nammatumakuru

    Subscribe to Updates

    Get the latest creative news from FooBar about art, design and business.

    What's Hot

    ಔರಾದ್: ಗ್ರಾಮೀಣ ಬದುಕಿಗೆ ಆಸರೆಯಾದ ‘ವಿಬಿ-ಜಿ ರಾಮ್ ಜಿ’ ಯೋಜನೆ – 125 ದಿನಗಳ ಉದ್ಯೋಗ, ದಿನಗೂಲಿ ₹382ಕ್ಕೆ ಏರಿಕೆ

    August 6, 2026

    ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ

    August 6, 2026

    ಸರಗೂರು: ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ‘ಮೇಧಾ ಸುರಕ್ಷಾ ಕೇಂದ್ರ’ ಶುಭಾರಂಭ

    August 6, 2026
    Facebook Twitter Instagram
    ಟ್ರೆಂಡಿಂಗ್
    • ಔರಾದ್: ಗ್ರಾಮೀಣ ಬದುಕಿಗೆ ಆಸರೆಯಾದ ‘ವಿಬಿ-ಜಿ ರಾಮ್ ಜಿ’ ಯೋಜನೆ – 125 ದಿನಗಳ ಉದ್ಯೋಗ, ದಿನಗೂಲಿ ₹382ಕ್ಕೆ ಏರಿಕೆ
    • ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ
    • ಸರಗೂರು: ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ‘ಮೇಧಾ ಸುರಕ್ಷಾ ಕೇಂದ್ರ’ ಶುಭಾರಂಭ
    • ಭೀಕರ ಬೈಕ್ ಅಪಘಾತ: ಮರದ ತುಂಡಿಗೆ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ದುರಂತ ಸಾವು, ಇಬ್ಬರ ಸ್ಥಿತಿ ಗಂಭೀರ
    • ಬಾಡಿಗೆ ಕಾರು ಚಾಲಕನ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹1 ಲಕ್ಷ ದಂಡ
    • ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ
    • ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ
    • ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಿರಾಕಾರ ಚೈತನ್ಯದಲ್ಲಿ ನಂಬಿಕೆ ಇರಿಸಿದರೆ ಜ್ಞಾನ, ಮುಕ್ತಿ ಪ್ರಾಪ್ತಿ
    ತಿಪಟೂರು February 7, 2022

    ನಿರಾಕಾರ ಚೈತನ್ಯದಲ್ಲಿ ನಂಬಿಕೆ ಇರಿಸಿದರೆ ಜ್ಞಾನ, ಮುಕ್ತಿ ಪ್ರಾಪ್ತಿ

    By adminFebruary 7, 2022No Comments2 Mins Read
    dasarighatta

    ತಿಪಟೂರು : ನಿರಾಕಾರವಾಗಿರುವ ಚೈತನ್ಯ ಶಕ್ತಿಯಲ್ಲಿ ನಂಬಿಕೆ ಇರಿಸಿ ಶ್ರದ್ಧಾ ಭಕ್ತಿಯಿಂದ ನಡೆದಾಗ ಮಾತ್ರವೇ ಜ್ಞಾನ ಮತ್ತು ಮುಕ್ತಿಯ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಶಾಖಾಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

    ತಾಲ್ಲೂಕಿನ ಧಾರ್ಮಿಕ ಕ್ಷೇತ್ರವಾದ ಆದಿಚುಂಚನಗಿರಿ ಶಾಖಾಮಠದ ದಸರೀಘಟ್ಟದ ಚೌಡೇಶ್ವರಿ ದೇವಾಲಯದಲ್ಲಿ ಭಾನುವಾರ ಚೌಡೇಶ್ವರಿ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ‘ನವಚಂಡಿಯಾಗ’ದಲ್ಲಿ ಭಾಗವಹಿಸಿ ಪೂರ್ಣಾಹುತಿ ನೀಡಿ ಮಾತನಾಡಿದರು.

    ಅಗೋಚರ ಹಾಗೂ ಅವ್ಯಕ್ತವಾದ ಶಕ್ತಿಯಲ್ಲಿ ವಿಜೃಂಭಿಸುವ ದೇವಿಯೂ ಜಗತ್ತನ್ನು ಕಾಪಾಡುತ್ತಿದ್ದಾಳೆ. ಇಂತಹ ದೇವಿಯ ಮಹಿಮೆಯನ್ನು ಅರಿಯಬೇಕಾದರೆ ಪಂಚೇಂದ್ರಿಯಗಳ ನಿಗ್ರಹ ಅತ್ಯವಶ್ಯಕ. ಪಂಚಭೂತಗಳಲ್ಲಿ ಅಪಾರ ನಂಬಿಕೆಯನ್ನು ಇರಿಸಿಕೊಂಡು ಬಹುನಿಷ್ಠೆಯಿಂದ ಶಕ್ತಿಯ ಆರಾಧನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಕಳೆದ 63 ವರ್ಷಗಳಿಂದ ಭಕ್ತರನ್ನು ಪೋಷಿಸಿಕೊಂಡು ಬರುತ್ತಿದ್ದ ಈ ದೇವಿಗೆ 353 ದಿನಗಳ ನಂತರ ಮತ್ತೇ ಪುನರ್ ಶಕ್ತಿಯನ್ನು ತುಂಬಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ಪ್ರತಿಯೊಬ್ಬ ಮನುಷ್ಯನು ತಾಯಿಯ ಮೂಲಕವೇ ಇನ್ನುಳಿದ ದೇವಾನುದೇವತೆಗಳ ದರ್ಶನವನ್ನು ಮಾಡಬೇಕು. ಅವ್ಯಕ್ತವಾದ ಹಾಗೂ ಅಗೋಚರವಾದ ಶಕ್ತಿಯನ್ನು ತನ್ನಲ್ಲಿ ಗರ್ಭೀಕರಿಸಿಕೊಂಡಿರುವ ದೇವತೆಯನ್ನು ಪೂಜ್ಯ ಭಾವನೆಯಿಂದ ಪೂಜಿಸುತ್ತಾ ತಮ್ಮ ಅಂತರಂಗದಲ್ಲಿನ ಅಳಲುಗಳನ್ನು ತೋಡಿಕೊಳ್ಳಬೇಕು. ದಿವ್ಯಾನುಭವವನ್ನು ಪಡೆದುಕೊಳ್ಳಲು ನಿರ್ಮಲವಾದ ಮನಸ್ಸಿನಿಂದ ಹಾಗೂ ಪರಿಶುದ್ಧ ಹೃದಯದಿಂದ ಸದಾಕಾಲ ದೇವಿಯನ್ನು ಆರಾಧಿಸುವ ಮೂಲಕ ಮನಃಶಾಂತಿಯನ್ನು ಪಡೆದುಕೊಳ್ಳಬೇಕು. ಧರ್ಮ, ದಯೆಯಿಂದ ಕೂಡಿದ ಬದುಕನ್ನು ನಡೆಸುತ್ತಾ ದೇವರು ಮತ್ತು ಭಕ್ತನ ನಡುವೆ ಮಧುರ ಬಾಂಧವ್ಯಗಳನ್ನು ಬೆಸೆದುಕೊಂಡು ನೆಮ್ಮದಿಯನ್ನು ಕಾಣಬೇಕಾಗಿದೆ. ಯಾವುದೇ ಕಾರಣಕ್ಕೂ ದೈವದ ಬಗ್ಗೆ ಹಗುರವಾದ ಭಾವನೆಗಳನ್ನು ತಾಳದೇ ಭಕ್ತಿಯಿಂದ ಭಜಿಸಿದರೆ ಶಕ್ತಿಯ ಸಂಚಲನವಾಗಿ ಮನಸ್ಸು ಹಸನಾಗುತ್ತದೆ ಎಂದರು.

    ಮುಕ್ತ ಮನಸ್ಸಿನಿಂದ ಅಂದು ಕೃಷ್ಣ ಕೊಟ್ಟಂತಹ ಸಂದೇಶವನ್ನು ಪಾಲಿಸಿದರೆ ನಮ್ಮ ಬದುಕಿಗೆ ಬೇಕಾದ ಜ್ಞಾನ ಪ್ರಾಪ್ತಿಯಾಗುತ್ತದೆ. ಆಧುನಿಕ ಕಾಲಕ್ಕೆ ಶ್ರೀಕೃಷ್ಣ ಎಷ್ಟು ಪ್ರಸ್ತುತವೋ, ಅಪ್ರಸ್ತುತವೋ ಎಂಬ ಸರಿಯಾದ ಚರ್ಚೆ ಯಾದಲ್ಲಿ, ಅಂದಿನ ಇಂದಿನ ಸಮಾಜಕ್ಕೆ ಕೃಷ್ಣ ಹೆಚ್ಚು ಪ್ರಸ್ತುತ. ಆದರೆ,ನಾವು ಕೃಷ್ಣನನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ.

    ಈ ಸಂದರ್ಭದಲ್ಲಿ ದಸರೀಘಟ್ಟ ಶಾಖಾಮಠದ ಕಾರ್ಯದರ್ಶಿ ಚಂದ್ರಶೇಖರನಾಥ ಸ್ವಾಮೀಜಿ, ಮೈಸೂರು ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ, ಮಂಗಳೂರು ಶಾಖಾಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಶೃಂಗೇರಿ ಶಾಖಾಮಠದ ಗುಣನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಾಥ ಸ್ವಾಮೀಜಿ, ಕಬ್ಬಳಿ ಶಾಖಾಮಠದ ಶಿವಪುತ್ರ ಸ್ವಾಮೀಜಿ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಷಡಕ್ಷರಿ, ಮಾಜಿ ವಿಧಾನಪರಿಷತ್ ಸದಸ್ಯ ಡಿ.ಎಲ್.ಜಗದೀಶ್, ಶ್ರೀರಂಗ ಆಸ್ಪತ್ರೆಯ ವೈದ್ಯ ಡಾ.ವಿವೇಚನ, ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್, ಬೆಂಗಳೂರಿನ ರಾಮಕೃಷ್ಣಪ್ಪ, ಭಕ್ತಾಧಿಗಳಾದ ಡಾ.ಜಿತೇಂದ್ರ, ರವಿಸಿದ್ಧಪ್ಪ, ಲಲಿತಾದೇವಿ ಗೋಪಾಲ್, ಹಾಸನ ರವಿಕುಮಾರ್, ಗುಡಿಗೌಡ ಹುಚ್ಚೇಗೌಡ ಇದ್ದರು.

    ವರದಿ: ಆನಂದ್ ತಿಪಟೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ

    August 6, 2026

    ತಿಪಟೂರು: ನೀರು, ವಿದ್ಯುತ್ ಅಭಾವ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸುದ್ದಿಗೋಷ್ಠಿ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

    August 4, 2026

    ತಿಪಟೂರಿನಲ್ಲಿ ಜ್ಞಾನ ವಿಕಾಸ ಮಹಿಳಾ ವಿಚಾರಗೋಷ್ಠಿ: ಆರೋಗ್ಯ ಜಾಗೃತಿ ಹಾಗೂ ಸಾಂಸ್ಕೃತಿಕ ವೈಭವ

    August 3, 2026

    Leave A Reply Cancel Reply

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಔರಾದ್: ಗ್ರಾಮೀಣ ಬದುಕಿಗೆ ಆಸರೆಯಾದ ‘ವಿಬಿ-ಜಿ ರಾಮ್ ಜಿ’ ಯೋಜನೆ – 125 ದಿನಗಳ ಉದ್ಯೋಗ, ದಿನಗೂಲಿ ₹382ಕ್ಕೆ ಏರಿಕೆ

    August 6, 2026

    ಔರಾದ್ (ಬೀದರ್): ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಜಾರಿಯಾಗಿರುವ ‘ವಿಬಿ–ಜಿ ರಾಮ್…

    ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ

    August 6, 2026

    ಸರಗೂರು: ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ‘ಮೇಧಾ ಸುರಕ್ಷಾ ಕೇಂದ್ರ’ ಶುಭಾರಂಭ

    August 6, 2026

    ಭೀಕರ ಬೈಕ್ ಅಪಘಾತ: ಮರದ ತುಂಡಿಗೆ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ದುರಂತ ಸಾವು, ಇಬ್ಬರ ಸ್ಥಿತಿ ಗಂಭೀರ

    August 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.