ಬೆಂಗಳೂರು : ಇತ್ತೀಚೆಗೆ ತಾಯಿಯೊಬ್ಬಳು ಸಿಲಿಕಾನ್ ಸಿಟಿಯ ಸಂಪಂಗಿರಾಮನಗರದಲ್ಲಿ 4ನೇಯ ಮಹಡಿಯಿಂದ ಬುದ್ಧಿಮಾಂದ್ಯ ಮಗುವನ್ನು ಎಸೆದು ತಾಯ್ತನಕ್ಕೆ ಅವಮಾನವಾಗುವ ಕೆಲಸ ಮಾಡಿದ್ಲು. ಆದರೆ ಈಗ ತಾಯಿಯ ಅಂತಃಕರಣ, ವಾತ್ಸಲ್ಯವನ್ನು ಎತ್ತಿ ಹಿಡಿಯುವ ಮನಮಿಡಿಯುವ ಪ್ರಸಂಗ ನಡೆದಿದೆ.
ಚಿಕಿತ್ಸೆಗಾಗಿ ಕರೆತಂದಿದ್ದ ಬುದ್ಧಿಮಾಂದ್ಯ ಬಾಲಕ ನಾಪತ್ತೆಯಾಗಿದ್ದು, ಒರಿಸ್ಸಾ ಮೂಲದ ಪೋಷಕರ, ಗೋಳಾಟ ಅಲೆದಾಟ ಹೇಳತೀರದಾಗಿದೆ. ಅವರ ಕಣ್ಣೀರು ಎಂತಹ ಕಲ್ಲು ಹೃದಯದವರನ್ನೂ ಕರಗಿಸುವಂತಿದೆ.
ಓರಿಸ್ಸಾ ಮೂಲದ ಪ್ರಸನ್ಜೀತ್ ದಾಸ್ (12) ಎನ್ನುವ ನಾಪತ್ತೆಯಾಗಿರುವ ಬಾಲಕನಾಗಿದ್ದಾನೆ.
ನಿಮಾನ್ಸ್ ನಲ್ಲಿ ಈತನ ಚಿಕಿತ್ಸೆಗಾಗಿ ಒರಿಸ್ಸಾದ ಬಾದ್ರಕ್ ನಿಂದ ಪೋಷಕರು ಆಗಸ್ಟ್ 9ರಂದು ಬೆಂಗಳೂರಿಗೆ ಬಂದಿದ್ದರು. ಸಿದ್ಧಾಪುರ ಠಾಣಾ ವ್ಯಾಪ್ತಿಯ ಎಸ್.ಎಸ್.ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ರೂಮ್ ನಿಂದ ಬಾಲಕ ಏಕಾಏಕಿ ತಪ್ಪಿಸಿಕೊಂಡಿದ್ದು, ಬಾಲಕನನ್ನು ಹುಡುಕಿ ಕೊಡುವಂತೆ ಪೋಷಕರು ಪೊಲೀಸ್ ಆಯುಕ್ತರ ಕಚೇರಿಗೂ ಬಂದು ಅಳಲು ತೋಡಿಕೊಂಡಿದ್ದಾರೆ.
ಅಬ್ದುಲ್ ಎನ್ನುವ ಆಟೋ ಚಾಲಕನ ಸಹಾಯದಿಂದ ನಿನ್ನೆಯಿಂದ ಅಲೆಯುತ್ತಿದ್ದಾರೆ. ಬಾಲಕ ಯಾರಿಗಾದ್ರೂ ಕಂಡಲ್ಲಿ 8792559232 ನಂಬರಿಗೆ ಕರೆ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy