ಬೆಂಗಳೂರು : ನಗರದ ಟೌನ್ ಹಾಲ್ ನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂಜೆ ದಶಮ ಸಂಭ್ರಮ ಕಾರ್ಯಕ್ರಮದಲ್ಲಿ ತುರುವೇಕೆರೆ ತಾಲೂಕಿನ ಮುಗಳೂರು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಕು. ಮೌಲ್ಯ ಎಂ.ಎನ್. ಹಾಗೂ ಬೆಂಗಳೂರು ನಗರದ ಕು.ರಮ್ಯ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಡಾ.ಸಂತೋಷ್ ಭಾರತಿ ಶ್ರೀಪಾದಂಗಳವರು ಹಾಗೂ ಸಂಜೆ ಪ್ರಭ ದಿನಪತ್ರಿಕೆ ಸಂಪಾದಕರಾದ ವೆಂಕಟೇಶ್ ಪೈ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ವಿದ್ಯಾರ್ಥಿನಿ ಕು.ಮೌಲ್ಯ ಎಂ.ಎನ್.ಪ್ರಸ್ತುತ ಮಂಗಳೂರು ಮಹೇಶ್ ಇನ್ಸ್ಟಿಟ್ಯೂಷನ್ ತುಮಕೂರು ಅಶೋಕ ನಗರದ ಮಹೇಶ್ ಪಿ.ಯು. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ವೈದ್ಯೆಯಾಗುವ ಆಸೆ ಹೊತ್ತಿದ್ದಾರೆ. ಪ್ರತಿಭಾ ಪುರಸ್ಕಾರ ಆಯ್ಕೆಗೊಂಡ ವಿದ್ಯಾರ್ಥಿನಿಗೆ ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರಿಂದ ಅಭಿನಂದಿಸಿದೆ.
ಸಂಜೆ ಪ್ರಭ ದಿನಪತ್ರಿಕೆಯ 10ನೇ ವರ್ಷದ ದಶಮ ಸಂಭ್ರಮದ ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸಮಾಜ ಸೇವಕರನ್ನು ಗುರುತಿಸಿ ಅವರಿಗೆ ಸಂಜೆ ಪ್ರಭಾ ಸಾಮಾಜಿಕ ಸೇವಾ ರತ್ನ ಪ್ರಶಸ್ತಿಯನ್ನು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರಿಗೂ ಸಂಜೆ ಪ್ರಭ ಮಾಧ್ಯಮ ಸೇವಾರತ್ನ ಪ್ರಶಸ್ತಿಯನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಗೊಂಬೆ ನೃತ್ಯ ಪ್ರದರ್ಶನ ಮತ್ತು ಶ್ರೀಕೃಷ್ಣಾರ್ಜುನ ಯಕ್ಷಗಾನ ಕಾರ್ಯಕ್ರಮವು ಅದ್ಭುತವಾಗಿ ನೆರವೇರಿತು.
ಈ ಸಂದರ್ಭದಲ್ಲಿ, ಕೆ.ವೆಂಕಟೇಶ್, ಎಸಿಬಿ ಇನ್ಸ್ ಪೆಕ್ಟರ್, ಖ್ಯಾತ ವೈದ್ಯರುಗಳಾದ ಡಾ.ಎಂ.ವಿ.ಉರಾಳ, ಡಾ.ಶಾಹಿದ್ ಮಹಮ್ಮದ್, ಡಾ. ಚಂದ್ರಶೇಖರ್, ಭಾಗ್ಯವತಿ ಅಮರೇಶ್, ರಂಗಭೂಮಿ ಕಲಾವಿದರಾದ ಸುಚೇಂದ್ರ ಪ್ರಸಾದ್, ಟಿ ಮಂಜುನಾಥ್, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ, ಮುಖಂಡರಾದ ಗಿರೀಶ್, ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಸಚಿನ್ ಮಾಯಸಂದ್ರ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


