ಹಿರಿಯೂರು: ನಗರದ ಪ್ರಧಾನ ರಸ್ತೆಯ ಭಾರತ್ ಪೆಟ್ರೋಲಿಯಂ ನ ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರಿಗೆ ಮೋಸ ನಡೆಯುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದು, 300 ರೂಪಾಯಿ ಪೆಟ್ರೋಲ್ ಹಾಕಿ ಎಂದರೆ, 200 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು 100 ರೂಪಾಯಿ ವಂಚನೆ ಮಾಡುತ್ತಿದ್ದಾರೆ ಎಂದು ಗ್ರಾಹಕರು ಅಳಲು ತೋಡಿಕೊಂಡೊದ್ದಾರೆ.
ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ನಡುವೆ ಪೆಟ್ರೋಲ್ ಬಂಕ್ ನ ಸಿಬ್ಬಂದಿ ಜನರಿಗೆ ಮೋಸ ಮಾಡುವ ಮೂಲಕ ಸತಾಯಿಸುತ್ತಿದ್ದಾರೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಾದ ಬಾಲಕಿಯರ ಗಿರೀಶ ಸ್ಕೂಲ್ ಪಕ್ಕದಲ್ಕಿರುವ ಭಾರತ್ ಪೆಟ್ರೋಲಿಯಂ ಬಂಕ್ ವಿರುದ್ಧ ಇಂತಹದ್ದೊಂದು ಗಂಭೀರವಾದ ಆರೋಪ ಕೇಳಿ ಬಂದಿದೆ.
ಈ ಕುರಿತು ನಮ್ಮ ತುಮಕೂರು ಜೊತೆಗೆ ಮಾತನಾಡಿದ ಗ್ರಾಹಕರೊಬ್ಬರು, ಬೆಳಗ್ಗೆ ಹಾಲು ತೆಗೆದುಕೊಳ್ಳೋಣ ಎಂದು ಬಂದೆ. 300 ರೂಪಾಯಿ ಪೆಟ್ರೋಲ್ ಹಾಕಿ ಎಂದಿದ್ದೆ. ಅವರು 200 ರೂಪಾಯಿ ಪೆಟ್ರೋಲ್ ಹಾಕಿ, 300 ರೂಪಾಯಿ ತೆಗೆದುಕೊಂಡಿದ್ದಾರೆ. ನಾವು ಏನಾದರೂ ಕೆಲಸ ಮೇಲೆ ಬಂದಿರುತ್ತೇವೆ. ತಕ್ಷಣಕ್ಕೆ ನಾವು ಗಮನಿಸುವುದಿಲ್ಲ. ಈ ಅವಕಾಶ ಬಳಸಿಕೊಂಡು ಈ ರೀತಿಯ ಕೃತ್ಯ ನಡೆಸುತ್ತಾರೆ ಎಂದು ಅವರು ಆರೋಪಿಸಿದರು.
ಇನ್ನೋರ್ವ ಗ್ರಾಹಕ ಮಾತನಾಡಿ, ಈ ಪೆಟ್ರೋಲ್ ಬಂಕ್ ಗೆ ನಾವು ಹೆಚ್ಚಾಗಿ ಬರುತ್ತೇವೆ. ಈ ರೀತಿಯ ಘಟನೆಗಳಿಂದ ಪೆಟ್ರೋಲ್ ಬಂಕ್ ಗ್ರಾಹಕರ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಪೆಟ್ರೋಲ್ ಬಂಕ್ ಮಾಲಿಕರು ಇಂತಹ ಘಟನೆಗಳ ಕುರಿತು ಎಚ್ಚರಿಕೆವಹಿಸಬೇಕಿದೆ ಎಂದು ಒತ್ತಾಯಿಸಿದರು.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


