ವಂದೇ ಭಾರತ್ ರೈಲಿನಲ್ಲಿ ಸಸ್ಯಾಹಾರದ ಬದಲು ಮಾಂಸಾಹಾರದ ಆಹಾರ ನೀಡಿದ ಹಿನ್ನಲೆಯಲ್ಲಿ ವೃದ್ಧ ಪ್ರಯಾಣಿಕರೊಬ್ಬರು ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಜುಲೈ 26ರಂದು ಈ ಘಟನೆ ನಡೆದಿದೆ. ಕಪಾಳಮೋಕ್ಷ ಮಾಡಿರುವ ವಿಡಿಯೋವನ್ನು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಹ–ಪ್ರಯಾಣಿಕ ಕುನಾಲ್ ವರ್ಮಾ ಅವರು ತಮ್ಮ ‘ಎಕ್ಸ್’ ಪುಟದಲ್ಲಿ ಹಂಚಿಕೊಂಡಿದ್ದು, ಘಟನೆಯನ್ನು ವಿವರಿಸಿದ್ದಾರೆ.
ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ದರೊಬ್ಬರು ಸಸ್ಯಾಹಾರವನ್ನು ಆರ್ಡರ್ ಮಾಡಿದ್ದರು. ಆದರೆ ತಪ್ಪಿ ಮಾಂಸಾಹಾರವನ್ನು ನೀಡಲಾಯಿತು. ಪ್ರಯಾಣಿಕ ಆಹಾರ ಪ್ಯಾಕೆಟ್ ಅನ್ನು ತೆರೆದು ಒಂದು ಭಾಗದಷ್ಟು ಆಹಾರವನ್ನು ಸೇವಿಸಿದ ನಂತರ ಮಾಂಸಹಾರವೆಂದು ತಿಳಿದಿದ್ದು ನಂತರ ಕೋಪಗೊಂಡ ಪ್ರಯಾಣಿಕ ರೈಲಿನಲ್ಲಿ ಗಲಾಟೆ ಮಾಡಿ ರೈಲಿನ ಕ್ಯಾಟರಿಂಗ್ ವಿಭಾಗಕ್ಕೆ ಕರೆ ಮಾಡಲು ಒತ್ತಾಯಿಸಿದ್ದಾರೆ.
ನಂತರ, ಸ್ವಲ್ಪ ಸಮಯದಲ್ಲಿ ಪೋಲೀಸ್ ಸಿಬ್ಬಂದಿಯೊಂದಿಗೆ ಅಡುಗೆ ವಿಭಾಗದ ಸಿಬ್ಬಂದಿಗಳು ಮತ್ತು ಊಟ ಬಡಿಸಿದ ಸಿಬ್ಬಂದಿ ಬಂದರು. ಸಿಬ್ಬಂದಿಯನ್ನು ನೋಡಿದ ಕೂಡಲೇ ವೃದ್ಧ ಪ್ರಯಾಣಿಕ ಆತನ ಮೇಲೆ ಕಪಾಳ ಮೋಕ್ಷ ಮಾಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾಶ್ ಚರಣ್, ವೃದ್ಧಗೆ ತಪ್ಪಾಗಿ ಆಹಾರ ಪೂರೈಕೆ ಮಾಡಲಾಗಿತ್ತು. ಅವರು ಅದನ್ನು ಸೇವಿಸಿರಲಿಲ್ಲ. ಆದರೂ ಅವರು ಕಪಾಳ ಮೋಕ್ಷ ಮಾಡಿದ್ದಾರೆ. ಸಮಸ್ಯೆಯನ್ನು ಬಳಿಕ ಪರಿಹರಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA