ಬೆಳಗಾವಿ: ಹಳ್ಳ ದಾಟಲು ಹೋಗಿ ಬೈಕ್ ಸಮೇತ ವ್ಯಕ್ತಿ ನೀರಲ್ಲಿ ಕೊಚ್ಚಿ ಹೋದ ಘಟನೆ ಬೆಳಗಾವಿಯ ತಾರಿಹಾಳ ಬಳಿ ನಡೆದಿದೆ
ಪಂಚಾಯತ್ ಸಿಬ್ಬಂದಿ ಸುರೇಶ್ ನಿಜಗುಣಿ ಗುಂಡನ್ನವರ್ (50) ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಎಂದು ಗುರುತಿಸಲಾಗಿದೆ. ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನು ಬೈಕ್ ಮೂಲಕ ದಾಟಲು ಮುಂದಾಗಿದ್ದೇ ದುರ್ಘಟನೆಗೆ ಕಾರಣವಾಗಿದೆ.
ಪಂಚಾಯತ್ ನಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಹೋಗುವಾಗ ಘಟನೆ ನಡೆದಿದೆ. ಸದ್ಯ ಸುರೇಶ್ ಗಾಗಿ ಅಗ್ನಿಶಾಮಕದಳ ಸಿಬ್ಬಂದಿ, ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC