ಬೆಂಗಳೂರು: ಕೊವಿಡ್ ನಿಯಂತ್ರಣದ ಹೆಸರಿನಲ್ಲಿ ನಾಳೆ ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಘೋಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಓಲಾ, ಉಬರ್ ಚಾಲಕರು, ಫುಡ್ ಶಾಪ್ಸ್ ಮಾಲಿಕರು ಸಂಕಷ್ಟಕ್ಕೀಡಾಗಿದ್ದು, ನೈಟ್ ಕರ್ಫ್ಯೂ ಜಾರಿಯಾದರೆ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಹಾಗಾಗಿ ನೈಟ್ ಕರ್ಫ್ಯೂನಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ನಾವು 2 ವರ್ಷದಿಂದ ನಷ್ಟ ಅನುಭವಿಸಿದ್ದೇವೆ. ನಮಗೆ ರಾತ್ರಿ ವೇಳೆಯೇ ಹೆಚ್ಚು ಬಾಡಿಗೆಗಳು ಬರುವುದು. ನೈಟ್ ಕರ್ಫ್ಯೂ ಜಾರಿಯಾದರೆ ನಮಗೆ ಲಾಸ್ ಆಗುತ್ತದೆ. ಹೀಗಾಗಿ ದಯವಿಟ್ಟು ನೈಟ್ ಕರ್ಫ್ಯೂ ಜಾರಿ ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಓಲಾ, ಉಬರ್ ಚಾಲಕರು ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಬೀದಿಬದಿ ಫುಡ್ ಶಾಪ್ಸ್ ಮಾಲೀಕರು ಕೂಡ ನೈಟ್ ಕರ್ಫ್ಯೂವನ್ನು ವಿರೋಧಿಸಿದ್ದು, ರಾತ್ರಿ ವೇಳೆಯೇ ನಮ್ಮ ವ್ಯಾಪಾರ ವಹಿವಾಟು ನಡೆಯುವುದು. ನೈಟ್ ಕರ್ಫ್ಯೂ ಜಾರಿ ಮಾಡುವುದರಿಂದ ನಮಗೆ ನಷ್ಟವಾಗುತ್ತೆ. ರಾತ್ರಿ ವೇಳೆ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ನೈಟ್ ಕರ್ಫ್ಯೂ ಆದೇಶ ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy