ತಿಪಟೂರು: ರಾಜೇಂದ್ರರವರು ಅವಕಾಶವಾದಿ ರಾಜಕಾರಣ ಮಾಡದೆ, ಜನರ ಮಧ್ಯದಲ್ಲಿದ್ದುಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದರಿಂದಾಗಿ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು, ಬೇರೆ ಪಕ್ಷಗಳ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ಪ್ರಾಮಾಣಿಕವಾಗಿ ಅಭಿವೃದ್ಧಿಯ ಕೆಲಸಗಳಿಗೆ ಮನ್ನಣೆ ಕೊಟ್ಟು ರಾಜೇಂದ್ರರವರನ್ನು ಗೆಲ್ಲಿಸಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷರಾದ ಕುಂದೂರು ರವಿ ಹೇಳಿದರು.
ಆರ್.ರಾಜೇಂದ್ರ ಅವರ ಗೆಲುವಿನ ಹಿನ್ನೆಲೆಯಲ್ಲಿ ಕೆ.ಬಿ. ಕ್ರಾಸ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ ವೇಳೆ ಮಾತನಾಡಿದ ಅವರು, ಈ ಗೆಲುವು ಪ್ರಾಮಾಣಿಕ ಹಾಗೂ ನಿಷ್ಪಕ್ಷವಾದ ರಾಜಕಾರಣಕ್ಕೆ ಹಾಗೂ ಪ್ರಜಾಪ್ರಭುತ್ವದ ಆಶಯಕ್ಕಾನುಗುಣವಾಗಿ ಸಂದ ಗೆಲುವು ಎಂದರು.
ರಾಜೇಂದ್ರರ ಗೆಲುವಿಗೆ ಜಿಲ್ಲೆಯ ಎಲ್ಲಾ ಹಾಲಿ, ಮಾಜಿ ಶಾಸಕರು, ಸಂಸತ್ ಸದಸ್ಯರು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಮಾಜಿ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ಈ ಗೆಲುವು ಎಲ್ಲರಿಗೂ ಸಲ್ಲಬೇಕು ಎಂದು ಅವರು ಇದೇ ವೇಳೆ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಕುಂದೂರು ಮುರಳಿ, ಕುಂದೂರು ಉಮೇಶ್, ಹಟ್ನ ದಯಾನಂದ್, ಬಿಳಿಗೆರೆ ಮಹಾದೇವ್, ಬಿಳಿಗೆರೆ ಪರಮೇಶ್, ಬಿಳಿಗೆರೆ ಮಲ್ಲಿಕಾರ್ಜುನ್, ಸ್ವಾಲಾಪೂರ ಪರಮೇಶ್, ಬೀರಸಂದ್ರ ಮಹೇಶ್, ಚಿ.ನಾ.ಹಳ್ಳಿ ಸಣ್ಣಮುದ್ದಪ್ಪ ಮತ್ತಿತರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ನಿರಂಜನ್ ಎಂ.ಎಸ್. ತಿಪಟೂರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700