ಶಿವಮೊಗ್ಗ: ಶಿವಮೊಗ್ಗದ ನಿರ್ಣಯ ನಮಗೆ ಅನ್ವಯ ಆಗಲ್ಲ. ಅವರದ್ದೇ ಬೇರೆ, ನಮ್ಮದೇ ಬೇರೆ ರೈತ ಸಂಘಟನೆ. ಅವರು ನನ್ನನ್ನು ಹೇಗೆ ಉಚ್ಚಾಟಿಸೋಕೆ ಬರುತ್ತೆ. ಅವರು ಅವರ ಸಂಘಟನೆಯವರನ್ನು ಉಚ್ಚಾಟಿಸಬಹುದು. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಅವರು, ಯಾರೂ ತಲೆಮಾಸಿದವರು ನನ್ನ ತೇಜೋವಧೆ ಮಾಡಿದ್ರು. ಹೆಣ್ಣುಮಗಳ ಸೀರೆ ಸರಿಯಿಲ್ಲ ಅಂತ ಹೇಳಿಕೊಳ್ತಾರೆ. ಹಾಗಂತ ಅವರ ಸೀರೆ ಸರಿಯಿದ್ಯಾ ನೋಡಬೇಕಲ್ಲ. ಈ ಕೋಡಿಹಳ್ಳಿ ಇಂತದ್ದಕ್ಕೆಲ್ಲ ಹೆದರೋದಿಲ್ಲ ಎಂದರು.
ನನ್ನನ್ನು ಯಾರೂ ಉಚ್ಛಾಟನೆ ಮಾಡಲು ಬರಲ್ಲ. ರೈತ ಸಂಘದ ಅಧ್ಯಕ್ಷನಾಗಿ ನಾನೇ ಮುಂದುವರೆಯುತ್ತೇನೆ. ಎಲ್ಲಾ ಪದಾಧಿಕಾರಿಗಳ ಬೆಂಬಲ ನನಗಿದೆ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸೋದು ರೈತರಿಗೆ ಮಾತ್ರ ಸೇರಿದ್ದು ಎಂದು ಅವರು ಇದೇ ವೇಳೆ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


