ತುಮಕೂರು: ಜುಲೈ ದೇಶದಲ್ಲಿ ಇಂಧನದ ಅಬಾಧತೆಯನ್ನು ತಪ್ಪಿಸುವ ಸಲುವಾಗಿ ಕಾರುಗಳ ತಯಾರಿಕೆಯಲ್ಲಿ ಪರ್ಯಾಯ ಸಂಶೋಧನೆ ನಡೆದಿದ್ದು ಈ ಹಿನ್ನೆಲೆಯಲ್ಲಿ ಟಾಟಾ ಕಂಪನಿ ವತಿಯಿಂದ ಪರಿಸರ ಸ್ನೇಹಿಯಾಗಿರುವ ಟಾಟಾ ಟಿಗೋರ್ ಇವಿ ಮತ್ತು ಟಾಟಾ ನೆಕ್ಸಾನ್ ಇವಿ ಎಂಬ ನೂತನ ಕಾರನ್ನು ತುಮಕೂರು ನಗರದ ಬಿ.ಹೆಚ್.ರಸ್ತೆ, ಬಂಡಿಮನೆ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಶ್ರೀ ಆಟೋ ಕಾರ್ ಷೋರೂಮ್ ನಲ್ಲಿ ಇಂದು ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಅವರು ಮಾತನಾಡಿ, ನಮ್ಮ ದೇಶದಲ್ಲೇ ತಯಾರಾಗುತ್ತಿರುವ ಈ ಕಾರುಗಳು ವಿಶ್ವಕ್ಕೆ ಮಾದರಿಯಾಗಲಿವೆ ಎಂದು ಹೇಳಿದರಲ್ಲದೇ, ಮುಂದಿನ ದಿನಗಳಲ್ಲಿ ಈ ಕಾರುಗಳನ್ನೇ ಎಲ್ಲಾ ಜನರು ಬಳಕೆ ಮಾಡಲು ಮುಂದಾಗುತ್ತಾರೆಂದು ತಿಳಿಸಿದರು, ಅಲ್ಲದೇ ನಮ್ಮ ತುಮಕೂರಿನಲ್ಲಿ ಈ ಕಾರುಗಳನ್ನು ಲೋಕಾರ್ಪಣೆಗೊಳ್ಳುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆಂದು ತಿಳಿಸಿದರು.
ಇನ್ನು ಈ ಕಾರುಗಳು ಸಂಪೂರ್ಣ ವಿದ್ಯುತ್ ಚಾಲಿತ ಕಾರುಗಳಾಗಿದ್ದು, ಸದ್ಯಕ್ಕೆ ತುಮಕೂರಿನ ಶ್ರೀಆಟೋ (ಟಾಟಾ ಷೋರೂಂ)ನಲ್ಲಿ ಮತ್ತು ಹಿರೇಹಳ್ಳಿ ಸಮೀಪದಲ್ಲಿ ಚಾರ್ಜಿಂಗ್ ಯೂನಿಟ್‌ಗಳಿದ್ದು, ಸದ್ಯದಲ್ಲಿಯೇ ತುಮಕೂರಿನ ಪ್ರಮುಖ ಭಾಗಗಳಲ್ಲಿ ಚಾರ್ಜಿಂಗ್ ಯೂನಿಟ್‌ಗಳನ್ನು ಸ್ಥಾಪಿಸಲಾಗುವುದೆಂದು ತಿಳಿಸಿದರು, ಇನ್ನೂ ಈ ಕಾರುಗಳನ್ನು ಗ್ರಾಹಕರು ತಮ್ಮ ಮನೆಯಲ್ಲಿಯೇ ಮೊಬೈಲ್ ಚಾರ್ಜಿಂಗ್ ಮಾದರಿಯಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಒಮ್ಮೆ ಪೂರ್ಣ ಚಾರ್ಜ್ ಆಗಲು ಸದ್ಯಕ್ಕೆ ಅದಕ್ಕೆ ತಗಲುವ ವೆಚ್ಚವು 400 ರಿಂದ 450 ತಗಲಬಹುದೆಂದು ತಿಳಿಸಿದರು, ಜೊತೆಗೆ ಒಮ್ಮೆ ಪೂರ್ಣ ಚಾರ್ಜ್ ಆದರೆ ಕನಿಷ್ಠ 280 ರಿಂದ 320 ಕಿ.ಮೀ. ಓಡುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ತಿಳಿಸಿದರು.
ಈ ಕಾರುಗಳ ಲೋಕಾರ್ಪಣೆಯ ಸಂದರ್ಭದಲ್ಲಿ ತುಮಕೂರು ಉಪ-ವಿಭಾಗಾಧಿಕಾರಿ ಅಜಯ್, ಶ್ರೀ ಆಟೋ ಷೋರೂಂನ ಮಾಲೀಕರುಗಳಾದ ಎಂ.ವಿ.ವಿಶ್ವನಾಥ್, ಶ್ರೀನಿವಾಸ್, ಸತ್ಯನಾರಾಯಾಣ್, ಗಿರೀಶ್, ಜನರಲ್ ಮ್ಯಾನೇಜರ್ ಪದ್ಮನಾಭ್, ಅನಿತ, ರಾಜಶೇಖರ್, ಸಂತೋಷ್, ಶಿವಸ್ವಾಮಿ, ಬೆಸ್ಕಾಂ ಅಧಿಕಾರಿಗಳಾದ ಪ್ರಶಾಂತ್, ನಾಗರಾಜು, ವರೀನ್ ಶಾಲೆ ಚೇರ್ಮನ್ ಕೃಷ್ಣಯ್ಯ, ಲಕ್ಷ್ಮೀನಾರಾಯಣ ರೆಡ್ಡಿ, ಯೋಗೀಶ್ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz