ಚನ್ನಪಟ್ಟಣ: ನಮ್ಮದು ಅಭಿವೃದ್ಧಿ ರಾಜಕಾರಣ ಎದುರಾಳಿಗಳ ಸ್ಟಾಟರ್ಜಿ ಏನೇ ಆಗಿರಲಿ. ನಾನು ಯಾವುದಕ್ಕೂ ಪ್ರವೋಕ್ ಆಗೋದಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು.
ಚನ್ನಪಟ್ಟಣ ಕ್ಷೇತ್ರದ ಅಕ್ಕೂರು ಹೊಸಹಳ್ಳಿಯಿಂದ ಪ್ರಚಾರ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ ಅಕ್ಕೂರು, ಸಾದರಹಳ್ಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆದರು. ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ನನ್ನ ಜತೆ ಹೆಜ್ಜೆ ಹಾಕುತಿದ್ದಾರೆ. ಯಡಿಯೂರಪ್ಪ ಅವರೇ ನನ್ನ ಹೆಸರು ಘೋಷಣೆ ಮಾಡಿದ್ದಾರೆ. ದೇವೆಗೌಡರು ನಾಳೆಯಿಂದ ಗ್ರಾಮಪಂಚಾಯತಿ ಮಟ್ಟದಿಂದ ಪ್ರಚಾರ ಮಾಡಬೇಕಿತ್ತು. ಆದರೆ ಆರೋಗ್ಯ ಸ್ವಲ್ಪ ಸರಿ ಇಲ್ಲ ಎಂದು ತಿಳಿಸಿದರು.
ಇವತ್ತು 25 ಹಳ್ಳಿಗೆ ಹೋಗ್ತಾ ಇದ್ದೇನೆ 107 ಹಳ್ಳಿಗೆ ಇನ್ನೂ ಹೋಗುವುದು ಬಾಕಿ ಇದೆ ನಿಮ್ಮೆಲರ ಆಶೀರ್ವಾದ ಯುವಕ ನಿಖಿಲ್ ಮೇಲೆ ಇರಲಿ ಎಂದು ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296