ಹಿರಿಯೂರು: ತಾಲ್ಲೂಕಿನ ತಾಲ್ಲೂಕು ತಹಶೀಲ್ದಾರರಾದ ಪ್ರಶಾಂತ ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಾಣಿಕಾಲೇಜಿನ ಪ್ರಾಂಶುಪಾಲ ಡಿ. ಧರೇಂದ್ರಯ್ಯ, ಕೇರಳದ ಸಮಾಜದ ಸಮಾಜಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರು ನಾರಾಯಣ ಗುರುಗಳು ವೈಕಂ ಚಳುವಳಿಯ ಪ್ರತಿಪಾದಕರಾಗಿದ್ದು, ಭೂ ರಹಿತ ರೈತರಿಗೆ ಭೂಚಳುವಳಿಯ ಮೂಲಕ ಭೂಮಿ ಕೊಡಿಸಲು ಹೋರಾಡಿದರು, ನಾರಾಯಣ ಗುರುಗಳ ಮಹಾನ್ ವ್ಯಕ್ತಿಗಳ ಆದರ್ಶಗಳು ಇಂದಿನ ಯುವಕರಿಗೆ ದಾರಿದೀಪವಾಗಿದೆ. ನಾರಾಯಣ ಗುರುಗಳು ಸಮಾಜದ ಪಿಡುಗುಗಳಾದ ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿಗಳ ತೊಡೆದು ಹಾಕಲು ಹೋರಾಡಿದರು ಎಂದರು.
ತಹಶೀಲ್ದಾರ್ ಪ್ರಶಾಂತ ಕೆ. ಪಾಟೀಲ ಅವರು ಮಾತನಾಡಿ, ಹಿಂದುಳಿದ ವರ್ಗದವರಿಗೆ ದೇವಸ್ಥಾನ ಪ್ರವೇಶ ದೊರಕಿಸಿ ಕೊಡಲು ಹೋರಾಡಿದ ಅವರು ಮಹಾನ್ ಮಾನವತಾವಾದಿಯಾಗಿದ್ದು, ಅಂತರ್ ಜಾತಿಯ ವಿವಾಹಕ್ಕೆ ಒತ್ತು ನೀಡಿದ ಇವರು ಸರ್ವಜನರಲ್ಲೂ ಭ್ರಾತೃತ್ವವನ್ನು ಬೆಳೆಸಲು ಹೋರಾಡಿದರು, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ಇವರು ಸಾಮಾಜಿಕಕ್ರಾಂತಿಯನ್ನೇ ಮಾಡಿದರು ಎಂದರು.
ನಂತರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಜ್ಜಪ್ಪ ಯಾನೆ ಅಜಯ್ ಕುಮಾರ್ ಅವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು” ಅವರ ಜೀವನ ಚರಿತ್ರೆಯ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರರಾದ ಪ್ರಶಾಂತ್ ಪಾಟೀಲ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಜ್ಜಪ್ಪ ಯಾನೆ ಅಜಯ್ ಕುಮಾರ್, ಸದಸ್ಯರುಗಳಾದ ಜಗದೀಶ್, ವಿಶಾಲಾಕ್ಷಿ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮನೋಹರ್, ಕಾರ್ಮಿಕ ಇಲಾಖೆಯ ಅಧಿಕಾರಿಯಾದ ಅಲ್ಲಾ ಭಕ್ಷಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಉಪನೋಂದಣಿ ಅಧಿಕಾರಿ ಕಲಾವತಿ ಜೆ, ಶಿರಸ್ತೇದಾರ್ ತಿಪ್ಪೇಸ್ವಾಮಿ, ಶ್ರೀನಿವಾಸ್ ರೆಡ್ಡಿ, ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


