ದೇವನಹಳ್ಳಿ, ಸೆಪ್ಟೆಬಂರ್ 17: ಪ್ರೀತಿಸಿದ ಯುವತಿ ಕೈಕೊಟ್ಟು ಮತ್ತೊಬ್ಬನ್ನು ವಿವಾಹವಾಗಿದ್ದಕ್ಕೆ ಮನನೊಂದಿದ್ದ ಪಾಗಲ್ ಪ್ರೇಮಿಯೊಬ್ಬ ಹಳೇಯ ಪ್ರೇಯಸಿಗೆ 20ಕ್ಕೂ ಹೆಚ್ಚು ಸಲ ಚಾಕುವಿನಿಂದ ಇರಿದು ಕೊಂದಿದ್ದಾನೆ. ತಾನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಪ್ರೀತಿಸಿದಾಗಿ ನವವಧುವಾಗಿ 15 ದಿನಗಳಷ್ಟೇ ಕಳೆದಿತ್ತು. ಪ್ರೀತಿಸಿದ್ದ ಹುಡುಗ ತನ್ನ ಪ್ರೇಯಸಿ ಕೈಕೊಟ್ಟು ಮತ್ತೊಬ್ಬನ ಪಲ್ಲಂಗದಲ್ಲಿ ಪವಣಿಸುತ್ತಿರುವುದನ್ನು ಸಹಿಸದೇ ಪಾಗಲ್ ಆಗಿದ್ದ. ಪತಿಯ ಮನೆಯಿಂದ ತವರು ಮನೆಗೆ ಬಂದಿದ್ದ ಪ್ರೇಯಸಿಯ ವಿಚಾರ ಅದು ಹೇಗೋ ಪಾಗಲ್ ಪ್ರೇಮಿಗೆ ತಿಳಿದಿದೆ. ಪ್ರೇಯಸಿಯನ್ನು ಮಾತನಾಡಿಸುವ ಸೋಗಿನಲ್ಲಿ ಬಂದು ಕೊಟ್ಟಿಗೆಯಲ್ಲಿ 20ಕ್ಕೂ ಹೆಚ್ಚು ಸಲ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ.
ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ 23 ವರ್ಷದ ಸೌಮ್ಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ, ಚಾಕುವಿನಿಂದ ಇರಿದುಪಾಗಲ್ ಪ್ರೇಮಿ ತಾನೂ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪಾಗಲ್ ಪ್ರೇಮಿಯನ್ನು ಬಂಧಿಸಲು ಹೋದ ಪೊಲೀಸರೇ ಆರೋಪಿ ಸುಬ್ರಮಣ್ಯನನ್ನು ದೇವನಹಳ್ಳಿ ಆಕಾಶ್ ಆಸ್ಪತ್ರೆಯ ಸೇರಿಸಿದ್ದು ಆತನಿಗೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೌಮ್ಯ ಮತ್ತು ಆರೋಪಿ ಸುಬ್ರಮಣ್ಯ ಬೆಂಗಳೂರಿನ ನಾಗವಾರದ ಕಾಫಿ ಡೇನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಕೆಲಸ ಬಿಟ್ಪಿದ್ದ ಸೌಮ್ಯ ಪ್ರಿಯಕರ ಸುಬ್ರಮಣ್ಯನೊಂದಿಗೆ ಅಂತರ ಕಾಯ್ದುಕೊಂಡಿದ್ದಳು. 15 ದಿನಗಳ ಹಿಂದೆ ಬೇರೆ ಹುಡುಗನ ಜೊತೆ ಮದುವೆಯಾಗಿದ್ದಳು. ಪ್ರೀತಿಸಿದ ಹುಡುಗಿ ಬೇರೊಬ್ಬ ಹುಡುಗನೊಂದಿಗೆ ಮದುವೆಯಾಗಿದ್ದಕ್ಕೆ ಸುಬ್ರಮಣ್ಯ ಕೋಪಗೊಂಡಿದ್ದ.ನಿನ್ನೆ ಸೌಮ್ಯ ತವರಿಗೆ ಬಂದಿರುವ ವಿಷಯ ಸುಬ್ರಮಣ್ಯನಿಗೆ ತಿಳಿದಿತ್ತು. ಅಂತೆಯೇ ರಾತ್ರಿ ಆವತಿಯ ಸೌಮ್ಯ ಮನೆಗೆ ಬಂದು ಆಕೆಗೆ ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಇರಿದು ಪರಾರಿಯಾಗಿದ್ದ. ಸೌಮ್ಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದರು. ರಕ್ತದ ಮಡುವಿನಲ್ಲಿ ಓದ್ದಾಡುತ್ತಿದ್ದ ಸೌಮ್ಯಳನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಳು.
ಪ್ರಿಯತಮೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಸುಬ್ರಮಣ್ಯ ನಂತರ ಆತ ಸಹ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy