ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಂಜೀವ ಪಾಟೀಲ್ ಅವರ ಹೆಸರಿನಲ್ಲಿ ನಕಲಿ ಇನಸ್ಟಾಗ್ರಾಂ ಖಾತೆ ತೆರೆದು ಹಣ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಎಚ್ಚರವಹಿಸುವಂತೆ ಎಸ್ .ಪಿ ಸಂಜೀವ ಪಾಟೀಲ ಮನವಿ ಮಾಡಿದ್ದಾರೆ.
ಎಸ್ಪಿ ಸಂಜೀವ ಪಾಟೀಲ ಹೆಸರಿನಲ್ಲಿ ಸ್ನೇಹಿತರಿಗೆ , ಪರಿಚಯಸ್ಥರಿಗೆ ಹಣ ಕೇಳಲಾಗುತ್ತಿದೆ. ಈವರೆಗೆ ಅನೇಕರಿಗೆ ಹಣ ಕೇಳಿ ಗೂಗಲ್ ಪೇ ಮಾಡುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಎಸ್ .ಪಿ ಸಂಜೀವ ಪಾಟೀಲ ಅವರ ಗಮನಕ್ಕೆ ವಿಷಯ ಬಂದಿದ್ದು, ಕೂಡಲೇ ಇದನ್ನು ತಿರಸ್ಕರಿಸುವಂತೆ ಕೋರಿದ್ದಾರೆ.
ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಯಾರೋ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದುದ್ದ ಕಂಡು ಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy