ಹಣಕಾಸಿನ ತೊಂದರೆಯಿಂದಾಗಿ ಚಿತ್ರೀಕರಣ ತಡವಾಗಿದ್ದಕ್ಕೆ ನಿರ್ಮಾಪಕನಿಗೆ ಖ್ಯಾತ ನಟರೊಬ್ಬರು ಬೆದರಿಕೆ ಹಾಕಿದ್ದು, ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್‍ಸಿಆರ್ ದಾಖಲಾಗಿದೆ.
ನಿರ್ಮಾಪಕ ಭರತ್ ವಿಷ್ಣುಕಾಂತ್ ಎಂಬುವರು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಎಂಬ ಚಿತ್ರ ನಿರ್ಮಿಸುತ್ತಿದ್ದು, ಈ ಚಿತ್ರದಲ್ಲಿ ಧ್ರುವನ್ ಎಂಬುವರು ನಾಯಕ ನಟನಾಗಿ ನಟಿಸುತ್ತಿದ್ದಾರೆ.
ಹಣಕಾಸಿನ ತೊಂದರೆಯಿಂದಾಗಿ ಭರತ್ ಅವರು ಈ ಚಿತ್ರದ ಚಿತ್ರೀಕರಣವನ್ನು ತಡವಾಗಿ ಮಾಡುತ್ತಿರುವುದರಿಂದ ಬೇಸರಗೊಂಡ ಧ್ರುವನ್ ಈ ಬಗ್ಗೆ ನಟ ದರ್ಶನ್ ಅವರ ಬಳಿ ಹೋಗಿ ಹೇಳಿಕೊಂಡು ಅವರಿಂದ ಭರತ್‍ಗೆ ಫೋನ್ ಮಾಡಿಸಿದ್ದಾರೆ.
ದರ್ಶನ್ ಅವರು ಕರೆ ಮಾಡಿ ಬೆದರಿಕೆ ಹಾಕಿದ್ದು, ಈ ಬಗ್ಗೆ ಭರತ್ ಅವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದರ್ಶನ್ ಅವರು ಧ್ರುವನ್ ಮೊಬೈಲ್‍ನಿಂದಲೇ ಭರತ್‍ಗೆ ಕರೆ ಮಾಡಿರುವುದು ಗೊತ್ತಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy