nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗುರು ಪೂರ್ಣಿಮಾ: ಗುರು ಶಿಷ್ಯರ ಬಾಂಧವ್ಯ ಗೌರವದ ಆಚರಣೆ: ಮಹದೇವಸ್ವಾಮಿಗಳು

    July 10, 2025

    ಶರಣ ಹಡಪದ ಅಪ್ಪಣ್ಣರನ್ನು ನಿಜಸುಖಿ ಎಂದು ಬಸವಣ್ಣ ಕರೆಯುತ್ತಿದ್ದರು: ವೈ.ಡಿ.ರಾಜಣ್ಣ 

    July 10, 2025

    ಪೊಲೀಸರು ದೈಹಿಕ, ಮಾನಸಿಕ ಆರೋಗ್ಯದ ಕಡೆ ಗಮನ ನೀಡುವಲ್ಲಿ ಅಸಹಾಯಕರು: ಸಬ್ ಇನ್ಸ್ಪೆಕ್ಟರ್ ಆರ್. ಕಿರಣ್

    July 10, 2025
    Facebook Twitter Instagram
    ಟ್ರೆಂಡಿಂಗ್
    • ಗುರು ಪೂರ್ಣಿಮಾ: ಗುರು ಶಿಷ್ಯರ ಬಾಂಧವ್ಯ ಗೌರವದ ಆಚರಣೆ: ಮಹದೇವಸ್ವಾಮಿಗಳು
    • ಶರಣ ಹಡಪದ ಅಪ್ಪಣ್ಣರನ್ನು ನಿಜಸುಖಿ ಎಂದು ಬಸವಣ್ಣ ಕರೆಯುತ್ತಿದ್ದರು: ವೈ.ಡಿ.ರಾಜಣ್ಣ 
    • ಪೊಲೀಸರು ದೈಹಿಕ, ಮಾನಸಿಕ ಆರೋಗ್ಯದ ಕಡೆ ಗಮನ ನೀಡುವಲ್ಲಿ ಅಸಹಾಯಕರು: ಸಬ್ ಇನ್ಸ್ಪೆಕ್ಟರ್ ಆರ್. ಕಿರಣ್
    • ಪಾವಗಡದಲ್ಲಿ ಬೃಹತ್ ಪ್ರತಿಭಟನೆ: ರಾಷ್ಟ್ರೀಯ ಮಹಾ ಮುಷ್ಕರದ ಅಂಗವಾಗಿ ರಸ್ತೆಗಿಳಿದ ಕಾರ್ಮಿಕರು
    • ಸಮಾಜಕ್ಕೆ ದುಡಿಯುವವರಿಗೆ ರೋಟರಿ ಸಂಸ್ಥೆ ಅತ್ಯುತ್ತಮ ವೇದಿಕೆ: ವೀರಭದ್ರ ಶಿವಾಚಾರ್ಯ ಸ್ವಾಮೀಜಿ
    • ಶಾಸಕ ಅನೀಲ್ ಚಿಕ್ಕಮಾಧು ವಿರುದ್ಧ ಅಪಪ್ರಚಾರಕ್ಕೆ ಮುಖಂಡ ಶ್ರೀನಿವಾಸ ತಿರುಗೇಟು!
    • ವಿದ್ಯಾರ್ಥಿಗಳು ಕೆಟ್ಟ ಹವ್ಯಾಸಗಳಿಂದ ದೂರವಿರಬೇಕು: ಎಚ್.ಸಿ. ಶೋಭಾ
    • ಸರಗೂರು: ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಹೆಗ್ಗನೂರು ಸುಧೀರ್ ಆಯ್ಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್: ಎಡಿಸಿ
    ತುಮಕೂರು February 4, 2025

    ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್: ಎಡಿಸಿ

    By adminFebruary 4, 2025No Comments2 Mins Read
    thumakur

    ತುಮಕೂರು: ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಶಬ್ಬೀರ್ ಅಹಮದ್ ಅವರಿಗೆ ಸೂಚನೆ ನೀಡಿದರು.

    ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ಸಂಜೆ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮೊದಲಿಗೆ ಕಳೆದ ಸಭೆಯ ಅನುಪಾಲನಾ ವರದಿಯನ್ನು ಪರಿಶೀಲಿಸಿದರು.


    Provided by
    Provided by

    ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಲೀಡ್ ಬ್ಯಾಂಕ್, ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ಫಲಾನುಭವಿಗಳಿಗೆ ನೀಡಿರುವ ಸೌಲಭ್ಯಗಳ ವಿವರವನ್ನು ಪಡೆದರು.

    ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲಿಸಿದ ಅವರು, ಜಿಲ್ಲೆಯಲ್ಲಿರುವ ಉರ್ದು ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯಾ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದರೊಂದಿಗೆ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಿಯಾ ಯೋಜನೆ ತಯಾರಿಸಬೇಕೆಂದು ನಿರ್ದೇಶನ ನೀಡಿದರು.

    ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಅನುದಾನಿತ/ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ, ವಿದ್ಯಾರ್ಥಿವೇತನಕ್ಕಾಗಿ ನವೀಕರಣ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಮಾಹಿತಿ ಪಡೆದರು.

    ವಿವಿಧ ಇಲಾಖಾವಾರು ಭೌತಿಕ ಮತ್ತು ಆರ್ಥಿಕ ಪ್ರಗತಿ ಪರಿಶೀಲಿಸಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುಷ್ಠಾನ ಮಾಡುವ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಅಲ್ಪಸಂಖ್ಯಾತ ಫಲಾನುಭವಿಗಳ ಮಾಹಿತಿ ಪಡೆದರಲ್ಲದೆ, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿರುವ ಅಂಗನವಾಡಿಗಳ ಸಂಖ್ಯೆ ದಾಖಲಾದ ಮಕ್ಕಳ ಸಂಖ್ಯೆ ಮತ್ತು ಅಂಗನವಾಡಿ ಕಟ್ಟಡಗಳ ಮೂಲಸೌಕರ್ಯದ ಕುರಿತು ಮಾಹಿತಿಯನ್ನು ಸಲ್ಲಿಸಬೇಕೆಂದು ಸೂಚಿಸಿದರು.

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಶಬ್ಬೀರ್ ಅಹಮದ್ ಸಭೆಗೆ ಪ್ರಗತಿ ವಿವರದ ಮಾಹಿತಿ ನೀಡುತ್ತಾ, ಜೈನ್ ಸಮುದಾಯದ ವಸತಿ ಶಾಲೆಗೆ ಭೋಜನಾವೆಚ್ಚ ನೀಡಲು ಬೇಡಿಕೆ ಬಂದಿದೆ. ಕ್ರೆöÊಸ್ತ ಸಮುದಾಯಕ್ಕೆ ಮೀಸಲಿಟ್ಟಿರುವ ಸ್ಮಶಾನ ಭೂಮಿಯ ಆವರಣ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಆವರಣ ಗೋಡೆ ನಿರ್ಮಾಣಕ್ಕೆ ವಿಳಂಬವಾಗಿದೆ. ಪ್ರಕರಣ ಇತ್ಯರ್ಥವಾದ ಕೂಡಲೇ ಆವರಣ ಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.

    ಜಿಲ್ಲೆಯಲ್ಲಿ 2024–25ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ 4,257 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೊಸದಾಗಿ ಹಾಗೂ 21,910 ವಿದ್ಯಾರ್ಥಿಗಳು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಣೆ ನೀಡಿದರು.

    ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರಿವು ಸಾಲ ಯೋಜನೆಯಡಿ 34, ಶ್ರಮಶಕ್ತಿ ಯೋಜನೆಯಡಿ 11, ವಿದೇಶಿ ವ್ಯಾಸಂಗಕ್ಕಾಗಿ 1, ವೃತ್ತಿ ಪ್ರೋತ್ಸಾಹ ಯೋಜನೆಯಡಿ 11, ಟ್ಯಾಕ್ಸಿ ಸೌಲಭ್ಯಕ್ಕಾಗಿ 4 ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದರು.

    ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆಯಡಿ ಬಡತನ ರೇಖೆಗಿಂತ ಕೆಳಗಿರುವ 198 ಅಲ್ಪಸಂಖ್ಯಾತರ ಕುಟುಂಬಗಳಿಗೆ ಮನೆಗಳನ್ನು ನೀಡಲಾಗಿದ್ದು, ಹಕ್ಕು ಪತ್ರಗಳನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು.

    ಸಭೆಯಲ್ಲಿ ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮದ ನಾಮ ನಿರ್ದೇಶಿತ ಸದಸ್ಯರಾದ ಮಹಮದ್ ಕಲಿಮ್ ಉಲ್ಲಾ, ಜೆಪಿನ್ ಜಾಯ್, ಜೆ.ಪಿ. ಉಮೇಶ್ ಕುಮಾರ್, ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

     

    admin
    • Website

    Related Posts

    ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ: ಮಾಜಿ ಸಚಿವ ಹೇಳಿಕೆ

    July 9, 2025

    ತುಮಕೂರು ವಿವಿ 18ನೇ ಘಟಿಕೋತ್ಸವ: ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

    July 9, 2025

    ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ: 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿ!

    July 7, 2025
    Our Picks

    ಮಹಾತ್ಮ ಗಾಂಧಿಯವರ ಪ್ರತಿಮೆ ಅಪವಿತ್ರಗೊಳಿಸಲು ಯತ್ನ: ಆರೋಪಿಯ ಬಂಧನ

    July 8, 2025

    ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು

    July 5, 2025

    ಪತಿಯಿಂದಲೇ ಮಹಿಳಾ ಕೌನ್ಸಿಲರ್‌ ಬರ್ಬರ ಹತ್ಯೆ!

    July 4, 2025

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಗುರು ಪೂರ್ಣಿಮಾ: ಗುರು ಶಿಷ್ಯರ ಬಾಂಧವ್ಯ ಗೌರವದ ಆಚರಣೆ: ಮಹದೇವಸ್ವಾಮಿಗಳು

    July 10, 2025

    ಸರಗೂರು:  ಗುರು ಪೂರ್ಣಿಮಾವನ್ನು ಆಷಾಢ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಗುರು ಪೂರ್ಣಿಮಾವನ್ನು ಗುರು ಮತ್ತು ಶಿಷ್ಯರ ನಡುವಿನ ಬಾಂದವ್ಯವನ್ನು…

    ಶರಣ ಹಡಪದ ಅಪ್ಪಣ್ಣರನ್ನು ನಿಜಸುಖಿ ಎಂದು ಬಸವಣ್ಣ ಕರೆಯುತ್ತಿದ್ದರು: ವೈ.ಡಿ.ರಾಜಣ್ಣ 

    July 10, 2025

    ಪೊಲೀಸರು ದೈಹಿಕ, ಮಾನಸಿಕ ಆರೋಗ್ಯದ ಕಡೆ ಗಮನ ನೀಡುವಲ್ಲಿ ಅಸಹಾಯಕರು: ಸಬ್ ಇನ್ಸ್ಪೆಕ್ಟರ್ ಆರ್. ಕಿರಣ್

    July 10, 2025

    ಪಾವಗಡದಲ್ಲಿ ಬೃಹತ್ ಪ್ರತಿಭಟನೆ: ರಾಷ್ಟ್ರೀಯ ಮಹಾ ಮುಷ್ಕರದ ಅಂಗವಾಗಿ ರಸ್ತೆಗಿಳಿದ ಕಾರ್ಮಿಕರು

    July 10, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.