ಬೆಂಗಳೂರು: ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಕರಣದಲ್ಲಿ ಕಾಮಾಕ್ಷಿ ಪಾಳ್ಯ ಪೊಲೀಸರಿಂದ ಬಂಧನವಾಗಿರುವ ಆರೋಪಿ ನಾಗೇಶ್ ವಿಚಾರಣೆ ವೇಳೆ ಪೊಲೀಸರ ಮುಂದೆ ಕೇಲವು ಸ್ಫೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.
ಆರೋಪಿಯನ್ನು ಬಂಧಿಸಿದ ನಂತರ ಆಸಿಡ್ ಹಾಕಿದ್ದು ಯಾಕೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಉತ್ತರಿಸಿದ ನಾಗೇಶ್,ನಾನು ಆಸಿಡ್ ಹಾಕುವುದಕ್ಕೆ ಯುವತಿಯೇ ಕಾರಣ ಎಂದಿದ್ದಾನೆ
“ನಾನು ಆಸಿಡ್ ನ್ನು ಯುವತಿಯ ಮುಖಕ್ಕೆ ಹಾಕಬೇಕು ಅಂದುಕೊಂಡಿರಲಿಲ್ಲ. ಘಟನೆ ಹಿಂದಿನ ದಿನ ಯುವತಿಯ ಹತ್ತಿರ ಬಾಯಿ ಮಾತಿಗೆ ಆಸಿಡ್ ಹಾಕ್ತೀನಿ ಎಂದು ಹೇಳಿದ್ದೆ. ಆದರೆ, ಯುವತಿಯು ಅದನ್ನು ಆಕೆಯ ತಂದೆಗೆ ಹೇಳಿದಳು. ಬಳಿಕ ಸಂತ್ರಸ್ತೆಯ ತಂದೆಯು ನನ್ನ ಅಣ್ಣನಿಗೆ ಹೇಳಿದರು. ನನ್ನ ಅಣ್ಣ ನನಗೆ ಚೆನ್ನಾಗಿ ಬೈದಿದ್ದ. ಇದರಿಂದ ಆಸಿಡ್ ಹಾಕಿಯೇ ಬಿಡೋಣ ಎಂದು ತಿರ್ಮಾನಿಸಿಬಿಟ್ಟೆ” ಎಂದು ಆಸಿಡ್ ನಾಗ ಪೋಲಿಸರಿಗೆ ಹೇಳಿಕೆಯನ್ನು ನೀಡಿದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


