ನ್ಯೂಡಲ್ಸ್ ಅಂದ್ರೆ ಚೈನಿಸ್ ಫುಡ್ ಎಂದೇ ಪ್ರಚಲಿತ. ಆದ್ರೆ ಇಲ್ಲೊಂದು ದೇವಸ್ಥಾನದಲ್ಲಿ ನ್ಯೂಡಲ್ಸ್ ಅನ್ನೇ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆಯಂತೆ!
ಕೋಲ್ಕತ್ತಾದ ಕಾಳಿ ದೇಗುಲದಲ್ಲಿ ಇಂತಹದ್ದೊಂದು ವಿಶೇಷ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತಿದೆ. ಎಲ್ಲಾ ದೇವಸ್ಥಾನಗಳಲ್ಲಿ ಕೂಡ ಪ್ರಸಾದದ ರೂಪದಲ್ಲಿ ತಿಂಡಿ ತಿನಿಸುಗಳನ್ನು ನೀಡುವುದು ಸಾಮಾನ್ಯ ಆದ್ರೆ ಈ ದೇವಸ್ಥಾನದಲ್ಲಿ ನ್ಯೂಡಲ್ಸ್ ನ್ನೇ ಪ್ರಸಾದವಾಗಿ ಬಡಿಸಲಾಗುತ್ತದೆ.
ಅಂದ ಹಾಗೇ ಇಲ್ಲಿ ನ್ಯೂಡಲ್ಸ್ ಪ್ರಸಾದವಾಗಿ ಬಳಕೆಯಾಗಲು ಕಾರಣವಿದೆ. ಈ ಪ್ರದೇಶವನ್ನು ಚೀನಾ ಟೌನ್ ಅಂತನೇ ಕರೆಯಲಾಗುತ್ತದೆಯಂತೆ. ಅಲ್ಲದೇ ಇಲ್ಲಿರುವ ಕಾಳಿ ದೇವಿಯ ದೇವಾಲಯ ಚೈನಿಸ್ ದೇವಾಲಯ ಎಂದೇ ಕರೆಯಲಾಗುತ್ತದೆಯಂತೆ!
ಟಾಂಗ್ರಾ ಏರಿಯಾದಲ್ಲಿರುವ ಈ ಚೈನೀಸ್ ಕಾಳಿ ದೇಗುಲದಲ್ಲಿ ನ್ಯೂಡಲ್ಸ್, ಚಾಪ್ ಸ್ಯೂ, ಅನ್ನ ಹಾಗೂ ತರಕಾರಿಯ ಖಾದ್ಯಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.
ಬಂಗಾಳಿಗಳು ಕೂಡ ಈ ದೇಗುಲಕ್ಕೆ ಆಗಮಿಸ್ತಾರೆ ಹಾಗೂ ಕೈಯಲ್ಲೇ ಮಾಡಿದ ಕಾಗದವನ್ನು ಸುಡುವ ಮೂಲಕ ದುಷ್ಟ ಶಕ್ತಿಯನ್ನು ದೂರ ಇಡಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಚೈನೀಸ್ ಇನ್ ಸೆನ್ಸ್ ಸ್ಟಿಕ್ ಗಳ ಮೂಲಕ ಮೇಣದಬತ್ತಿಯನ್ನು ಉರಿಸಲಾಗುತ್ತದೆ. ಅಲ್ಲದೇ ಈ ದೇಗುಲದ ಸುವಾಸನೆ ಕೂಡ ಇತರೆ ಹಿಂದೂ ದೇಗುಲಗಳ ಸುಗಂಧಕ್ಕಿಂತ ವಿಭಿನ್ನವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q