ರಾಯಚೂರು: ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ಮೂರು ಜನ ಅವಲಂಬಿತರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ನಗರಸಭೆಯ 10 ಲಕ್ಷ ರೂಪಾಯಿಯ ಪರಿಹಾರ ಚೆಕ್ ಅನ್ನು ಮಂಗಳವಾರ ಹಸ್ತಾಂತರಿಸಿದರು.
ರಾಜ್ಯ ಸರ್ಕಾರದಿಂದಲೂ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದ್ದು,ಶೀಘ್ರದಲ್ಲೇ ಇದನ್ನು ಒದಗಿಸಲಾಗುವುದು. ಏನೇ ಪರಿಹಾರ ಒದಗಿಸಿದರೂ ಮೃತಪಟ್ಟವರ ಪ್ರಾಣ ತಂದುಕೊಡಲಾಗುವುದಿಲ್ಲ. ಈ ಮೂಲಕ ಅವಲಂಬಿತರಿಗೆ ಧೈರ್ಯ ತುಂಬುವ ಕೆಲಸವನ್ನು ನಗರಸಭೆ ಮಾಡಿರುವುದು ಅಭಿನಂದನೀಯ ಎಂದರು.
ಮೃತ ಮಲ್ಲಮ್ಮ ಪತಿ ಮುದುಕಪ್ಪ ಅವರಿಗೆ, ಮೃತ ಅಬ್ದುಲ್ ಗಫೂರ್ ತಾಯಿ ಅಮಿನಾಬೀ ಅವರಿಗೆ ಹಾಗೂ ಮೃತ ನೂರ ಮಹ್ಮದ್ ಸಹೋದರಿ ಕೈಕಶಾ ಅವರಿಗೆ ಪರಿಹಾರದ ಚೆಕ್ ನೀಡಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


