ಮಾವೋವಾದಿ ಪೀಡಿತ ರಾಯಗಢದ ಜನರ ಏಳಿಗೆಗೆ ಶ್ರಮಿಸಿದ್ದ ಸಾಮಾಜಿಕ ಕಾರ್ಯಕರ್ತೆ ಹಾಗೂ ಪದ್ಮಶ್ರೀ ಪುರಸ್ಕøತೆ ಶಾಂತಿ ದೇವಿ ಅವರು ಒಡಿಶಾದ ಗುನುಪುರ್‍ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಅವರು ಟ್ವಿಟ್ ಮೂಲಕ ಸಂತಾಪ ಕೋರಿದ್ದು, ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಾಗಿದ್ದ ಶಾಂತಿದೇವಿ ಅವರು ಸುಮಾರು 6 ದಶಕಕ್ಕೂ ಹೆಚ್ಚು ಕಾಲ ಸಾಮಾಜಿಕ ಸೇವೆಗಳಲ್ಲಿ ಗುರುತಿಸಿಕೊಂಡಿದ್ದು, ಬಡವರು ಹಾಗೂ ಹಿಂದು ಳಿದವರ ಧ್ವನಿಯಾಗಿದ್ದ ಅವರು ತಳಮಟ್ಟ ಜನಾಂಗದ ಹೆಣ್ಣು ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯು ಲಭಿಸಿದೆ. ಅವರು ನಮ್ಮನ್ನಗಲಿದ್ದರೂ ಕೂಡ ಅವರ ಸೇವೆ ಸದಾ ಅಮರವಾಗಿರುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, ನ್ಯಾಯ ಯುತ ಹಾಗೂ ಆರೋಗ್ಯಕರ ಸಮಾಜವನ್ನು ರೂಪಿಸುವಲ್ಲಿ ಶಾಂತಿ ದೇವಿ ಜೀ ಅವರ ಸೇವೆ ಅಪಾರ, ಬಡವರು ಹಾಗೂ ಹಿಂದುಳಿದವರ ಧ್ವನಿಯಾಗಿ ಅವರು ಸದಾ ಜನರ ಮನಸ್ಸಿನಲ್ಲಿರುತ್ತಾರೆ, ಅವರ ನಿಧನದಿಂದ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತನು ನೀಡಲಿ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕೇಂದ್ರ ರಕ್ಷಣಾ ಸಚಿವ ಅಮಿತ್‍ಶಾ ಸೇರಿದಂತೆ ಹಲವು ರಾಜಕೀಯ ಮುಖಂಡರು, ಸಮಾಜ ಕಾರ್ಯಕರ್ತರು, ಶಾಂತಿದೇವಿ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ವರದಿ: ಆಂಟೋನಿ ಬೇಗೂರು