ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಟಿ.ಟಿ.ರಸ್ತೆಯಲ್ಲಿರುವ ಎಸ್ ಜಿ ಕೆ ಮೊಬೈಲ್ ಅಂಗಡಿಯ ಬೀಗವನ್ನು ಮುರಿದು ಮೊಬೈಲ್ ಕಳುವು ಮಾಡಿದ್ದ ಆರೋಪಿಗಳನ್ನು ಬಂದಿಸುವಲ್ಲಿ ಹಿರಿಯೂರು ನಗರ ಪೋಲಿಸರು ಯಶಸ್ವಿಯಾಗಿದ್ದಾರೆ.
ಹಿರಿಯೂರು ಉಪವಿಭಾಗದ ಪೋಲಿಸ್ ಉಪಾಧೀಕ್ಷರಾದ ಸೈಯದ್ ರೋಷನ್ ಜಮೀರ್ ರವರ ಉಸ್ತುವಾರಿಯಲ್ಲಿ ಹಿರಿಯೂರು ನಗರ ಪೋಲಿಸ್ ಠಾಣೆಯ ಪೋಲಿಸ್ ನಿರೀಕ್ಷಕರಾದ ವಿ ಎಸ್ ಶಿವಕುಮಾರ್ ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿ ಕಳವಾದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಿರಿಯೂರು ನಗರದ ಪ್ರಧಾನ ರಸ್ತೆಯಲ್ಲಿರುವ ರಂಜಿತ್ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ. ನೀಲಿ ಮತ್ತು ಕಪ್ಪು ಬಣ್ಣದ ಸ್ಪ್ಲೇಂಡರ್ ಪ್ಲಸ್ ಬೈಕ್ ನಲ್ಲಿ ಬಂದ ಆರೋಪಿಗಳನ್ನು ಹಿಡಿದು ವಿಚಾರ ಮಾಡಿದಾಗ ಕಳವು ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಬಂದಮ್ಮ ದೇವಸ್ಥಾನದ ಸಮೀಪದ ಮಿರ್ಜಾ ಬಡಾವಣೆಯ ಸಲೀಂಬೇಗ್ (20), ಗೋಪಾಲಪುರದ ಜಾಫರ್ ಸಾಧಿಕ್(19), ಸಿಗ್ಬತ್ ಹೋಟೆಲ್ ಬಳಿಯ ನಿವಾಸಿ ನವಾಜ್(19) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ರೂ. 1,22,000 ಮೌಲ್ಯದ ಹನ್ನೊಂದು ಮೊಬೈಲ್ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 70,000 ರೂ ಬೆಲೆ ಬಾಳುವ ಹಿರೋಹೊಂಡಾ ಸ್ಪ್ಲೆಂಡರ್ ಬೈಕ್ ಸೇರಿದಂತೆ ಒಟ್ಟು1,92,000 ರೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪೋಲಿಸರು ಆರೋಪಿಗಳ ವಿರುದ್ಧ ಐ ಪಿ ಸಿ ಸೆಕ್ಸನ್ 457, 380 ರ ಪ್ರಕಾರ ಕೇಸ್ ದಾಖಲಿಸಲಾಗಿದ್ದು, ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆ ಸಂಬಂಧ ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿದ ಎಸ್ ಜಿ ಕೆ ಮೊಬೈಲ್ ಅಂಗಡಿಯ ಮಾಲಿಕರಾದ ಮಾರುತಿ ಮಾತನಾಡಿ, ಅಂಗಡಿಯಲ್ಲಿ ಕಳ್ಳತನ ಮಾಡಿದವರ ಪೈಕಿ ಓರ್ವ ನಮ್ಮ ಅಂಗಡಿಯ ಎಂದು ತಿಳಿಸಿದರು.
ಪಿ ಎಸ್ ಐ ರವರಾದ ವಿಶ್ವನಾಥ ಹಾಗೂ ಅಪರಾಧ ವಿಭಾಗದ ಪಿ ಎಸ್ ಅನುಸೂಯ ಎಸ್ ,ಸಿಬ್ಬಂದಿಯವರಾದ ಮಹಮ್ಮದ್ ಹನೀಫ್ ಹಡಗಲಿ, ತಿಮ್ಮರಾಯಪ್ಪ, ವಸಂತಕುಮಾರ್, ಪರಮೇಶ್, ಸಿದ್ಧಲಿಂಗೇಶ್ವರ ಬಿ ವೈ ರವರ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


