ಚಿತ್ರದುರ್ಗ: ಹಿರಿಯೂರು ನಗರದ ಕಾರ್ಮಿಕರ ಇಲಾಖೆಯಲ್ಲಿ ನಕಲಿ ಲೇಬರ್ ಕಾರ್ಡ್ ಮಾಡಿಸಿಕೊಡುತ್ತಿರುವ ದ್ವಿದಸ ಸಹಾಯಕರಾದ ಜೋಗೇಶ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಹಿರಿಯೂರು ನಗರದ ಸಿರಿಗನ್ನಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ವತಿಯು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ವೇಳೆ ನಮ್ಮ ತುಮಕೂರು ಜೊತೆಗೆ ಮಾತನಾಡಿದ ಸಿರಿಗನ್ನಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ವತಿಯ ಮುಕುಂದ, ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಮಂಡಳಿಯು ಸೌಲಭ್ಯಗಳನ್ನು ಪಡೆಯಲು ಕಾಮನ್ ಸರ್ವಿಸ್ ಸೆಂಟರ್ ನ ಆನ್ ಲೈನ್ ನ ಮುಖಾಂತರ , ಮಧ್ಯವರ್ತಿಗಳ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್ ಗಳು ನೋಂದಣಿಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಹ ಇದರ ಬಗ್ಗೆ ತೀವ್ರವಾಗಿ ಗಮನ ನೀಡದೆ ಇರುವುದು ಬೇಸರದ ಸಂಗತಿಯಾಗಿದೆ.
ಕಟ್ಟಡ ಕಾರ್ಮಿಕರ ಇಲಾಖೆ ದೊರೆಯುವ ಸೌಲಭ್ಯಗಳು ಯಾವುದು ಸಹ ನಿಜವಾದ ಕಟ್ಟಡ ಕಾರ್ಮಿಕರಿಗೆ ದೊರೆಯದ ರೀತಿಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚುತ್ತಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಸುಪ್ರಿಂ ಕೋರ್ಟ್ ಆದೇಶದಂತೆ ನಿಗದಿಪಡಿಸಿರುವಂತಹ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆಂದೇ ಇರುವಂತಹ ಸೆಸ್ ಹಣವನ್ನು ಅವರಿಗಾಗಿಯೇ ಬಳಸಬೇಕು ಎಂಬ ನಿರ್ದೇಶನವಿದ್ದರೂ, ಇದ್ಯಾವುದಕ್ಕೂ ಮನ್ನಣೆ ಕೊಡದ ಸರ್ಕಾರ ಮತ್ತು ಮಂಡಳಿಯು ನಕಲಿ ಕಟ್ಟಡ ಕಾರ್ಮಿಕರ ಇಲಾಖೆಯು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕದೇ ಇರುವುದೇ ದುರಾಷ್ಟಕರದ ವಿಷಯವಾಗಿದೆ ಎಂದರು.
ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್ ಗಳನ್ನು ರದ್ದುಪಡಿಸಿ, ನಿಜವಾದ ಕಟ್ಟಡ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡ ಬೇಕಾಗಿದೆ. ಮಧ್ಯವರ್ತಿಗಳ ಹಾವಳಿ ಒಂದು ಕಡೆ ಆದರೆ ಕಛೇರಿಯಲ್ಲಿರುವ ದ್ವಿದಸ ಸಹಾಯಕರಾಗಿ ಸರ್ಕಾರಿ ಕೆಲಸದಲ್ಲಿ ಉನ್ನತ ದರ್ಜೆಯಲ್ಲಿರುವ ಜೋಗೇಶ್ ಅವರು ಐದುನೂರರಿಂದ ಸಾವಿರ ರೂ. ಹಣ ಪಡೆದು ಕಾರ್ಮಿಕರ ಕಾರ್ಡನ್ನು ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ. ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ಕಾರ್ಮಿಕರ ಇಲಾಖೆಯ ಅಧಿಕಾರಿಯಾದ ಅಲ್ಲಾಭಕ್ಷಿ ಅವರು ನಮ್ಮ ತುಮಕೂರು ಜೊತೆಗೆ ಮಾತನಾಡಿ, ನಕಲಿ ಕಾರ್ಡುದಾರರ ಮೇಲೆ ಹಾಗೂ ನಕಲಿ ಕಾರ್ಡು ಮಾಡಿಕೊಡುವಂತಹ ವ್ಯಕ್ತಿಗಳ ಮೇಲೆ ಈಗಾಗಲೇ ನಾನು ಕ್ರಮವಹಿಸಿದ್ದೇನೆ. ಅಂತಹ ಕಾರ್ಮಿಕರ ಕಾರ್ಡನ್ನು ಈಗಾಗಲೇ ಸಾಕಷ್ಟು ತಿರಸ್ಕರಿಸಿದ್ದೇವೆ. ನಾನು ಸಹ ಸಾಕಷ್ಟು ನಕಲಿ ಕಾರ್ಮಿಕರ ಕಾರ್ಡುಗಳು ಮಾಡಿಸಿಕೊಂಡಿರುವ ಹಾಗೂ ಮಾಡಿಸಿಕೊಟ್ಟವರ ಮೇಲೆ ಕ್ರಮ ವಹಿಸಿದ್ದೆನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕರ ಇಲಾಖೆಯ ನಿರೀಕ್ಷಕರಾದ ಅಲ್ಲಾಭಕ್ಷಿ, ಶ್ರೀಮತಿ ಸಕೀನಾ ಸೈಯದ್, ಸಿರಿಗನ್ನಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಮುಕುಂದ, ಸಿದ್ದೇಶ್ವರಪ್ಪ,ಅಂಜಿನಪ್ಪ, ರಂಗಸ್ವಾಮಿ, ತಿಪ್ಪೇಸ್ವಾಮಿ, ಹಬೀಬ್, ಷಣ್ಮುಗಂ, ಗಿರೀಶ್ ಬಾಬು, ಶಬೀರ್,ಓಬಳೇಶ್ ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


