕರಾಗಿ, ಸರಪಂಚರಾಗಿ, ಆದಿವಾಸಿ ಹಕ್ಕುಗಳ ಹೋರಾಟಗಾರರಾಗಿ ಮತ್ತು ಗಣಿ ಮಾಫಿಯಾ ವಿರುದ್ಧದ ಚಳವಳಿಗಾರರಾಗಿ ವೈವಿಧ್ಯಮಯ ಅನುಭವಗಳನ್ನು ಹೊಂದಿದ್ದಾರೆ. ಈ ಪೂರ್ವ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿಯ ಸಿಎಂ ಆದ 52 ವರ್ಷ ವಯಸ್ಸಿನ ಮಾಝಿ ಕಿಯೊಂಝರ್ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    ಶಾಸಕರಾದ ಮೇಲೂ ರಾಜಧಾನಿಯಲ್ಲಿ ನನಗೆ ಬಾಡಿಗೆ ಮನೆ ಮಾಡುವ ಸಾಮರ್ಥ್ಯ ಇಲ್ಲ ಎಂದು ಹೇಳಿದವರು.

    ಈ ಪೂರ್ವ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿಯ ಸಿಎಂ ಆದ 52 ವರ್ಷ ವಯಸ್ಸಿನ ಮಾಝಿ ಕಿಯೊಂಝರ್ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ದೇಶದ ಮೊಟ್ಟಮೊದಲ ಆದಿವಾಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮುದಾಯವಾದ ಸಂತಾಲ ಸಮಾಜಕ್ಕೆ ಸೇರಿದ ಮಾಝಿ ಅವರನ್ನು ಬಿಜೆಪಿ ಸಿಎಂ ಹುದ್ದೆಗೆ ಆಯ್ಕೆ ಮಾಡಿದೆ.

    ಆದಿವಾಸಿ ಪ್ರಾಬಲ್ಯದ ಜಾರ್ಖಂಡ್ ವಿಧಾನಸಭೆಗೆ ಸದ್ಯದಲ್ಲೇ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾರ್ಯತಂತ್ರದ ಭಾಗವಾಗಿ ಇವರನ್ನು ಬಿಜೆಪಿ ಆಯ್ಕೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಕಿಯೊಂಝರ್ ದಕ್ಷಿಣ ಭಾಗದಲ್ಲಿ ಹುಟ್ಟಿ ಬೆಳೆದ ಮಾಝಿ ವಿದ್ಯಾರ್ಥಿ ಜೀವನದಲ್ಲೇ ಭರವಸೆಯ ನಾಯಕರಾಗಿ ಮೂಡಿಬಂದವರು. ಆದಿವಾಸಿ ಸಮುದಾಯದ ಸಮಸ್ಯೆಗಳಿಗಾಗಿ ಹೋರಾಟ ನಡೆಸುತ್ತಾ ಬಂದ ಅವರು, ಕಾನೂನು ಪದವಿ ಪಡೆದು ರಾಜಕೀಯಕ್ಕೆ ಧುಮುಕುವ ಮುನ್ನ ಆರೆಸ್ಸೆಸ್ ನ ಸರಸ್ವತಿ ಶಿಶು ವಿದ್ಯಾ ಕೇಂದ್ರದಲ್ಲಿ ಬೋಧನೆ ಮಾಡುತ್ತಿದ್ದರು.

    1997ರಿಂದ 2000ರ ವರೆಗೆ ಪಂಚಾಯತ್ ಸರಪಂಚರಾಗಿ ಕಾರ್ಯನಿರ್ವಹಿಸಿದ ಅವರು 2000ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

    ಬಿಜೆಪಿ ಆದಿವಾಸಿ ಮೋರ್ಚಾ ಕಾರ್ಯದರ್ಶಿಯಾಗಿ ಮಾಝಿ ಅವರ ಕಾರ್ಯದಕ್ಷತೆ ಅವರನ್ನು 2019ರಲ್ಲಿ ವಿಧಾನ ಸಭೆಯಲ್ಲಿ ವಿಪಕ್ಷದ ಮುಖ್ಯ ಸಚೇತಕರನ್ನಾಗಿ ಮಾಡಿತು. 2005 ರಿಂದ 2009ರಲ್ಲಿ ಬಿಜೆಡಿ ಜತೆಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅವರು ಉಪ ಮುಖ್ಯಸಚೇತಕರಾಗಿದ್ದರು.

    2019ರಲ್ಲಿ ಶಾಸಕರಾಗಿ ಆಯ್ಕೆಯಾದಾಗ ಸರ್ಕಾರ ಅವರಿಗೆ ಅತಿಥಿಗೃಹ ಮಂಜೂರು ಮಾಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಶಾಸಕರಾಗಿ ಹಲವು ರಾತ್ರಿಗಳನ್ನು ಫುಟ್ಪಾತ್ ನಲ್ಲಿ ಕಳೆದಿದ್ದಾಗಿ ವಿಧಾನಸಭೆಯಲ್ಲಿ ಹೇಳಿಕೆ ನೀಡುವ ಮೂಲಕ ಮಾಝಿ ಸುದ್ದಿಯಾಗಿದ್ದರು.

    ಬಾಡಿಗೆ ಮನೆಯನ್ನು ಪಡೆಯುವ ಸ್ಥಿತಿಯಲ್ಲಿ ತಾವಿಲ್ಲ ಎಂದು ಸ್ಪೀಕರ್ ಎಸ್.ಎನ್.ಪಾತ್ರೊ ಅವರಿಗೆ ಮಾಝಿ ತಿಳಿಸಿದ್ದರು. ಫುಟ್ಪಾತ್ ನಲ್ಲಿ ನಿದ್ದೆ ಮಾಡುತ್ತಿದ್ದ ಸಮಯದಲ್ಲಿ ಅವರ ಮೊಬೈಲ್ ಫೋನ್ ಕಳ್ಳತನವಾಗಿತ್ತು ಎಂದೂ ಹೇಳಿದ್ದರು.

    ಇದೀಗ ನಿಯೋಜಿತ ಸಿಎಂಗೆ ಹೊಸ ಬಂಗ್ಲೆ ಹುಡುಕುವ ಕಾರ್ಯದಲ್ಲಿ ಒಡಿಶಾ ಸರಕಾರದ ಆಡಳಿತ ಯಂತ್ರ ಮಗ್ನವಾಗಿದೆ. ಏಕೆಂದರೆ ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರು ತಮ್ಮ ಖಾಸಗಿ ಮನೆಯಲ್ಲಿ ಕಳೆದ 24 ವರ್ಷಗಳಿಂದ ಇದ್ದಾರೆ. ಇದರಿಂದಾಗಿ ಅವರಿರುವವರೆಗೆ ಸಿಎಂಗೆ ಅಧಿಕೃತ ನಿವಾಸ ಹುಡುಕುವ ಪ್ರಮೇಯ ಬಂದಿರಲಿಲ್ಲ.

    ಕಳೆದ ವರ್ಷ ಇದೇ ಮಾಝಿ ವಿಧಾನಸಭೆಯಿಂದ ಅಮಾನತಾಗಿದ್ದರು. ಒಡಿಶಾ ಸರಕಾರ ಶಾಲೆಗಳ ಬಿಸಿಯೂಟ ಯೋಜನೆಗೆ ತೊಗರಿ ಬೇಳೆ ಖರೀದಿಸುವಲ್ಲಿ ಅಕ್ರಮ ಎಸಗಿದೆ ಎಂದು ಆರೋಪಿಸಿ ಮಾಝಿ ಹಾಗೂ ಇನ್ನೊಬ್ಬ ದಲಿತ ಶಾಸಕ ಮುಕೇಶ್ ಮಹಾಲಿಂಗ ಅವರು ಒಂದಿಷ್ಟು ಬೇಳೆಯನ್ನು ಸ್ಪೀಕರ್ ಕಡೆಗೆ ಬಿಸಾಡಿದ್ದರು. ಅದಕ್ಕೆ ಸ್ಪೀಕರ್ ಪ್ರಮೀಳಾ ಮಲಿಕ್ ಅವರಿಬ್ಬರನ್ನು ಅಮಾನತು ಮಾಡಿದ್ದರು.

    2022 ರಲ್ಲಿ ಮೈನಿಂಗ್ ಮಾಫಿಯಾದಿಂದ ಕೆಲವು ಶಾಸಕರ ಜೀವಕ್ಕೆ ಅಪಾಯವಿದೆ ಎಂದು ಮಾಝಿ ಆರೋಪಿಸಿದ್ದರು. ಅದಕ್ಕೆ ಒಂದು ವರ್ಷ ಮೊದಲು ಕಿಯೊಂಝರ್ ನಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾಝಿ ಅವರ ವಾಹನದ ಮೇಲೆ ಕಚ್ಚಾ ಬಾಂಬ್ ಎಸೆದಿದ್ದರು. ಆ ದಾಳಿಯಲ್ಲಿ ಮಾಝಿ ಬದುಕುಳಿದಿದ್ದರು. ಮಾಝಿ ಅವರ ಪತ್ನಿ ಪ್ರಿಯಾಂಕಾ ಮರಾಂಡಿ. ಅವರಿಗೆ ಇಬ್ಬರು ಪುತ್ರರಿದ್ದಾರೆ.


     

    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ರಾಜ್ಯಪಾಲರಿಗೆ ತಿಂಗಳಿಗೆ ಎಷ್ಟು ಸಂಬಳ; ರಾಜಭವನ ಸೇರಿ ಸಿಗುವ ಸೌಲಭ್ಯಗಳೇನು?

    October 16, 2026

    ರೈತರ ಬೇಡಿಕೆ ಈಡೇರುವವರೆಗೆ ಸಕ್ಕರೆ ಮುಟ್ಟಲ್ಲ! ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಜ್ಞೆ

    October 14, 2026

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ ಯಾರು? ಕೆ.ಎನ್.ರಾಜಣ್ಣ ಹೇಳಿದ್ದೇನು?

    October 14, 2026

    Comments are closed.

    Our Picks

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ನವರಾತ್ರಿ

    October 16, 2026

    ವಿ.ಎಂ.ಎಸ್.ಗೋಪಿ ಮೈಸೂರು ದಸರಾ ಎಷ್ಟೊಂದು ಸುಂದರ ನವರಾತ್ರಿ ಉತ್ಸವ ಹಬ್ಬದ ಸಡಗರ ಎಲ್ಲೆಲ್ಲೂ ಸಂಭ್ರಮ ನವ ಅವತಾರಗಳು ಶೈಲಪುತ್ರಿ ದುರ್ಗೆ…

    ಸ್ಟ್ಯಾನ್‌ ಫೋರ್ಡ್– ಎಲ್ಸೆವಿಯರ್ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಪ್ರೊ. ಡಾ. ಯೋಗೀಶ್ ಎನ್. ಸೇರ್ಪಡೆ

    October 16, 2026

    ಒಂದು ಪುಟ್ಟ ಮಗುವಿನ ಫೋಟೋದಿಂದಲೇ ಹಿಟ್ ಆಯ್ತು ಐರಾವತ ಬಸ್‌! ಪೋಟೊ ಹಿಂದಿದೆ ಇಂಟರೆಸ್ಟಿಂಗ್ ಕಥೆ

    October 16, 2026

    ಗರ್ಭಿಣಿಯಾಗಲು ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು?

    October 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.