nammatumakuru

    Subscribe to Updates

    Get the latest creative news from FooBar about art, design and business.

    What's Hot

     ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯ ಹಿಂದಿದೆ ಕುತೂಹಲಕಾರಿ ಕಥೆ;  ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬಗ್ಗೆ ಹಲವರಿಗೆ ತಿಳಿಯದ ಅಂಶಗಳಿವು!

    October 2, 2026

    ಚುನಾವಣೆ ಗೆಲ್ಲಲು ಹಣ, ಮದ್ಯ, ಜಾತಿ ಲೆಕ್ಕಾಚಾರ? ಸಿದ್ದರಾಮಯ್ಯ ಹೇಳಿದ್ದೇನು?

    October 2, 2026

    ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧೀಜಿ ಎಲ್ಲಿದ್ದರು? ಪ್ರಧಾನಿ–ರಾಷ್ಟ್ರಪತಿ ಹುದ್ದೆಗಿಂತ ಅವರು ಆರಿಸಿಕೊಂಡಿದ್ದು ಏನು?

    October 2, 2026
    Facebook Twitter Instagram
    ಟ್ರೆಂಡಿಂಗ್
    •  ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯ ಹಿಂದಿದೆ ಕುತೂಹಲಕಾರಿ ಕಥೆ;  ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬಗ್ಗೆ ಹಲವರಿಗೆ ತಿಳಿಯದ ಅಂಶಗಳಿವು!
    • ಚುನಾವಣೆ ಗೆಲ್ಲಲು ಹಣ, ಮದ್ಯ, ಜಾತಿ ಲೆಕ್ಕಾಚಾರ? ಸಿದ್ದರಾಮಯ್ಯ ಹೇಳಿದ್ದೇನು?
    • ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧೀಜಿ ಎಲ್ಲಿದ್ದರು? ಪ್ರಧಾನಿ–ರಾಷ್ಟ್ರಪತಿ ಹುದ್ದೆಗಿಂತ ಅವರು ಆರಿಸಿಕೊಂಡಿದ್ದು ಏನು?
    • ಮಾಸಿಕ ಗೌರವಧನ: ಆನ್ ಲೈನ್  ಅರ್ಜಿ ಆಹ್ವಾನ
    • ಚಿಕ್ಕನಾಯಕನಹಳ್ಳಿ: ಎತ್ತಿನಹೊಳೆ ಯೋಜನೆಯಿಂದ ತಾಲೂಕಿಗೆ 0.75 ಟಿಎಂಸಿ ನೀರು ಮಂಜೂರು ಮಾಡಿಸಿದ್ದೇನೆ — ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ
    • ಸಿಂಹಾದ್ರಿ ಹತ್ಯೆ ಪ್ರಕರಣ:  ದಲಿತ ಸಂಘಟನೆ ಮುಖಂಡರಿಂದ ಕುಟುಂಬಸ್ಥರ ಭೇಟಿ: ನ್ಯಾಯಕ್ಕಾಗಿ ಆಗ್ರಹ
    • ಅಧಿಕಾರಿಗಳಾದವರು ಪರಿಷತ್‌ ಗೆ ಸ್ಪರ್ಧಿಸಬಾರದೆಂದೇನಿಲ್ಲ: ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಸಿ. ಸೋಮಶೇಖರ್
    • ಚಿನ್ನದ ಕರಡಿಗೆ, ನೈಸ್ ರಸ್ತೆ ಜಮೀನು ವಿವಾದ: ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಂದ ಸ್ಪಷ್ಟನೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಚುನಾವಣೆ ಗೆಲ್ಲಲು ಹಣ, ಮದ್ಯ, ಜಾತಿ ಲೆಕ್ಕಾಚಾರ? ಸಿದ್ದರಾಮಯ್ಯ ಹೇಳಿದ್ದೇನು?
    ರಾಜ್ಯ ಸುದ್ದಿ October 2, 2026

    ಚುನಾವಣೆ ಗೆಲ್ಲಲು ಹಣ, ಮದ್ಯ, ಜಾತಿ ಲೆಕ್ಕಾಚಾರ? ಸಿದ್ದರಾಮಯ್ಯ ಹೇಳಿದ್ದೇನು?

    By Ganesh TumkuruOctober 2, 2026No Comments3 Mins Read
    siddaramaiah

    ಬೆಂಗಳೂರು: ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಚಾಮುಂಡೇಶ್ವರಿ ಉಪಚುನಾವಣೆಯ ಸಂದರ್ಭದಲ್ಲಿ ಎದುರಾಳಿ ಅಭ್ಯರ್ಥಿಯ ಪರವಾಗಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಲಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ತಾವೂ ಹಣ ಖರ್ಚು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು ಎಂದು ಅವರು ಹೇಳಿದ್ದಾರೆ.

    ಜೆ.ಎಚ್. ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ಮರಣೋತ್ಸವ ಹಾಗೂ ‘ಚುನಾವಣೆ ಸುಧಾರಣೆಯಿಂದ ಸಮಾಜದ ಸುಧಾರಣೆ’ ಕುರಿತ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪಟೇಲರೊಂದಿಗಿನ ತಮ್ಮ ಒಡನಾಟ ಮತ್ತು ಅವರ ವ್ಯಕ್ತಿತ್ವವನ್ನು ಸ್ಮರಿಸಿದರು. ಇದೇ ವೇಳೆ ಚುನಾವಣಾ ವ್ಯವಸ್ಥೆಯಲ್ಲಿನ ಸುಧಾರಣೆಯ ಅಗತ್ಯತೆಯ ಬಗ್ಗೆ ಮಾತನಾಡಿದರು.

    ಚುನಾವಣೆಯಲ್ಲಿ ಹಣದ ಬಳಕೆ, ಮದ್ಯ ಹಂಚಿಕೆ ಹಾಗೂ ಜಾತಿ ಲೆಕ್ಕಾಚಾರ ಪ್ರಮುಖವಾಗುತ್ತಿರುವುದರಿಂದ ಪ್ರಾಮಾಣಿಕರು, ಬಡವರು, ವಿದ್ಯಾವಂತರು ಹಾಗೂ ಸಮಾಜ ಸೇವೆಯ ಉದ್ದೇಶ ಹೊಂದಿರುವವರು ಚುನಾವಣಾ ರಾಜಕಾರಣದಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

    ಚುನಾವಣಾ ವ್ಯವಸ್ಥೆ ಸುಧಾರಣೆಗೆ ಈ ಹಿಂದೆ ಹಲವು ಸಮಿತಿಗಳನ್ನು ರಚಿಸಲಾಗಿತ್ತು. ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ದಿನೇಶ್ ಗೋಸ್ವಾಮಿ ಸಮಿತಿ, ಪಿ.ವಿ. ನರಸಿಂಹರಾವ್ ಅವಧಿಯಲ್ಲಿ ಎನ್.ಎನ್. ವೋಹ್ರಾ ಸಮಿತಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಇಂದ್ರಜಿತ್ ಗುಪ್ತಾ ಸಮಿತಿ ರಚನೆಯಾಗಿತ್ತು. ಈ ಸಮಿತಿಗಳ ಶಿಫಾರಸುಗಳನ್ನು ಸಮಗ್ರವಾಗಿ ಜಾರಿಗೊಳಿಸಿದ್ದರೆ ಚುನಾವಣಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ತರಬಹುದಾಗಿತ್ತು. ಆದರೆ ಅವು ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

    ಇಂದ್ರಜಿತ್ ಗುಪ್ತಾ ಸಮಿತಿ ಪ್ರಸ್ತಾಪಿಸಿದ್ದ ಮಾದರಿಯಲ್ಲಿ ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು. ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದರ ಜತೆಗೆ ರಾಜಕೀಯ ಪಕ್ಷಗಳ ನೀತಿ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಮಾಧ್ಯಮಗಳ ಮೂಲಕ ಮತದಾರರಿಗೆ ತಲುಪಿಸುವ ವ್ಯವಸ್ಥೆ ರೂಪಿಸಬೇಕು. ಇದರಿಂದ ಚುನಾವಣೆಯಲ್ಲಿ ಹಣದ ದುರ್ಬಳಕೆಯನ್ನು ನಿಯಂತ್ರಿಸಲು ಸಾಧ್ಯವಾಗಬಹುದು ಎಂದು ಹೇಳಿದರು.

    ಚುನಾವಣೆಗಳು ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಯಬೇಕು. ಇದಕ್ಕಾಗಿ ಕೇವಲ ಕಾನೂನು ಅಥವಾ ಚುನಾವಣಾ ಆಯೋಗದ ಮಟ್ಟದಲ್ಲಿ ಬದಲಾವಣೆ ಮಾಡಿದರೆ ಸಾಲದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಮತದಾರರ ಮನೋಭಾವದಲ್ಲಿಯೂ ಬದಲಾವಣೆ ಅಗತ್ಯ ಎಂದು ಅವರು ಪ್ರತಿಪಾದಿಸಿದರು.ರಾಜಕಾರಣಿಗಳು ಅಧಿಕಾರದಲ್ಲಿದ್ದಾಗ ಹಣ ಮಾಡುತ್ತಾರೆ ಎಂದು ಆರೋಪಿಸುವವರೇ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ನೀಡುವ ಹಣವನ್ನು ಸ್ವೀಕರಿಸುವ ಮನೋಭಾವ ಹೊಂದಿರುವುದು ಸರಿಯಲ್ಲ. ‘ಹಣ ಕೊಟ್ಟರೆ ತೆಗೆದುಕೊಳ್ಳೋಣ’ ಎಂಬ ಮತದಾರರ ಮನೋಭಾವವೂ ಬದಲಾಗಬೇಕು. ಚುನಾವಣಾ ಸುಧಾರಣೆಯ ಜತೆಗೆ ಮತದಾರರಲ್ಲಿ ಪ್ರಜಾಸತ್ತಾತ್ಮಕ ಜಾಗೃತಿ ಮತ್ತು ವೈಚಾರಿಕತೆ ಬೆಳೆಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

    ಶಿಕ್ಷಣದ ಪ್ರಮಾಣ ಹೆಚ್ಚಾದರೂ ಅದೇ ಪ್ರಮಾಣದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆದಿಲ್ಲ. ವಿದ್ಯಾವಂತರಲ್ಲಿಯೂ ಜಾತಿ ಆಧಾರಿತ ಚಿಂತನೆ ಮುಂದುವರಿದಿದೆ. ಅಭ್ಯರ್ಥಿಯ ಅರ್ಹತೆ, ನೀತಿ ಮತ್ತು ಕಾರ್ಯಕ್ರಮಗಳಿಗಿಂತ ಜಾತಿಗೆ ಆದ್ಯತೆ ನೀಡುವ ಪ್ರವೃತ್ತಿ ಬದಲಾಗಬೇಕು. ಶಿಕ್ಷಣ ವ್ಯವಸ್ಥೆಯೂ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವಂತಿರಬೇಕು ಎಂದು ಹೇಳಿದರು.

    ರಾಜಕೀಯ ಪ್ರಜಾಪ್ರಭುತ್ವದ ಜತೆಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯೂ ಅಗತ್ಯ. ಅಸಮಾನತೆ, ಜಾತೀಯತೆ ಮತ್ತು ಅಸ್ಪೃಶ್ಯತೆ ಮುಂದುವರಿದಿರುವಾಗ ಪ್ರಜಾಪ್ರಭುತ್ವದ ಆಶಯ ಸಂಪೂರ್ಣವಾಗಿ ಸಾಕಾರಗೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವುದು ಸಾಮಾಜಿಕ ಬದಲಾವಣೆಯ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದರು.

    ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರನ್ನು ಸ್ಮರಿಸಿದ ಸಿದ್ದರಾಮಯ್ಯ, ಪಟೇಲರು ಸರಳ, ಧೈರ್ಯಶಾಲಿ, ನೇರ ನಡೆ-ನುಡಿಯ ಹಾಗೂ ಉತ್ತಮ ಸಂಸದೀಯ ಪಟುವಾಗಿದ್ದರು ಎಂದು ಹೇಳಿದರು. ಬೇರೆಯವರ ಏಳಿಗೆಯನ್ನು ಕಂಡು ಅಸೂಯೆಪಡದೆ ಪ್ರೋತ್ಸಾಹಿಸುತ್ತಿದ್ದರು. ತಮ್ಮ ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿಯೂ ಪಟೇಲರು ಪ್ರೋತ್ಸಾಹ ನೀಡಿದ್ದರು ಎಂದು ನೆನಪಿಸಿಕೊಂಡರು.

    ಸಂಸತ್ತು, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಗುಣಮಟ್ಟದ ಚರ್ಚೆಗಳು ಹೆಚ್ಚಾಗಬೇಕು. ಜೆ.ಎಚ್. ಪಟೇಲರು ತೋರಿದ ಸಾರ್ವಜನಿಕ ಬದುಕಿನ ಮೌಲ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. ಚುನಾವಣಾ ವ್ಯವಸ್ಥೆಯ ಸುಧಾರಣೆ ಕೇವಲ ರಾಜಕೀಯದ ಸುಧಾರಣೆಯಲ್ಲ; ಅದು ಸಮಾಜದ ಸುಧಾರಣೆಗೂ ಅಗತ್ಯವಾಗಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

    ಹಣ, ಜಾತಿ ಮತ್ತು ಇತರ ಆಮಿಷಗಳ ಪ್ರಭಾವದಿಂದ ಚುನಾವಣೆಯನ್ನು ಮುಕ್ತಗೊಳಿಸಿ, ಪ್ರಾಮಾಣಿಕರು ಹಾಗೂ ಜನಪರ ಕಾಳಜಿ ಹೊಂದಿರುವವರು ರಾಜಕೀಯಕ್ಕೆ ಬರುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಚರ್ಚಿಸಿ ಸುಧಾರಣೆಯ ದಿಕ್ಕಿನಲ್ಲಿ ಸಾಗಬೇಕು ಎಂದು ಅವರು ಹೇಳಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಚಿನ್ನದ ಅಕ್ರಮ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್​ ಗೆ ಬರೋಬ್ಬರಿ 89 ಕೋಟಿ ರೂ. ದಂಡ ವಿಧಿಸಿದ ಕಸ್ಟಮ್ಸ್ ಇಲಾಖೆ

    October 1, 2026

    ಬೆಂಗಳೂರಿಗರ ನಿದ್ದೆಗೆಡಿಸಿದ್ದ, ವೃದ್ಧನನ್ನು ಕೊಂದ ಕಾಡಾನೆ ಕೊನೆಗೂ ಬನ್ನೇರುಘಟ್ಟ ಅರಣ್ಯಕ್ಕೆ ವಾಪಸ್!

    September 30, 2026

    ಬಸ್ ಟಿಕೆಟ್ ದರ ಏರಿಕೆ ಫಿಕ್ಸ್? ಸಚಿವ ಬೈರತಿ ಸುರೇಶ್  ಹೇಳಿದ್ದೇನು?

    September 30, 2026

    Leave A Reply Cancel Reply

    Our Picks

    ಇಂದಿನಿಂದ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್, ವಿಮಾನ ಇಂಧನ (ATF) ದರ ಏರಿಕೆ

    October 1, 2026

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

     ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯ ಹಿಂದಿದೆ ಕುತೂಹಲಕಾರಿ ಕಥೆ;  ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬಗ್ಗೆ ಹಲವರಿಗೆ ತಿಳಿಯದ ಅಂಶಗಳಿವು!

    October 2, 2026

    ಇಂದು, ಅಕ್ಟೋಬರ್ 2. ಮಹಾತ್ಮ ಗಾಂಧೀಜಿ ಜಯಂತಿಯ ಜೊತೆಗೆ ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ…

    ಚುನಾವಣೆ ಗೆಲ್ಲಲು ಹಣ, ಮದ್ಯ, ಜಾತಿ ಲೆಕ್ಕಾಚಾರ? ಸಿದ್ದರಾಮಯ್ಯ ಹೇಳಿದ್ದೇನು?

    October 2, 2026

    ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧೀಜಿ ಎಲ್ಲಿದ್ದರು? ಪ್ರಧಾನಿ–ರಾಷ್ಟ್ರಪತಿ ಹುದ್ದೆಗಿಂತ ಅವರು ಆರಿಸಿಕೊಂಡಿದ್ದು ಏನು?

    October 2, 2026

    ಮಾಸಿಕ ಗೌರವಧನ: ಆನ್ ಲೈನ್  ಅರ್ಜಿ ಆಹ್ವಾನ

    October 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.