ತುಮಕೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಪಿಎಂಸಿ ಬಟವಾಡಿ ಶಾಖೆಯಲ್ಲಿ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಅಡಿಯಲ್ಲಿ ನೋಂದಾಯಿತ ಲಕ್ಷ್ಮೀದೇವಿ ಅವರ ನಿಧನದ ನಂತರ, ಯೋಜನೆಯ ಪ್ರಕಾರ 2 ಲಕ್ಷ ರೂ. ಪರಿಹಾರವನ್ನು ಕುಟುಂಬದ ನಾಮಿನಿ ಸದಸ್ಯರಿಗೆ ಚೆಕ್ ಮೂಲಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ SBI ರಿಜನಲ್ ಮ್ಯಾನೇಜರ್ (AGM) ಸುರೇಂದ್ರ ಟಿ.ಕೆ., ಶಾಖಾ ಮ್ಯಾನೇಜರ್ ಎಸ್. ಅಮೀರ್ ಉನ್ನೀಸ, RBO ಫೈನಾನ್ಸಿಯಲ್ ಇನ್ಕ್ಲೂಷನ್ ಮ್ಯಾನೇಜರ್ ರಾಹುಲ್, ಹಾಗೂ ಇತರ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಯೋಜನೆಯ ಅಡಿಯಲ್ಲಿ ನೀಡುವ ಈ ಪರಿಹಾರವು ನಿಧನ ಹೊಂದಿದವರ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲ ನೀಡಲು ಮಹತ್ವದ ಪಾತ್ರ ವಹಿಸುತ್ತಿದೆ. ಸ್ಥಳೀಯರು ಹಾಗೂ ಕುಟುಂಬ ಸದಸ್ಯರು ಬ್ಯಾಂಕ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx