ಸರಗೂರು: ‘ಅರ್ಹರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು, ಸಂಬಂಧಿಸಿದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಚನ್ನೀಪುರ ಚೆಲುವರಾಜು ಹೇಳಿದರು.
ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಕುರಿತು ಬುಧವಾರ ದಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ತಾಲೂಕಿನ ಸುಮಾರು ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ.ಸೋಮವಾರದಿಂದ ಶನಿವಾರರವರಿಗೆ ಬಸ್ ಕಲ್ಪಿಸಿದೆ.ಅದರೆ ಭಾನುವಾರ ಬಂದರೆ ಬಸ್ ವ್ಯವಸ್ಥೆ ಸ್ಥಗಿತಗೊಂಡಿದ್ದಾರೆ. ಶಾಲೆಯ ಮಕ್ಕಳು ಬಸ್ ಸಂಚಾರ ಮಾಡುತ್ತಿದ್ದಾರೆ. ಅದರೆ ಸಣ್ಣ ಮಕ್ಕಳಿಗೆ ಅರ್ಥ ಚಾರ್ಜ್ ತೆಗೆದುಕೊಳ್ಳಬೇಕು ಅಂದರೆ ನಿಮ್ಮ ಕಂಡಕ್ಟರ್ ರವರು ಒಬ್ಬ ವ್ಯಕ್ತಿಗೆ ಯಾವ ಮಟ್ಟಿಗೆ ಚಾರ್ಜ್ ತೆಗೆದುಕೊಳ್ಳುತ್ತಿರಾ? ಅದೇ ರೀತಿ ಮಕ್ಕಳಿಗೆ ತೆಗೆದುಕೊಳ್ಳುತ್ತಿದ್ದಾರೆ ದೂರು ಬಂದಿದೆ. ನಿಮ್ಮ ಸಿಬ್ಬಂದಿಗಳಿಗೆ ಶಾಲೆಯ ಮಕ್ಕಳು ಮತ್ತು ಸಾರ್ವಜನಿಕರಿಗೆ ಅವರಿಗೆ ತಿಳುವಳಿಕೆ ನೀಡಬೇಕು. ಗ್ರಾಮಗಳಿಂದ ಹೆಂಗಸರು ಹಾಗೂ ಮಕ್ಕಳು ನಡೆದುಕೊಂಡು ಬಸ್ ನಿಲ್ದಾಣದಲ್ಲಿ ಇದ್ದರೆ. ಚಾಲಕರು ಬಸ್ ನಿಲ್ಲಿಸುವುದಿಲ್ಲ ಹಾಗೂ ವಿವಿಧ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಸರಿಯಿಲ್ಲ ಎಂದು ಜನರು ದೂರುತ್ತಿದ್ದಾರೆ’ ಎಂದು ಸದಸ್ಯರು ತಿಳಿಸಿದಾಗ, ಕೆಎಸ್ಸಾರ್ಟಿಸಿ ಸಿಬ್ಬಂದಿ ಪ್ರಕರಣಗಳ ಬಗ್ಗೆ ಗಮನಿಸುತ್ತೇವೆ’ ಎಂದು ಹೇಳಿದರು.
ಕಾರ್ಡ್ದಾರರಿಗೆ ಹಣ ಸಂದಾಯವಾಗುತ್ತಿದೆ. ಇ-–ಕೆವೈಸಿ ಮಾಡಿಸದವರಿಗೆ ಹಣ ಬಂದಿಲ್ಲ. ಕೆಲ ನ್ಯಾಯಬೆಲೆ ಅಂಗಡಿ ಉಸ್ತುವಾರಿಗಳು ತಮಗೆ ಅನುಕೂಲವಾದ ಸಮಯಕ್ಕೆ ಅಂಗಡಿ ತೆರೆದು ಅಕ್ಕಿ ವಿತರಣೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದು ಸಮಿತಿ ಸದಸ್ಯರು ಹೇಳಿದರು.
ಚೆಸ್ಕಾಂ ಅಧಿಕಾರಿ ‘ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತವಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಾರೆ.ನಿಮ್ಮ ಸಿಬ್ಬಂದಿಗಳು ನೋಂದಾಯಿಸಿ ಕೊಂಡಿಲ್ಲ’ ಎಂದು ತೊಂದರೆ ನೀಡುತ್ತಿದ್ದಾರೆ ಆರೋಪಿಸಿದ್ದಾರೆ. ಚೆಸ್ಕಾಂ ಎಇಇ ದೀಪಿಕ್ ಹೇಳಿದರು.
‘ಗೃಹಲಕ್ಷ್ಮಿ ಯೋಜನೆಯಡಿ ತಾಲ್ಲೂಕಿನಲ್ಲಿ ಸುಮಾರು ಅರ್ಜಿಗಳಲ್ಲಿ ಬಾಕಿ ಉಳಿದಿವೆ’ ಎಂದು ಸಿಡಿಪಿಓ ಸಿಬ್ಬಂದಿ ಗೆ ತಿಳಿಸಿದರು. ಮುಂದಿನ ಸಭೆಯೊಳಗೆ ಎಲ್ಲ ಅರ್ಜಿ ವಿಲೇವಾರಿ ಮಾಡಿ ಅರ್ಹರಿಗೆ ಯೋಜನೆ ಲಾಭ ಮುಟ್ಟಿಸಬೇಕು ಎಂದು ಸಮಿತಿ ಅಧ್ಯಕ್ಷ ಚೆಲುವರಾಜು ತಾಕೀತು ಮಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಧರನೇಶ್ ಮಾತನಾಡಿದರು. ಸಮಿತಿಯ ಅಧ್ಯಕ್ಷ ಚನ್ನೀಪುರ ಚೆಲುವರಾಜು ಹಾಗೂ ಸಮಿತಿಯ ನೂತನ 14 ಸದಸ್ಯರಿಗೆ ಸ್ವಾಗತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಹೇಂದ್ರ ಚನ್ನಗುಂಡಿ, ಮಂಜುನಾಥ ಕಾಳಿಹುಂಡಿ, ಶಿವರಾಜು ಕಂದೇಕಾಲ, ಭಾಗ್ಯಲಕ್ಷ್ಮೀ, ಭಾಗ್ಯಕೆಂಪಸಿದ್ದ ಹಾದನೂರು, ಮಹದೇವು ಕೊತ್ತೇಗಾಲ, ಬಿ.ಸಿ.ಮಹೇಶ್ ದಡದಹಳ್ಳಿ, ರವಿ ಬಸಾಪುರ, ದೇವರಾಜು ಲಂಕೆ, ಚಿಕ್ಕಣ್ಣ, ಮಾದೇಗೌಡ ದಡದಹಳ್ಳಿ, ಈರಾನಾಯಕ ಇಟ್ನ, ಮಹಮದ್ ಶುಯೋಬ್ ಸರಗೂರು, ದೇವದಾಸ್ ಹಿರೇಹಳ್ಳಿ, ಕಾರ್ಯನಿರ್ವಹಕಾಧಿರಿ ಧರನೇಶ್, ನೇರಗಾ ಸಂಯೋಜಕ ಅಧಿಕಾರಿ ಮಹದೇವಸ್ವಾಮಿ, ಸದ್ದಶಿವಯ್ಯ, ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296