ಸರಗೂರು: ಹೆಚ್.ಡಿ.ಕೋಟೆ ತಾಲ್ಲೂಕಿನ ಅಂಕನಾಥಪುರ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮವಾಗಿದ್ದು, ಸುಮಾರು 20 ವರ್ಷಗಳಿಂದಲೂ ರಸ್ತೆ ಕಾಮಗಾರಿ ಚರಂಡಿ ವ್ಯವಸ್ಥೆ ಮನೆ ನಿರ್ಮಾಣ, ಬಸ್ಸು ಸಂಪರ್ಕ, ಸ್ಮಶಾನ ಇನ್ನೂ ಮುಂತಾದ ಸಮಸ್ಯೆ ಗಳ ಪರ್ವ ಗ್ರಾಮದ್ದಾಗಿದೆ.
ಅದರ ಮಧ್ಯದಲ್ಲೂ 2019 ರಂದು ಅತಿವೃಷ್ಟಿಯಿಂದಾಗಿ ತಾರಕ ಜಲಾಶಯದಿಂದ ಹರಿದು ಬಂದು ನೀರಿನಿಂದ ಸೇತುವೆ ಸಂಪೂರ್ಣ ಕೊಚ್ಚಿಹೋಗಿದ್ದು ಇದನ್ನು ನಿರ್ಮಿಸಲು ನವಂಬರ್ 2021 ವರಗೆ ಕಾಯಬೇಕಾಯಿತ್ತು. ಆದರೆ ಈ ಸೇತುವೆಯನ್ನು ಕಳಪೆ ಮಟ್ಟದಲ್ಲಿ ನಿರ್ಮಿಸಿ ಗ್ರಾಮದ ಜನರು ಇನ್ನೂ ಹೆಚ್ಚಿನ ಅತಂಕದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೇತುವೆಯ ಅಕ್ಕ ಪಕ್ಕದಲ್ಲಿ ಕಂದಕಗಳು ಉಂಟಾಗಿದ್ದು ಕಲ್ಲು ಗಳು ಕಿತ್ತುಹೋಗಿವೆ. ಹಾಗೆಯೇ ಮಳೆ ನೀರು ನದಿಗೆ ಹೋಗುವಂತೆ ಚರಂಡಿ ನಿರ್ಮಿಸಿಲ್ಲ ಜೊತೆಗೆ ಸೆತುವೆಗೆ ಸರಿಹೊಂದುವಂತೆ ರಸ್ತೆ ಸಂಪರ್ಕ ವನ್ನು ನಿರ್ಮಿಸಿಲ್ಲ . ಜೇಡಿ ಮಣ್ಣು ಹಾಕಿದ್ದು, ಬೈಕ್ ಕಾರು ಮತ್ತು ಇತರೆ ವಾಹನಗಳು ಸಂಚರಿಸಲು ಅಗದೆ ಜಾರಿ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹರಿಸುವ ಮೂಲಕ ಸಾರ್ವಜನಿಕರಿಗೆ ಸಂಚಾರ ಸುಗಮಗೊಳಿಸುವಂತೆ ಅಂಕನಾಥಪುರ ಗ್ರಾಮದ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ವರದಿ: ಚಂದ್ರಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700