nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ: ತುಮಕೂರು ಜಿಲ್ಲಾಸ್ಪತ್ರೆ ಕಟ್ಟಡ ತೆರವುಗೊಳಿಸುವ ಕಾಮಗಾರಿಗೆ ಡಿಸಿಎಂ ಚಾಲನೆ

    June 9, 2026

    ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ: ಜೂ.15ರೊಳಗೆ ಹೆಸರು ನೋಂದಾಯಿಸಿ

    June 9, 2026

    ತುಮಕೂರು: ಹಿರಿಯ ನಾಗರಿಕರ ಗುರುತಿನ ಚೀಟಿ ವಿಶೇಷ ಅಭಿಯಾನ

    June 9, 2026
    Facebook Twitter Instagram
    ಟ್ರೆಂಡಿಂಗ್
    • ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ: ತುಮಕೂರು ಜಿಲ್ಲಾಸ್ಪತ್ರೆ ಕಟ್ಟಡ ತೆರವುಗೊಳಿಸುವ ಕಾಮಗಾರಿಗೆ ಡಿಸಿಎಂ ಚಾಲನೆ
    • ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ: ಜೂ.15ರೊಳಗೆ ಹೆಸರು ನೋಂದಾಯಿಸಿ
    • ತುಮಕೂರು: ಹಿರಿಯ ನಾಗರಿಕರ ಗುರುತಿನ ಚೀಟಿ ವಿಶೇಷ ಅಭಿಯಾನ
    • ತುಮಕೂರು: ಜೂ. 13–14ರಂದು ಆಟೋ ಎಕ್ಸ್ ಪೋ
    • ವಿಶ್ವ ವಿಕಲಚೇತನರ ದಿನಾಚರಣೆ: ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
    • ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ: ಜೂ.30 ಕೊನೆಯ ದಿನ
    • ನೀವೂ ಬಿಗ್ ಬಾಸ್ ಮನೆಗೆ ಹೋಗಬೇಕಾ? ಆಡಿಷನ್ ನಲ್ಲಿ ಭಾಗವಹಿಸಲು ಏನು  ಮಾಡಬೇಕು?
    • ಪಾವಗಡ: ಜೂ.25 ರಂದು ಕೆ.ಸೇವಾಲ್ ಪುರದಲ್ಲಿ ಶ್ರೀ ತೊಳಜಸತ್ತಿ (ಲಕ್ಷ್ಮೀ) ದೇವಾಲಯದ 4ನೇ ವರ್ಷದ ವಾರ್ಷಿಕೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಾವಗಡ: ಮಾಜಿ ಸಚಿವ, ಹಿರಿಯ ರಾಜಕಾರಣಿ ವೆಂಕಟರಮಣಪ್ಪ ನಿಧನ: ಗಣ್ಯರಿಂದ ಅಂತಿಮ ದರ್ಶನ
    ಪಾವಗಡ May 29, 2026

    ಪಾವಗಡ: ಮಾಜಿ ಸಚಿವ, ಹಿರಿಯ ರಾಜಕಾರಣಿ ವೆಂಕಟರಮಣಪ್ಪ ನಿಧನ: ಗಣ್ಯರಿಂದ ಅಂತಿಮ ದರ್ಶನ

    By adminMay 29, 2026No Comments2 Mins Read

    ಪಾವಗಡ: ತಾಲ್ಲೂಕಿನ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ (82) ಅವರು ಶುಕ್ರವಾರ ಬೆಳಗಿನ ಜಾವ 5:00 ಗಂಟೆಗೆ ನಿಧನರಾಗಿದ್ದಾರೆ.

    ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.


    Provided by
    Provided by

    ವೆಂಕಟರಮಣಪ್ಪನವರು ಪಾವಗಡ ಕ್ಷೇತ್ರದಿಂದ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.  2008ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದ್ದರು. ತಮ್ಮ ಸರಳತೆ ಹಾಗೂ ಜನಸ್ನೇಹಿ ನಡವಳಿಕೆಯಿಂದ ಸದಾ ಜನರ ಮಧ್ಯೆ ಇರುತ್ತಿದ್ದ ವೆಂಕಟರಮಣಪ್ಪನವರು, ಈ ಭಾಗದ ಜನರಿಂದ ಪ್ರೀತಿಯಿಂದ “ಎಲ್ಲರ ಮನೆಯ ಮನಸ್ಸಿನ ದೊಡ್ಡಪ್ಪ” ಎಂದೇ ಕರೆಯಲ್ಪಡುತ್ತಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಗಣ್ಯ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.

    ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾವಗಡದ ಗುರುಭವನ ಮೈದಾನದಲ್ಲಿ ಇರಿಸಲಾಗಿತ್ತು. ತದನಂತರ ಸಂಜೆ ವೇಳೆ ಅವರ ಸ್ವಗ್ರಾಮವಾದ ಹನುಮಂತನಹಳ್ಳಿಯಲ್ಲಿನ ತೋಟಕ್ಕೆ ಕೊಂಡೊಯ್ಯಲಾಗಿದ್ದು, ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

    ವೆಂಕಟರಮಣಪ್ಪನವರ ಅಂತಿಮ ದರ್ಶನ ಪಡೆಯಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಾಜಿ ಸಚಿವ ಸೊಗಡು ಶಿವಣ್ಣ, ಆಂಧ್ರಪ್ರದೇಶದ ಮಾಜಿ ಮಂತ್ರಿ ರಘುವೀರ ರೆಡ್ಡಿ, ಎಸ್.ಪಿ ಅಶೋಕ್, ತಹಸೀಲ್ದಾರ್ ರವಿ, ಎ.ಸಿ ಗೋಟೂರು ಶಿವಪ್ಪ, ವರದರಾಜು, ಇ.ಓ ಮಧುಸೂದನ್, ಗುಬ್ಬಿ ಶಾಸಕ ಶ್ರೀನಿವಾಸ್, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಮಡಕಶಿರಾದ ಮಾಜಿ ಶಾಸಕರುಗಳಾದ ಈರಣ್ಣ ಹಾಗೂ ಕೆ.ಎಂ ತಿಮ್ಮರಾಯಪ್ಪ ಆಗಮಿಸಿದ್ದರು.

    ಇವರೊಂದಿಗೆ ಮುಖಂಡರಾದ ಮಾನಂ ವೆಂಕಟಸ್ವಾಮಿ, ಎನ್. ಎನ್ ಈರಣ್ಣ, ರೈತ ಸಂಘದ ನರಸಿಂಹ ರೆಡ್ಡಿ, ಪೂಜಾರಪ್ಪ, ಆರ್.ಸಿ ಅಂಜಿನಪ್ಪ, ಬಲರಾಮ್ ರೆಡ್ಡಿ, ನಾಗೇಶ್ ಕೊತ್ತೂರು, ಜಿ.ವಿ ಬಲರಾಮ್, ರವಿ, ರಾಜೇಶ್ ಸೇರಿದಂತೆ ತಾಲ್ಲೂಕಿನ ನೂರಾರು ಗಣ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಸಹಸ್ರಾರು ಅಭಿಮಾನಿಗಳು ನೆರೆದು ಕಣ್ಣೀರಿನ ವಿದಾಯ ಕೋರಿದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಪಾವಗಡ: ರಂಗಸಮುದ್ರದಲ್ಲಿ ವಾಲ್ಮೀಕಿ ಮೂರ್ತಿಗೆ ವಿಶೇಷ ಪೂಜೆ

    June 8, 2026

    ಪಾವಗಡದಲ್ಲಿ ವಿಶ್ವ ಪರಿಸರ ದಿನಾಚರಣೆ: ‘ಗಿಡ ಬೆಳೆಸುವುದು ನಮ್ಮ ಕರ್ತವ್ಯ’: ಸಿಡಿಪಿಓ ಸುನಿತಾ

    June 6, 2026

    ಸಹನಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ವಿವಿಧ ಸ್ಪರ್ಧೆಗಳು, ಬಹುಮಾನ ವಿತರಣೆ

    June 5, 2026

    Leave A Reply Cancel Reply

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ: ತುಮಕೂರು ಜಿಲ್ಲಾಸ್ಪತ್ರೆ ಕಟ್ಟಡ ತೆರವುಗೊಳಿಸುವ ಕಾಮಗಾರಿಗೆ ಡಿಸಿಎಂ ಚಾಲನೆ

    June 9, 2026

    ತುಮಕೂರು: ಸಾರ್ವಜನಿಕರ ಬೇಡಿಕೆಯಂತೆ ಆಧುನಿಕ ಸೌಲಭ್ಯಗಳ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಜನಸೇವೆಗೆ ಸಿಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್…

    ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ: ಜೂ.15ರೊಳಗೆ ಹೆಸರು ನೋಂದಾಯಿಸಿ

    June 9, 2026

    ತುಮಕೂರು: ಹಿರಿಯ ನಾಗರಿಕರ ಗುರುತಿನ ಚೀಟಿ ವಿಶೇಷ ಅಭಿಯಾನ

    June 9, 2026

    ತುಮಕೂರು: ಜೂ. 13–14ರಂದು ಆಟೋ ಎಕ್ಸ್ ಪೋ

    June 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.