ತುಮಕೂರು: ವಿಧಿ ಪ್ರಜ್ಞ ಕರ್ನಾಟಕ ಕಾನೂನು ಸ್ವಯಂ ಸೇವಾ ಸಂಸ್ಥೆ, (ರಿ.) ಹಾಗೂ ಆಚಾರ್ಯ ಇನ್ಸಿಟ್ಯೂಟ್ ಆಫ್ ಗ್ರಾಜುಯೇಟ್ ಸ್ಟಡೀಸ್ ಕ್ರಿಮಿನಾಲಜಿ ಹಾಗೂ ವಿಧಿ ವಿಜ್ಞಾನ ವಿಭಾಗ, ಬೆಂಗಳೂರು ಇವರ ಸಂಯುಕ್ತಾ ಆಶ್ರಯದಲ್ಲಿ ಜನಸಾಮಾನ್ಯರಿಗಾಗಿ ಹೊಸ ಕ್ರಿಮಿನಲ್ ಕಾನೂನುಗಳ ಉಚಿತ ಆನ್ಸೆನ್ ಅಧ್ಯಯನ ಕಾರ್ಯಾಗಾರ ಡಿಸೆಂಬರ್ 8 ರಿಂದ 29 ವರೆಗೆ ನಡೆಯಲಿದೆ ಎಂದು ವಿಧಿ ಪ್ರಜ್ಞ ಕರ್ನಾಟಕ ಕಾನೂನು ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ವಕೀಲರಾದ ಡಾ.ಜಿ ಪುರುಷೋತ್ತಮ್ ತಿಳಿಸಿದ್ದಾರೆ.
ಹೊಸ ಕ್ರಿಮಿನಲ್ ಕಾನೂನುಗಳ ಉಚಿತ ಆನ್ಲೈನ್ ಅಧ್ಯಯನ ಪ್ರಾರಂಭೋತ್ಸವ ಉದ್ಘಾಟನೆಯನ್ನು ಟಿ.ವಿ. ಗುರುಪ್ರಸಾದ್, ಐಪಿಎಸ್, ಮಾಜಿ ಡಿಐಜಿ, ಸಿಐಡಿ ಹಾಗೂ ಹೋಂ ಗಾಡ್ಸ್ ಇಲಾಖೆ ಇವರು ನೆರವೇರಿಸಲಿದ್ದಾರೆ.
ಡಿಸೆಂಬರ್ 8ರಿಂದ ಡಿಸೆಂಬರ್ 29ರವರೆಗೆ ಪ್ರತಿ ದಿನ ರಾತ್ರಿ 8ರಿಂದ 9 ಗಂಟೆಯವರೆಗೆ ಕಾರ್ಯಕ್ರಮ ಝೂಮ್(Zoom) ಮೂಲಕ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಆಸಕ್ತರು ಇಂದು ರಾತ್ರಿ 8 ಗಂಟೆಗೆ ಸರಿಯಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಮೀಟಿಂಗ್ ನಲ್ಲಿ ಭಾಗವಹಿಸಬಹುದು.
https://us02web.zoom.us/j/89155481042?pwd=dsTxIOvzVlFq5kzPqDJRRKYkowVubP.1
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx