ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಣಕೆರೆ ಗೊಲ್ಲರ ಹಟ್ಟಿ ಗ್ರಾಮದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ 10ನೇ ವರ್ಷ ಪೂರೈಸಿದ ನಾಗಶ್ರೀ ಸ್ವಸಹಾಯ ಸಂಘದ ದಶಮಾನೋತ್ಸವ ಹಾಗೂ ಜ್ಞಾನವಿಕಾಸ ಯೋಜನೆಗೆ ಚಾಲನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಯೋಜನಾದಿಕಾರಿಗಳಾದ ಅಂಕಿತಾ ಶೆಟ್ಟಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸಂಸ್ಥೆಯು ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಇನ್ನು ಅನೇಕ ಯೋಜನೆಗಳು ಕಾರ್ಯರೂಪಕ್ಕೆ ಜಾರಿಗೆ ತರುವ ನಿಟ್ಟಿನಲ್ಲಿ ಯೋಜನೆ ಇದೆ ಎಂದರು.
ಮಾಯಸಂದ್ರ ವಲಯದ ಮೇಲ್ವಿಚಾರಕರಾದ ಅಕ್ಷತರವರು ಮಾತನಾಡಿ, ಈ ಜ್ಞಾನವಿಕಾಸ ಯೋಜನೆಯನ್ನು ಇನ್ನು ಅನೇಕ ಹಳ್ಳಿಗಳಿಗೆ ವಿಸ್ತರಿಸಿ ಜನರಿಗೆ ಉತ್ತಮ ರೀತಿಯಲ್ಲಿ ಯೋಜನೆಯ ಅನುಕೂಲಗಳು ತಲುಪುವಂತೆ ಕೆಲಸ ಮಾಡುತ್ತೇವೆ.
ಈ ಸಮಾರಂಭದಲ್ಲಿ ಸೊರವನಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರಾದ ಇಂದಿರಾ ಹಾಗೂ ಗೊಲ್ಲರಹಟ್ಟಿಯ ಮುಖಂಡರಾದ ಕೃಷ್ಣಸ್ವಾಮಿ ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿಯಾದ ಸುಧಾ ಡಿ.ಎಂ. ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ವರದಿ : ಸುರೇಶ್ ಬಾಬು ಎಂ ತುರುವೇಕೆರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700