nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ

    October 3, 2026

    ಎಡ ಜೇಬಿನಲ್ಲಿ ಮೊಬೈಲ್ ಇಟ್ಟರೆ ಹೃದಯಕ್ಕೆ ಅಪಾಯವೇ? ತಜ್ಞರು ನೀಡಿದ ಸ್ಪಷ್ಟನೆ ಇಲ್ಲಿದೆ

    October 3, 2026

    ಹೊಳೆನರಸೀಪುರ: ಮದ್ಯಪ್ರಿಯರ ಅಡ್ಡೆಯಾಗಿದ್ದ ಶ್ರವಣೂರು ಬಸ್ ನಿಲ್ದಾಣ; ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದ ಸ್ಥಳೀಯ ವ್ಯಕ್ತಿ!

    October 3, 2026
    Facebook Twitter Instagram
    ಟ್ರೆಂಡಿಂಗ್
    • ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ
    • ಎಡ ಜೇಬಿನಲ್ಲಿ ಮೊಬೈಲ್ ಇಟ್ಟರೆ ಹೃದಯಕ್ಕೆ ಅಪಾಯವೇ? ತಜ್ಞರು ನೀಡಿದ ಸ್ಪಷ್ಟನೆ ಇಲ್ಲಿದೆ
    • ಹೊಳೆನರಸೀಪುರ: ಮದ್ಯಪ್ರಿಯರ ಅಡ್ಡೆಯಾಗಿದ್ದ ಶ್ರವಣೂರು ಬಸ್ ನಿಲ್ದಾಣ; ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದ ಸ್ಥಳೀಯ ವ್ಯಕ್ತಿ!
    • ತುಮಕೂರು ವಿವಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ: ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕರೆ
    • ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಗೆ ಬಿಗ್ ಶಾಕ್: ಟೆಸ್ಟ್ ಕನಸು ಅಪೂರ್ಣ!
    • ಭೂಕಬಳಿಕೆ ಆರೋಪ: ಡಿಕೆಶಿ ಕುಟುಂಬಕ್ಕೆ ಸೇರಿದ 200 ಎಕರೆಗೂ ಅಧಿಕ ಭೂಮಿ ವೀಕ್ಷಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ!
    • ರೈತರಿಗೆ ಬರ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗಿ: ಬಿ.ವೈ. ವಿಜಯೇಂದ್ರ ಸವಾಲು
    • ತುಮಕೂರಿನಲ್ಲಿ 5 ಸಾವಿರ ಕೋಟಿ ಹೂಡಿಕೆಗೆ ರೆನೈಸ್ಸಾನ್ಸ್ ಆಸಕ್ತಿ: ಎಂ.ಬಿ.ಪಾಟೀಲ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » “ಬಹುಜನರಿಗೆ ಸೈದ್ಧಾಂತಿಕ ಧೈರ್ಯ ತುಂಬಿದ ಅಂಬೇಡ್ಕರ್ ವಾದಿ ಪಿ.ಡೀಕಯ್ಯ”: ಡಾ.ವೆಂಕಟಸ್ವಾಮಿ
    ರಾಜ್ಯ ಸುದ್ದಿ July 31, 2022

    “ಬಹುಜನರಿಗೆ ಸೈದ್ಧಾಂತಿಕ ಧೈರ್ಯ ತುಂಬಿದ ಅಂಬೇಡ್ಕರ್ ವಾದಿ ಪಿ.ಡೀಕಯ್ಯ”: ಡಾ.ವೆಂಕಟಸ್ವಾಮಿ

    By adminJuly 31, 2022No Comments2 Mins Read
    p dikaiha

    ಪದ್ಮುಂಜ: ಪಿ.ಡೀಕಯ್ಯರವರಿಗೆ ಹುಟ್ಟೂರ ಶ್ರದ್ಧಾಂಜಲಿ

    ಬೆಳ್ತಂಗಡಿ:  ಬಹುಜನ ಸಮಾಜಕ್ಕೆ ಸೈಸಮಾಜದಲ್ಲಿ ಮೌಲ್ಯಾಧಾರಿತ ಬದಲಾವಣೆಗಾಗಿ ಚಳುವಳಿಯಲ್ಲಿ ತೊಡಗಿದ್ದ ಪಿ.ಡೀಕಯ್ಯರವರು ಅಪ್ಪಟ ಅಂಬೇಡ್ಕರ್ ವಾದಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರ ಮೇಲಾಗುತ್ತಿದ್ದ  ಶೋಷಣೆ, ದೌರ್ಜನ್ಯ, ಅನ್ಯಾಯ,ಅಸಮಾನತೆಗಳ ವಿರುದ್ಧ ಗಟ್ಟಿ ಧ್ವನಿ ಎತ್ತಿ ಹೋರಾಡಿ ದಲಿತ, ಹಿಂದುಳಿದ ಶೋಷಿತ ಸಮುದಾಯಗಳ ವಿಮೋಚನೆಗಾಗಿ  ಶ್ರಮಿಸಿ ರಾಜ್ಯಾದ್ಯಂತ ಸಾವಿರಾರು ಬೆಂಬಲಿಗರನ್ನು ಅಭಿಮಾನಿಗಳನ್ನು ಸಂಪಾದಿಸಿ ಚಳುವಳಿಯನ್ನು ಮುನ್ನಡೆಸುತ್ತಾ ಬಹುಜನ ಸಮಾಜದಲ್ಲಿ ಸೈದ್ಧಾಂತಿಕ ಧೈರ್ಯವನ್ನು ತುಂಬಿದವರು ಎಂದು ಹಿರಿಯ ಅಂಬೇಡ್ಕರ್ ವಾದಿ, ಪಿ.ಡೀಕಯ್ಯರವರ ಚಳುವಳಿಯ ಒಡನಾಡಿ ಸಮತಾ ಸೈನಿಕದಳ ಸ್ಥಾಪಕ , ಆರ್.ಪಿ.ಐ. ರಾಜ್ಯಾಧ್ಯಕ್ಷ ಡಾ.ವೆಂಕಟ ಸ್ವಾಮಿ ಹೇಳಿದರು.

    ಇತ್ತೀಚೆಗೆ ಪರಿನಿಬ್ಬಾಣ ಹೊಂದಿದ ಹಿರಿಯ ಅಂಬೇಡ್ಕರ್ ವಾದಿ, ಬಹುಜನ ಸಮಾಜ ಚಳುವಳಿಯ ನೇತಾರ ಪಿ.ಡೀಕಯ್ಯ ಅವರಿಗೆ ಪದ್ಮುಂಜ  ಸಂಗಮ್ ವಿಹಾರ್ ನಲ್ಲಿ ನಡೆದ ಹುಟ್ಟೂರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಜು.30ರಂದು ಮಾತನಾಡಿದರು.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಬತ್ತರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಪ್ರಾರಂಭವಾದ ದಿನಗಳಲ್ಲಿ ಮಂಗಳೂರಿನಲ್ಲಿ ಹೋರಾಟಗಳನ್ನು ರೂಪಿಸುವುದು ಕಷ್ಟವೆಂದು ಕಾಣಿಸಿದಾಗ ಬೆಳ್ತಂಗಡಿ ತಾಲೂಕಿನಲ್ಲಿ  ಜಿಲ್ಲಾ ಕೇಂದ್ರವೆಂಬ ರೀತಿಯಲ್ಲಿ ಅನೇಕ ಹೋರಾಟಗಳ ನೇತೃತ್ವವಹಿಸಿಕೊಂಡು ಒಬ್ಬ ಹೋರಾಟಗಾರನಾಗಿ ರಾಜ್ಯ,  ರಾಷ್ಟ್ರಮಟ್ಟದಲ್ಲಿ ತಮ್ಮ ಸಂಘಟನಾ ಚತುರತೆಯಿಂದಲೂ ಜ್ಞಾನದಿಂದಲೂ ಗುರುತಿಸಿಕೊಂಡು ನಾಯಕರಾಗಿ ಬೆಳೆದ ಪಿ. ಡೀಕಯ್ಯ  ಅವರ ಅಗಲುವಿಕೆಯಿಂದ  ಕುಟುಂಬಕ್ಕೆ ಸಹಿಸಲಾಗದ ನೋವು,  ಬಹುಜನ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದರು.

    ಹಿರಿಯ ಸಾಮಾಜಿಕ ಚಿಂತಕ ,  ಹೋರಾಟಗಾರ ಲೋಲಾಕ್ಷ ಮಂಗಳೂರು ಅವರು ನುಡಿ ನಮನ ಸಲ್ಲಿಸುತ್ತಾ ಮಾತನಾಡಿ, ಬಹುಜನ ಸಮಾಜ ಚಳುವಳಿ ನೇತಾರ ಅಂಬೇಡ್ಕರ್ ವಾದಿ ಪಿ.ಡೀಕಯ್ಯ ಅವರ  ಸಾವಿನ ಸುತ್ತ ಇರುವ  ಸಂಶಯಗಳು ನಿವಾರಣೆಯಾಗಿ ಸಾವಿಗೆ ನ್ಯಾಯ ಸಿಗಲಿ ಎಂದರು.

    ಪದ್ಮುಂಜ ಸಿ.ಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ನಿವೃತ್ತ ಮ್ಯಾನೇಜರ್ ತಿಮ್ಮಯ್ಯ ಗೌಡ , ಡಾ.ರಾಜಾರಾಮ್, ಎಲ್ ಐ ಸಿ ಅಧಿಕಾರಿ, ಬಿ.ಎಸ್.ಪಿ. ರಾಜ್ಯ ಮುಖಂಡ ಕಾಂತಪ್ಪ ಆಲಂಗಾರ್, ಪ.ಜಾ., ಪ.ಪಂ. ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ನ್ಯಾಯವಾದಿ ಶಿವಕುಮಾರ್ , ಬೆಳ್ತಂಗಡಿ ಠಾಣಾ  ಪೊಲೀಸ್ ವೆಂಕಪ್ಪ ಪಿ.ಎಸ್., ಹಿರಿಯರಾದ  ಬೀರಣ್ಣ ಸಾಧನ, ಅಣ್ಣು ಸಾಧನ, ಪೊಡಿಯ ಬಾಂಗೇರು, ಎಲ್ ಐ ಸಿ ಅಧಿಕಾರಿ ಮೋಹನ್ ರಾಮನಗರ, ಸಾಮಾಜಿಕ ಹೋರಾಟಗಾರ ಶೇಖರ್ ಎಲ್,  ಬಾಬು ಎಂ. ಬೆಳಾಲು  ಮುಂತಾದವರು  ನುಡಿ ನಮನ ಸಲ್ಲಿಸುತ್ತಾ ಪಿ.ಡೀಕಯ್ಯರವರ  ಆಶಯಗಳ ಈಡೇರಿಕೆಗೆ ಶ್ರಮಿಸೋಣ ಎಂದರು.

    ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ನುಡಿ ನಮನ ಸಲ್ಲಿಸಿದರು. ಬಂಗಾಡಿ ಕಾನದ – ಕಟದ ಜನ್ಮಭೂಮಿ ಶೋಧನಾ ಸಮಿತಿ ಗೌರವಾಧ್ಯಕ್ಷ ವೆಂಕಣ್ಣ ಕೊಯ್ಯೂರು, ಬಿ.ಎಸ್.ಪಿ ತಾಲೂಕು ಉಸ್ತುವಾರಿ ಸಂಜೀವ ನೀರಾಡಿ, ಬರಹಗಾರ ಸತೀಶ್ ಕಕ್ಯಪದವು ಉಪಸ್ಥಿತರಿದ್ದರು. ಅಚುಶ್ರೀ ಬಾಂಗೇರು ಕಾರ್ಯಕ್ರಮ ನಿರ್ವಹಿಸಿದರು.

     

    ಕಾರ್ಯಕ್ರಮಕ್ಕೆ  ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪಿ.ಡೀಕಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆಯೊಂದಿಗೆ  ಗೌರವ ಸಲ್ಲಿಸಿ  ಅವರ  ಕುಟುಂಬಕ್ಕೆ ಸಾಂತ್ವನ ನೀಡಿದರು. ಈ ಸಂದರ್ಭ ಪಿ.ಡೀಕಯ್ಯ ಅವರ ನಿಗೂಢ ಸಾವಿನ ಬಗ್ಗೆ ನೀಡಿರುವ ದೂರಿಗೆ ಸಂಬಂಧಿಸಿ ಪ್ರಕರಣದ  ತನಿಖೆಯನ್ನು  ಚುರುಕುಗೊಳಿಸಲು  ಕ್ರಮಕೈಗೊಳ್ಳುವಂತೆ ಶಾಸಕರಲ್ಲಿ ಕುಟುಂಬದ ಸದಸ್ಯರು  ವಿನಂತಿಸಿಕೊಂಡಿದ್ದು ಈ ಬಗ್ಗೆ ಶಾಸಕರು ಭರವಸೆ ನೀಡಿದರು.

    admin
    • Website

    Related Posts

    ಭೂಕಬಳಿಕೆ ಆರೋಪ: ಡಿಕೆಶಿ ಕುಟುಂಬಕ್ಕೆ ಸೇರಿದ 200 ಎಕರೆಗೂ ಅಧಿಕ ಭೂಮಿ ವೀಕ್ಷಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ!

    October 3, 2026

    ರೈತರಿಗೆ ಬರ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗಿ: ಬಿ.ವೈ. ವಿಜಯೇಂದ್ರ ಸವಾಲು

    October 3, 2026

    ಚುನಾವಣೆ ಗೆಲ್ಲಲು ಹಣ, ಮದ್ಯ, ಜಾತಿ ಲೆಕ್ಕಾಚಾರ? ಸಿದ್ದರಾಮಯ್ಯ ಹೇಳಿದ್ದೇನು?

    October 2, 2026

    Comments are closed.

    Our Picks

    ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಗೆ ಬಿಗ್ ಶಾಕ್: ಟೆಸ್ಟ್ ಕನಸು ಅಪೂರ್ಣ!

    October 3, 2026

    ಫ್ಲೈದುಬೈ ವಿಮಾನ ದಾಳಿ: ಪ್ರಧಾನಿ ಮೋದಿಯೊಂದಿಗೆ ಮಾತನಾಡಿದ ಗಾಯಗೊಂಡ ಪೈಲಟ್ ಸ್ಮಿತ್ ಮಚ್ಚಾರ್ ಹೇಳಿದ್ದೇನು ?

    October 2, 2026

    ಇಂದಿನಿಂದ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್, ವಿಮಾನ ಇಂಧನ (ATF) ದರ ಏರಿಕೆ

    October 1, 2026

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ

    October 3, 2026

    ಕೊರಟಗೆರೆ: ತಾಲೂಕಿನಲ್ಲಿ ಹೈನುಗಾರಿಕೆ ಮಾಡುವ ರೈತರನ್ನು ಆರ್ಥಿಕವಾಗಿ ಪ್ರಬಲಗೊಳಿಸಲು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ, ಕರ್ನಾಟಕ…

    ಎಡ ಜೇಬಿನಲ್ಲಿ ಮೊಬೈಲ್ ಇಟ್ಟರೆ ಹೃದಯಕ್ಕೆ ಅಪಾಯವೇ? ತಜ್ಞರು ನೀಡಿದ ಸ್ಪಷ್ಟನೆ ಇಲ್ಲಿದೆ

    October 3, 2026

    ಹೊಳೆನರಸೀಪುರ: ಮದ್ಯಪ್ರಿಯರ ಅಡ್ಡೆಯಾಗಿದ್ದ ಶ್ರವಣೂರು ಬಸ್ ನಿಲ್ದಾಣ; ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದ ಸ್ಥಳೀಯ ವ್ಯಕ್ತಿ!

    October 3, 2026

    ತುಮಕೂರು ವಿವಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ: ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕರೆ

    October 3, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.